ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನಗಣತಿ ವಿಷಯದಲ್ಲಿ ತಾಂತ್ರಿಕದೋಷವಿದೆ ಸರಿಪಡಿಸಲಾಗುತ್ತಿದೆ. ಜಾತಿಗಣತಿ #Caste Census ಅಲ್ಲ ಇದು. ಸರ್ವೆ ಅಷ್ಟೆ ಎಂದು ಸಚಿವ ಮಧು ಬಂಗಾರಪ್ಪ #Minister Madhu Bangarappa ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಜಾತಿಗಣತಿಯಲ್ಲಿ ಮೊಬೈಲ್‍ನಲ್ಲಿ ಅಪ್ಲೋಡ್ ಆಗಿರಲಿಲ್ಲ ಎಂದರೆ ಸಾರ್ವಜನಿಕರಿಗೆ ಸರ್ವೆ ಬಂದ ಶಿಕ್ಷಕರು ಮೊಬೈಲ್ ನಂಬರ್ ಕೊಟ್ಟು ಹೋಗಿರ್ತಾರೆ. ಕರೆ ಮಾಡಿದಾಗ ಮತ್ತೆ ಹೋಗುತ್ತಾರೆ. ಶಿಕ್ಷಕರೆಲ್ಲಾ ಸರ್ಕಾರದ ಜೊತೆ ಇದ್ದಾರೆ ಸಮಯದಲ್ಲಿ ಮುಗಿಸಲಾಗುತ್ತದೆ ಎಂದರು.

ಧಾರವಾಡದಲ್ಲಿ ಉಪನ್ಯಾಸಕರ ವಯೋಮಿತಿ ಸಡಿಲಿಕೆ ವಿಷಯದಲ್ಲಿ ಹೋರಾಟ ನಡೆಯುತ್ತದೆ. ನಮ್ಮಿಇಲಾಖೆ ಕೋವಿಡ್ ನಂತರ ಸಡಿಲಕೆ ಆಗಿದೆ. ಮೀಸಲಾತಿ ಸರಿಅಗಿದೆ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದ ಅವರು ಸಾಗರ ತಾಲೂಕಿಗೆ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಅದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದರು.
ಇಂದು ಪಾಕಿಸ್ತಾನ್ ಮತ್ತು ಭಾರತದ ನಡುವೆ 20-20 ಫೈನಲ್ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆ. ಈ ವಿಚಾರದಲ್ಲಿ ಬಿಜೆಪಿಗೆ ಪೋಸ್ಟ್ ಹಾಕಿಕೊಳ್ಳಲಿ. ಒಂದು ಕಡೆ ಯುದ್ಧ ಎನ್ನುತ್ತಾರೆ ಮತ್ತೊಂದು ಕಡೆ ಮ್ಯಾಚ್ ಆಡುತ್ತಾರೆ. ಆಟದಲ್ಲಿ ರಾಜಕೀಯ ಬೇಡ ಎಂದ ಅವರು ಎಸ್‍ಎಸ್‍ಎಲ್‍ಸಿ. ಕನಿಷ್ಠ ಅಂಕ ವಿಷಯದಲ್ಲಿ ಸಿಎಂಗೆ ಬಿಟ್ಟ ವಿಷಯ ಅದನ್ನ ಸರಿಯಾಗಿ ತೀರ್ಮಾನಿಸುತ್ತಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


























Discussion about this post