ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಪ್ರತಿಷ್ಠಿತ ನೃತ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟಿನ ಸಂಸ್ಥಾಪಕರೂ ಗುರುಗಳೂ ಆದ ‘ಕಲಾಭೂಷಿಣಿ’ ಡಾ. ದರ್ಶಿನಿ ಮಂಜುನಾಥ್ ರವರ ಶಿಷ್ಯೆ ಕು.ಪ್ರಿಯಾಂಕಾ ಶ್ರೀನಿವಾಸ್ ಅವರ ರಂಗಪ್ರವೇಶ ಸೆ.28ರಂದು ನಡೆಯಲಿದೆ.
ಸೆ.28ರ ಭಾನುವಾರ ಸಂಜೆ 6 ಗಂಟೆಗೆ ಜೆಸಿ ನಗರದಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಪ್ರವೇಶ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಇಲಾಖೆ ಜಂಟಿ ನಿರ್ದೇಶಕ ಬಿ.ಎಚ್. ನಿಶ್ಚಲ್, ಖ್ಯಾತ ವಿಮರ್ಷಕ ಮತ್ತು ಅಂಕಣಕಾರ ನಂಜುಂಡರಾವ್, ಚಿತ್ರ ನಿರ್ಮಾಪಕರು, ಸಾಮಾಜಿಕ ಕಾರ್ಯಕರ್ತರೂ ಆದ ಶ್ರೀನಿವಾಸಮೂರ್ತಿ, ಸಾಮಾಜಿಕ ಕಾರ್ಯಕರ್ತರಾದ ಶಿವಕುಮಾರ್, ಅರ್ಚಕರಾದ ಆರ್. ಗಣೇಶ್ ಇರಲಿದ್ದಾರೆ.

ವಾದ್ಯಮೇಳದಲ್ಲಿ : ನಟ್ಟುವಾಂಗ ಗುರು ಡಾ. ದರ್ಶಿನಿ ಮಂಜುನಾಥ್, ಗಾಯನ-ವಿದುಷಿ ಭಾರತಿ ವೇಣುಗೋಪಾಲ್, ಮೃದಂಗದಲ್ಲಿ ವಿದ್ವಾನ್ ಎಸ್.ವಿ. ಗಿರಿಧರ್, ಪಿಟೀಲಿನಲ್ಲಿ ವಿದ್ವಾನ್ ಸಿ. ಮಧುಸೂದನ್, ಕೊಳಲಿನಲ್ಲಿ ವಿದ್ವಾನ್ ಎಂ.ಎಸ್. ಪ್ರಮುಖ್, ರಿದಂ ಪ್ಯಾಡ್’ನಲ್ಲಿ ವಿದ್ವಾನ್ ಕಾರ್ತೀಕ್ ವೈಧತ್ರಿ, ವೀಣೆಯಲ್ಲಿ ಮಾ. ಅಚ್ಯುತ್ ಜಗದೀಶ್ ಸಹಕಾರ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


























Discussion about this post