ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಕಾಗಿದೆ… ನಾನು ಇನ್ಮುಂದೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ, ನಿರ್ಮಾಪಕಿ ಗೀತಾ ಶಿವರಾಜಕುಮಾರ್ #Geetha Shivarajkumar ಹೇಳಿದರು.
ನಗರದ ಬಂಜಾರ ಕನ್ವೇಷನ್ ಹಾಲ್’ನಲ್ಲಿ ಜರುಗಿದ ಅಧಿಕಾರ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಪದಗ್ರಹಣ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರು ಅಬಲೆಯರಲ್ಲ, ಅವರು ದೊಡ್ಸ ಸಾಧನೆ ಮಾಡುವುದಕ್ಕೆ ಸಿದ್ದ ಎನ್ನುವುದಕ್ಕೆ ಇಲ್ಲಿದ್ದವರು ಸಾಕ್ಷಿ. ಶ್ವೇತಾ ಅವರನ್ನು ನಾನು ಬಲ್ಲೆ. ನನ್ನ ಎರಡು ಚುನಾವಣೆಗಳಲ್ಲಿ ಪ್ರಚಾರಕ್ಕೆ ಬಂದಿದ್ದರು. ತುಂಬಾ ಚಿಕ್ಕ ಹುಡುಗಿ ಎಂದರು.
ನಾನು ಯಾವುದೇ ಚುನಾವಣೆಗೂ ನಿಲ್ಲುದಿಲ್ಲ. ಆದರೆ ನಾನು ನಿಮ್ಮೊಂದಿಗೆ ನಿರಂತರವಾಗಿ ಇರುವೆ. ಅಧಿಕಾರ ಅಂದರೆ ಒಬ್ಬರದಲ್ಲ, ಎಲ್ಲರೂ ಸೇರಿ ಕೆಲಸ ಮಾಡಿ, ಸಚಿವರನ್ನು ಹಿಡಿದು ಒಳ್ಳೆಯ ಕೆಲಸ ಮಾಡಿಸಿಕೊಳ್ಳಿ ಎಂದರು.
ಎಷ್ಟೆ ಕಷ್ಟವಿದ್ದರೂ ನನ್ನ ತಮ್ಮ ಜತೆಗಿದ್ದಾನೆ. ಇವತ್ತು ನಮ್ಮ ಮನಸ್ಸಿಗೆ ನೆಮ್ಮದಿ, ತಾಳ್ಮೆ ಇದ್ದರೆ ಆತನೆ ಕಾರಣ ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಮಾತನಾಡಿ, ಇದೊಂದು ಅತ್ಯಂತ ಸಂತೋಷದ ದಿನ. ತುಂಬಾಹೆಮ್ಮೆ ಎನಿಸುತ್ತದೆ. ಮಂಜುನಾಥ್ ಭಂಡಾರಿಅವರ ಮೂಲಕ ಮಹಿಳೆಯರೆ ವೇದಿಕೆಯಲ್ಲಿ ಇರುವಂತಾಗಿದೆ. ಇದಕ್ಕೆಲ್ಲಾ ಕಾರಣರಾದ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಅಧಿಕಾರ ಹಸ್ತಾಂತರಿಸಿದ ಬಳಿಕ ಜಿಲ್ಲಾ ಮಹಿಳಾಕಾಂಗ್ರೆಸ್ ನ ನಿಕಟಪೂರ್ವ ಅಧ್ಯಕ್ಷೆ ಅನಿತಾ ಕುಮಾರಿ ಮಾತನಾಡಿ, ಮಹಿಳೆ ಅನೇಕ ನೋವುಗಳ ಮೂಲಕ ಸಾರ್ವ ಜನಿಕ ಕ್ಷೇತ್ತಕ್ಕೆ ಬರುತ್ತಾಳೆ.ಅಧಿಕಾರಕ್ಕೆ ಮಾತ್ರವೇ ಅಲ್ಲ, ಸಾರ್ವಜನಿಕ ಜೀವನದಲ್ಲಿ ತನ್ನನು ತಾನು ತೊಡಗಿಸಿಕೊಳ್ಳಬೇಕೆನ್ನುವ ಕಾರಣಕ್ಕೆ ನಾವೆಲ್ಲ ಇಲ್ಲಿ ಬಂದಿದ್ದೇವೆ. ನಮಗೆ ಉತ್ತೇಜ ಭಾಳಾ ಮುಖ್ಯ ಎಂದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮದು ಬಂಗಾರಪ್ಪ, ಕೆಪಿಸಿಸಿ ಅಧ್ಯಕ್ಷೆ ಮಂಜುನಾಥ್ ಭಂಡಾರಿ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಆಧ್ಯಕ್ಷ್ ಆರ್.ಎಂ. ಮಂಜುನಾಥ್ ಗೌಡ, ರಾಜ್ಯ ಜವಳಿ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್, ಯೋಗೇಶ್, ಎಸ್. ರವಿಕುಮಾರ್ ಸೇರಿದಂತೆ ಹಲವರು ವೇದಿಕೆ ಮುಂಭಾಗ ಕುಳಿತು ಬೆಂಬಲಿಸಿದ್ದು ವಿಶೇಷವಾಗಿತ್ತು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಅವರ ಅಧಿಕಾರ ಸ್ವೀಕಾರ ಸಮಾರಂಭವನ್ನು ಸಚಿವ ಮಧು ಬಂಗಾರಪ್ಪ ಅವರು ವೇದಿಕೆ ಕೆಳಗಿ ದ್ದೇ ಸಮಾರಂಭ ಉದ್ಘಾಟಿಸಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಹಾರ ಭಾರದ ಶೋಭೆಯಲ್ಲ, ಅದು ಜವಾವ್ದಾರಿ ಇದನ್ನು ಅರಿತಾಗ ಮಾತ್ರ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ. ಮಹಿಳಾ ಘಟಕ ಈಗ ಸದೃಢವಾಗಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಅವರು ಇಂದು ವಿಶೇಷವಾಗಿ ಅಧಿಕಾರ ಸ್ವೀಕರಿಸಿದರು. ಇದು ಕಾಂಗ್ರೆಸ್ ಪಕ್ಷ ದಲ್ಲಿಯೇ ಹೊಸದು. ಆ ಮೂಲಕ ಕಾಂಗ್ರೆಸ್ ನಲ್ಲಿ ಹೊಸಬಸಂಪ್ರಾದಯಕ್ಕೆ ಮುನ್ನುಡಿ ಬರೆಯಲಾಯಿತು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಶ್ವೇತಾ ಬಂಡಿ ಅವರಿಗೆ ಕಾಂಗ್ರೆಸ್ ಪಕ್ಷ ದ ಧ್ವಜ ನೀಡುವ ಮೂಲಕ ಅಧಿಕಾರದ ಜವಾಬ್ದಾರಿ ನೀಡಿದರು. ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಸಾಥ್ ನೀಡಿದರು, ಈ ಹಿಂದಿನ ಅಧ್ಯಕ್ಷೆ ಅನಿತಾಕುಮಾರಿ ಇದಕ್ಕೆ ಸಾಕ್ಷಿಯಾದರು.
ಜಿ.ಪಲ್ಲವಿ, ಅನಿತಾ ಕುಮಾರಿ, ಪುಷ್ಪಾ ಶಿವಕುಮಾರ್, ರೇಖಾ ರಂಗನಾಥ್ ಮತ್ತಿತರರು ಇದ್ದರು.
ಶೋಷಿತ ಮಹಿಳೆಯರಿಗೆ ಧ್ವನಿಯಾಗುವೆ: ಶ್ವೇತಾಬಂಡಿ
ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಅವರು ಮಾತನಾಡಿ, ಇದೊಂದು ಐತಿಹಾಸಿಕ ಕ್ಷ ಣ. ತುಂಗಾ ಭದ್ರ ನದಿಗಳ ಶಕ್ತಿಯ ಹಾಗೆ ಮಹಿಳಾ ಶಕ್ತಿಯ ನಡುವೆ ನಾನು ಅಧಿಕಾರ ಸ್ವೀಕರಿಸಿದ್ದು ಅತ್ಯಂತ ಐತಿಹಾಸಿಕ ಕ್ಷ ಣ. ನಾನು ಇದೊಂದು ಅಧಿಕಾರ ಎಂದು ಭಾವಿಸುವುದಿಲ್ಲ. ಇದೊಂದು ಜವಾಬ್ದಾರಿ ಎಂದುಭಾವಿಸುವೆ. ಯಾಕೆಂದರೆ ಧ್ವನಿ ಇಲ್ಲದ ಶೋಷಿತ ಮಹಿಳೆಯರ ಧ್ವನಿ ಯಾಗುವುದು ನನ್ನ ಉದ್ದೇಶ. ಈ ನಿಟ್ಟಿನಲ್ಲಿ ನಾನು ಜವಾಬ್ದಾರಿ ಎಂದು ಭಾವಿಸಿz್ದÉÃನೆ ಎಂದರು.
ದೇಶದಲ್ಲಿ ಮಹಿಳೆಯರ ದೊಡ್ಡ ಶಕ್ತಿ ಎಂದರೆ ಇಂದಿರಾಗಾAಧಿ ಅವರು . ಅವರ ಸ್ಪೂರ್ತಿಯೇ ಇವತ್ತು ಕಾಂಗ್ರೆಸ್ ಪಕ್ಷ ದಲ್ಲಿಮಹಿಳೆಯರು ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಮಹಿಳಾ ಸಬಲೀಕರಣ ಎನ್ನುವುದು ಕೇವಲ ವಾಖ್ಯ ಆಗಬಾರದು, ಘೋಷಣೆ ಆಗಬಾರದು. ಅದು ಅವಳಬದುಕಿನ ಭಾಗವಾಗಿಇರಬೇಕು. ಇದು ಕುಟುಂಬದಿAದ ಹಿಡಿದು ರಾಜಕಾರಣದವರೆಗೂ ಕೂಡ ಇದು ಅನ್ವಯವಾಗಬೇಕಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post