ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಜನತೆಗೆ ಮೂಳೆ ಮತ್ತು ಕೀಲು ಸಮಸ್ಯೆಗಾಗಿ ಅಂತರಾಷ್ಟ್ರೀಯ ಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶದಿಂದ ತಿಲಕ್ ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸನ್ ಬೋನ್ ಮತ್ತು ಸ್ಪೈನ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನು ಸೆ.28ರ ಬೆಳಿಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಸ್ಪೈನ್ ಅಂಡ್ ಆಥೋಪಿಡಿಕ್ ಸರ್ಜನ್ ಡಾ. ಆಕಾಶ್ ಹೊಸತೋಟ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಮತ್ತು ಅನುಭವಿ ಮೂಳೆ ಚಿಕಿತ್ಸೆ ತಜ್ಞರ ತಂಡದೊಂದಿಗೆ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ವ್ಯಾಪಕ ಶ್ರೇಣಿಯ ಮೂಳೆ ಮತ್ತು ಕೀಲು ಸ್ಥಿತಿಗಳಿಗೆ ವೈಯಕ್ತಿಕಗೊಳಿಸಿದ ಆರೈಕೆ ನೀಡಲಾಗುವುದು ಎಂದರು.
ಹೆಚ್ಚಿನ ಚಿಕಿತ್ಸೆ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಹೊರರಾಜ್ಯಕ್ಕೆ ತೆರಳುವುದು ಜನಸಾಮಾನ್ಯರಿಗೆ ಆರ್ಥಿಕವಾಗಿ ಹೆಚ್ಚಿನ ಹೊರಯಾಗುತ್ತಿತ್ತು. ಬೇರೆಡೆ ಸಿಗುವ ಎಲ್ಲಾ ಅತ್ಯಾಧುನಿಕ ಗುಣಮಟ್ಟದ ವೈದ್ಯರು ಮತ್ತು ವೈದ್ಯಕೀಯ ಸೌಲಭ್ಯ ನಮ್ಮ ಆಸ್ಪತ್ರೆಯಲ್ಲಿ ದೊರೆಯಲಿದೆ ಎಂದರು.
ಪುನರ್‍ವಸತಿ ಕೇಂದ್ರದೊಂದಿಗೆ ಸುಧಾರಿತ ಬೆನ್ನುಮೂಳೆಯ ಆರೈಕೆ ಘಟಕ. ಕ್ರೀಡಾಪಟುಗಳಿಗೆ ಸೇವೆ ಸಲ್ಲಿಸುವ ಸುಧಾರಿತ ಆರ್ತೋಸ್ಕೋಪಿ ಮತ್ತು ಕ್ರೀಡಾ ವೈದ್ಯಕೀಯ ಘಟಕ, ಸುಧಾರಿತ ಕೀಲು ಆರೈಕೆ ಘಟಕ, ಮಕ್ಕಳ ಮೂಳೆ ಚಿಕಿತ್ಸಾ ಘಟಕ, ಸಂಯೋಜಿತ ಯೋಗ ಮತ್ತು ಪುನರ್ವಸತಿ ಘಟಕ ಸೇರಿದಂತೆ ಹಲವಾರು ಮೂಲ ಸೌಕರ್ಯಗಳು ಲಭ್ಯವಿದೆ ಎಂದರು.
ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ವೀರಾಪುರ ಹಿರೇಮಠದ ಡಾ. ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಆಸ್ಪತ್ರೆಯನ್ನು ಮತ್ತು ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ನಿರ್ದೇಶಕ ಪ್ರೊ.ಡಾ. ಸತೀಶ್ ರುದ್ರಪ್ಪ, ಅತ್ಯಾಧುನಿಕ ಆಪರೇಷನ್ ಥಿಯೇಟರ್‍ಗಳ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಬಿ.ಎಲ್. ಶಂಕರ್ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಪೂಜಾ ಆಕಾಶ್, ಡಾ. ದೀಪಕ್ ಉಪ್ಪಿನ್, ಡಾ. ಭರತ್ ಹೆಚ್.ಡಿ., ಡಾ. ಅಭಿಷೇಕ್ ಎಂ.ಬಿ. ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post