ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಸಹಯೋಗದೊಂದಿಗೆ ಪತ್ರಿಕಾ ದಸರಾವನ್ನು #Dasara ಸೆ.28 ರಂದು ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 5 ಗಂಟೆಗೆ ಕುವೆಂಪು ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಪತ್ರಿಕಾ ದಸರಾ ಉದ್ಘಾಟಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು.
ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ಸಂಘದ ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್ ಉಪಸ್ಥಿತರಿರುವರು.
ಮಹಾನಗರ ಪಾಲಿಕೆ ಆಯುಕ್ತರಾದ ಕೆ. ಮಾಯಣ್ಣಗೌಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಿಸುವರು.
ಪತ್ರಕರ್ತರು- ಸಿಬ್ಬಂದಿಗೆ ಸ್ಪರ್ಧೆ:
ಪತ್ರಿಕಾ ದಸರಾ ಅಂಗವಾಗಿ ಸೆ.28ರ ಬೆಳಿಗ್ಗೆ 10 ಗಂಟೆಗೆ ಪತ್ರಿಕಾ ಭವನದಲ್ಲಿ ಪತ್ರಕರ್ತರು ಹಾಗೂ ಪತ್ರಿಕಾ ಕಛೇರಿ ಸಿಬ್ಬಂದಿಗಳಿಗೆ ಪಿಕ್ ಅಂಡ್ ಸ್ಪೀಚ್, ಪಿಂಕ್ ಅಂಡ್ ಆಕ್ಟ್, ರಸ ಪ್ರಶ್ನೆ ಸ್ಪರ್ಧೆ, ಗಾಯನ ( ಕರೋಕೆ ), ಸ್ವ ರಚಿತ ಕವನ ವಾಚನ ಸ್ಪರ್ಧೆ ನಡೆಯುವುದು.
ಈ ಸ್ಪರ್ಧೆಗಳಿಗೆ ಸುವರ್ಣ ಟಿ.ವಿ. ವಾಹಿನಿಯ ಜಿಲ್ಲಾ ವರದಿಗಾರ ರಾಜೇಶ್ ಕಾಮತ್ ಚಾಲನೆ ನೀಡುವರು.
ವ್ಯಂಗ್ಯಚಿತ್ರ ಪ್ರದರ್ಶನವನ್ನು ಹಿರಿಯ ವ್ಯಂಗ್ಯಚಿತ್ರಕಾರ ಕೃಷ್ಣಮೂರ್ತಿ ರಾಮಧ್ಯಾನಿ ಉದ್ಘಾಟಿಸುವರು. ಛಾಯಾಚಿತ್ರ ಪ್ರದರ್ಶನವನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ಎಸ್.ಕೆ. ದಿನೇಶ್ ಉದ್ಘಾಟಿಸುವರು.
ನಾಮಫಲಕ ಅನಾವರಣ:
ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು – ಪ್ರಧಾನ ಕಾರ್ಯದರ್ಶಿಗಳ ಪಾರಂಪರಿಕ ಫಲಕವನ್ನು ಹಿರಿಯ ಪತ್ರಕರ್ತರಾದ ಎಸ್. ಚಂದ್ರಕಾAತ್ ಹಾಗೂ ಬಂಡಿಗಡಿ ನಂಡುAಜಪ್ಪ ಅನಾವರಣ ಗೊಳಿಸುವರು.
ಬಹುಮಾನ: ಈಗಾಗಲೇ ಪತ್ರಿಕಾ ದಸರಾದ ಭಾಗವಾಗಿ ಸಾರ್ವಜನಿಕರಿಗೆ ಪದಬಂಧ ಸ್ಪರ್ಧೆ, ರೀಲ್ಸ್ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ನಡೆಸಲಾಗಿದೆ.
ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸೆ.28ರ ಸಂಜೆ ಪತ್ರಿಕಾ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.
ಈ ಸಮಾರಂಭಕ್ಕೆ ಪತ್ರಕರ್ತರು, ಪತ್ರಿಕಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post