ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇತ್ತೀಚೆಗೆ ಶಿವಮೊಗ್ಗದಲ್ಲಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದ್ದ ಮುಸುಕುಧಾರಿ ದರೋಡೆಕೋರ ಚಡ್ಡಿ ಗ್ಯಾಂಗ್ ನಿನ್ನೆ ರಾತ್ರಿ ಭದ್ರಾವತಿಯ ಪ್ರತಿಷ್ಠಿತ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಹಳೇ ನಗರ ವ್ಯಾಪ್ತಿಯ ಸಿದ್ಧಾರೂಢ ನಗರದಲ್ಲಿ ಈ ಚಡ್ಡಿ ಗ್ಯಾಂಗ್ ನಸುಕಿನ ಸುಮಾರು 2.30ರವೇಳೆಗೆ ಕಾಣಿಸಿಕೊಂಡಿದ್ದು, ಸಿಸಿಟಿವಿಯಲ್ಲಿ ದಾಖಲಾಗಿದೆ.
ಸಿದ್ದರೂಢನಗರದ ಡಾ. ಅಶ್ವತ್ಥ ನಾರಾಯಣ ಎಂಬುವರ ಮನೆಯ ಕಾಂಪೌಂಡ್ ಹಾರಿಕೊಂಡು ಒಳ ಬಂದಿರುವ ದುಷ್ಕರ್ಮಿಗಳು ಹೊರಭಾಗದಲ್ಲಿ ತಪಾಸಣೆ ನಡೆಸಿದ್ದಾರೆ. ಮನೆಯವರು ಎಚ್ಚರಗೊಂಡ ಲೈಟ್ ಹಾಕಿದ್ದಾರೆ. ಇದರಿಂದ ಸದರಿ ತಂಡ ಸ್ಥಳದಿಂದ ಕಾಲ್ಕಿತ್ತಿದೆ ಎಂದು ವರದಿಯಾಗಿದೆ.

ಇದೇ ವೇಳೆ ಬಡಾವಣೆಯಲ್ಲಿ ಹಳೇನಗರ ಠಾಣೆ ಬೀಟ್ ಪೊಲೀಸ್ ಸಿಬ್ಬಂದಿಗಳಾದ ಜೈನುಲ್ಲಾ, ಮಂಜುನಾಥ್ ಎಂಬುವರು ಬೈಕ್ ನಲ್ಲಿ ಆಗಮಿಸಿದ್ದಾರೆ. ಇವರನ್ನು ಕಂಡ ದುಷ್ಕರ್ಮಿಗಳು, ಭದ್ರಾ ನದಿಯ ಮೂಲಕ ಪರಾರಿಯಾಗಿದ್ದಾರೆ. 
ಸದರಿ ಘಟನೆಯ ನಂತರ ಭದ್ರಾವತಿ ಪೊಲೀಸರು ಹೈಅಲರ್ಟ್ ಆಗಿದ್ದು, ಡಕಾಯಿತರ ತಂಡದ ಪತ್ತೆಗೆ ವ್ಯಾಪಕ ಕ್ರಮಕೈಗೊಂಡಿದ್ದಾರೆ. ಗಸ್ತು ವ್ಯವಸ್ಥೆ ಹೆಚ್ಚಿಸಿರುವ ಮಾಹಿತಿಗಳು ತಿಳಿದುಬಂದಿದೆ. ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ನಾಗರಿಕರ ಭದ್ರತೆಗೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post