ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅತ್ಯಂತ ವೈಭವದಿಂದ ಶುಭಾರಂಭಗೊಂಡಿರುವ ಈ ವರ್ಷದ ನವರಾತ್ರಿ ಉತ್ಸವದಲ್ಲಿ ಬೆಂಗಳೂರಿನ ನಟನ ತರಂಗಿಣಿ ಅಕಾಡೆಮಿಯ ಮೂಲಕ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳಿಂದ ಹಾಗೂ ಯುವಪ್ರತಿಭೆಗಳಿಂದ ಸಂಗೀತ ಹಾಗೂ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಸಂಗೀತ, ನೃತ್ಯ ಕಲಿಕೆಗಳಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ, ಯುವ ಕಲಾವಿದರಿಗೆ ಉತ್ತಮ ವೇದಿಕೆಗಳನ್ನು ಕಲ್ಪಿಸುವ ಸದಾಶಯದಿಂದ ಕಳೆದ ವರ್ಷದಿಂದ ನಟನ ತರಂಗಿಣಿ ಅಕಾಡೆಮಿ ಉತ್ಸವ ಆರಂಭಿಸಿದೆ.
ಅಂಜನಾಪುರದ ಶ್ರೀವೆಂಕಟೇಶ್ವರ ದೇವಸ್ಥಾನದ ಜಂಟಿ ಸಹಭಾಗಿತ್ವದೊಂದಿಗೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದು, ಅಕಾಡೆಮಿಯ ಮೂಲಕ ಈ ಎರಡನೆ ವರ್ಷದ ಉತ್ಸವ ಪ್ರಾರಂಭವಾಗಿದೆ.ಮೊದಲ ದಿನದ ಕಾರ್ಯಕ್ರಮ ನವರಾತ್ರಿ ಪಾಡ್ಯದಂದು ದೇವಿಶ್ರೀ ಶೈಲಪುತ್ರಿಯ ಅನುಗ್ರಹದಿಂದ ಆರಂಭವಾಯಿತು. ನಟನ ತರಂಗಿಣಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಹಿಕಾ ನಾಗದೀಪ್ವೀಣೆ ಕಛೇರಿಯನ್ನು ಪ್ರಸ್ತುತ ಪಡಿಸಿದರು. ಇವರಿಗೆ ಮೃದಂಗದಲ್ಲಿ ಶ್ರೀಪವನ್ ಎಕ್ಕಡಕ ಸಹಕಾರ ನೀಡಿದರು.
ಉದಯೋನ್ಮುಖ ಪ್ರತಿಭೆ ಕು.ಅಹಿಕಾ ಅವರು ಹಾಡುಗಾರಿಕೆ, ವೀಣೆ ಹಾಗೂ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಓದಿನಲ್ಲೂ ಮುಂದಿರುವ ಈ ವಿದ್ಯಾರ್ಥಿನಿ ಒಂಭತ್ತನೆಯ ತರಗತಿಯಲ್ಲಿ ಕಲಿತ್ತಿದ್ದು, ಸಮಯವನ್ನು ತೂಗಿಸಿಕೊಂಡು ಈ ಎಲ್ಲ ಪ್ರಕಾರಗಳಲ್ಲೂ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಕಾರ್ಯಕ್ರಮಗಳನ್ನೂ ನೀಡುತ್ತಿದ್ದಾರೆ. ಒಳ್ಳೆಯ ಕಛೇರಿ ನೀಡಿದ ಅಹಿಕಾ ಹಾಗೂ ಶ್ರೀನಿಕ್ಷಿತ್ ಪುತ್ತೂರ್, ಅವರ ಶಿಷ್ಯ ಶ್ರೀಪವನ್ ಅವರಿಗೆ ಅಭಿನಂದನೆಗಳು.
ಇನ್ನು, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರೂ ಹಾಗೂ ಬಹುಮುಖ ಪ್ರತಿಭೆ ವಿ. ಮನೋಹರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಕಲಾವಿದರನ್ನು ಆಶೀರ್ವದಿಸಿದುದು ಇಂದಿನ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.
ಮನೋಹರ್ ಅವರು ಈ ಚಟುವಟಿಕೆಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮತ್ಸಾö್ಯಲಂಕಾರದಲ್ಲಿ ವಿಜೃಂಭಿಸಿದ ವೆಂಕಟೇಶ್ವರನ ಕೃಪೆ ಎಲ್ಲರಿಗೂ ಆಗಲಿ ಎಂದು ಹಾರೈಸುತ್ತ ನಾಳಿನ ಕಾರ್ಯಕ್ರಮವನ್ನು ಎದುರು ನೋಡೋಣವೇ!?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post