No Result
View All Result
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ
English Articles

Hennur Sparsh Hospital Completes One Year | A Reflection of Multispecialty Care

by ಕಲ್ಪ ನ್ಯೂಸ್
May 25, 2026
0

Kalpa Media House  |  Bengaluru  | SPARSH Hospital, Hennur Road has completed one year of operations, with its first-year clinical...

Read moreDetails
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
  • Advertise With Us
  • Grievances
  • About Us
  • Contact Us
Monday, May 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ದಕ್ಷ

ಬುಲೆಟ್ ಸವಾರಿ-12: ಬ್ಯಾರಿಸ್ಟರ್ ಕೊಂದಿದ್ದು ನಾನೇ ಎಂದ-1

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 15, 2018
in ದಕ್ಷ
0
Share on FacebookShare on TwitterShare on WhatsApp

1986
‘ನಮ್ಮ ಲಾಕಪ್‌ನಲ್ಲಿ ನಿನಗಿಂದು ಕೊನೆಯ ದಿನ. ನಾಳೆ ಸೆಂಟ್ರಲ್ ಜೈಲ್‌ಗೆ ಏನು ಊಟ ಬೇಕು ಹೇಳೋ, ತರಿಸಿ ಕೊಡ್ತೀನಿ.’ ಎಂದೆ. ಆತ ಪ್ರಚಂಡ ಕಳ್ಳ. ಬೆಂಗಳೂರಿನ ನಾನಾ ಭಾಗಗಳ ಮನೆಗಳಿಗೆ ಕನ್ನ ಹಾಕುತ್ತ ಬದುಕುತ್ತಿದ್ದವನು. ‘ಸಾರ್ ಚಿಕನ್ ಬಿರಿಯಾನಿ, ಅರ್ಧ ಬಾಟಲ್ ತ್ರಿಬಲ್ ಎಕ್ಸ್ ರಮ್,’ ಎಂದ ಆತ. ಸಂಕೋಚವಿಲ್ಲದೆ! ಆಯ್ತಪ್ಪ ಮಜಾ ಮಾಡು. ನಾಳೆಯಿಂದ ಜೈಲಲ್ಲಿ ರೊಟ್ಟಿ ಮುರಿಯೋದು ಇದ್ದೇ ಇದೆ.’ ಎಂದ ನಾನು, ಕಾನ್‌ಸ್ಟೇಬಲ್ ಚಾಮಯ್ಯನಿಗೆ ಹಣ ಕೊಟ್ಟು ಆತ ಹೇಳಿದ್ದನ್ನು ತಂದು ಕೊಡಲು ಹೇಳಿ ಮನೆಗೆ ರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ಠಾಣೆಗೆ ಬಂದು ಕೂತಿದ್ದೆ. ಯಾಕೋ ನನ್ನ ದೃಷ್ಟಿ ಎದುರಿಗಿದ್ದ ಲಾಕಪ್‌ನತ್ತ ಹೊರಳಿತು. ಕಳ್ಳ ಕಾಲು ಚಾಚಿ ಕೂತಿದ್ದ. ನಾನು ಆತನತ್ತ ನೋಡುತ್ತಲೇ, ಇತ್ತ ಬರುವಂತೆ ಕೈಸನ್ನೆ ಮಾಡಿದ. ‘ಪಾಪ ಅಂತ ಬಿರಿಯಾನಿ, ರಮ್ ತರಿಸಿಕೊಟ್ಟು ಸಲಿಗೆ ತೋರಿಸಿದ್ದಕ್ಕೆ ಈಗ ಮತ್ತೇನೋ ಕೇಳಲು ಸ್ಕೆಚ್ ಹಾಕುತ್ತಿದ್ದಾನೆ ನನ್‌ಮಗಾ.’ ಎಂದುಕೊಳ್ಳುತ್ತ ಆತನತ್ತ ಹೋದೆ.

‘ಸಾರ್ ನಾನು ನಿಮಗೆ ಇಷ್ಟು ದಿನ ಕಳ್ಳತನದ ಬಗ್ಗೆ ಹೇಳಿದ್ದು, ಹಣ-ಚಿನ್ನಾಭರಣ ತೋರಿಸಿದ್ದು ಯಾವ ಪುಟುಗೋಸಿ ಕೇಸುಗಳು ಸಾರ್? ನಾನೊಂದು ದೊಡ್ಡ ತಪ್ಪು ಮಾಡಿಬಿಟ್ಟಿದ್ದೀನಿ ಸಾರ್. ನನ್ನ 10 ವರ್ಷಗಳ ‘ಸರ್ವೀಸ್’ನಲ್ಲಿ ಎಷ್ಟೊಂದು ಪೊಲೀಸ್ ಸ್ಟೇಷನ್‌ಗಳಿಗೆ ಎಳೆದುಕೊಂಡು ಹೋಗಿ ಏರೋಪ್ಲೇನ್ ಏರಿಸಿದ್ದರೂ ಈ ವಿಷಯ ಬಾಯಿ ಬಿಟ್ಟಿಲ್ಲ. ಈಗಲೂ ಸುಮ್ಮನಿದ್ದು ಬಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ನೀವು ಇಷ್ಟು ದಿನ ಲಾಕಪ್‌ನಲ್ಲಿ ನನ್ನನ್ನು ಆತ್ಮೀಯತೆಯಿಂದ ನೋಡಿಕೊಂಡಿದ್ದೀರಿ. ನಿಮ್ಮ ಹತ್ತಿರ ಈ ರಹಸ್ಯ ಹೇಳಿ ಪಶ್ಚಾತ್ತಾಪ ಮಾಡಿಕೊಳ್ಳಬೇಕು ಅನಿಸುತ್ತಿದೆ. ಸಾರ್… ಆ ಕೊಲೆ ಆಯ್ತಲ್ಲ? ಅದನ್ನು ನಾನೇ ಮಾಡಿದ್ದು.’ ಎಂದು ಬಿಟ್ಟ! ನಾನು ಸುಸ್ತು ಹೊಡೆದು ಹೋದೆ.

ಬೆಂಗಳೂರಿನಲ್ಲಿ 1985ರ ಆ.14ರಂದು ನಡೆದಿದ್ದು ಬ್ಯಾರಿಸ್ಟರ್ ಮರ್ಡರ್ ಕೇಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಏಕೆಂದರೆ ಅವರು ಮೈಸೂರು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಹತ್ತಿರದ ಸಂಬಂಧಿ. ಸ್ವಾಮಿ ಶ್ರದ್ಧಾನಂದನಿಂದ ಭೀಕರವಾಗಿ ಕೊಲೆಯಾದ ಶ್ರೀಮಂತ ಮಹಿಳೆ ಶಾಕೀರಾ ಕೂಡ ಇವರ ಸಮೀಪದ ಬಂಧು. ಇಂಗ್ಲೆಂಡ್‌ನಲ್ಲಿ ಅವರು ಲಾನಲ್ಲಿ ಮಾಸ್ಟರ್ ಡಿಗ್ರಿ ಪಡೆದು ‘ಬ್ಯಾರಿಸ್ಟರ್’ ಜನಪ್ರಿಯರಾಗಿದ್ದರು. ಅವರ ಸಹೋದಿರಯೊಬ್ಬರು ಪಾಕಿಸ್ಥಾನದ ರಾಜತಾಂತ್ರಿಕ ಅಧಿಕಾರಿಯನ್ನು ವಿವಾಹವಾಗಿದ್ದರು. ಸಂಬಂಧಿಗಳೆಲ್ಲ ರಾಜಕೀಯ, ರಾಜತಾಂತ್ರಿಕ, ಉದ್ಯಮ ಹೀಗೆ ನಾನಾ ರಂಗಗಳಲ್ಲಿ ಉನ್ನತ ಸ್ಥಾನದಲ್ಲಿದ್ದರು. ಹಾಗಾಗಿ ಕೊಲೆ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಪೊಲೀಸರ ಮೇಲೆ ವಿಪರೀತ ಒತ್ತಡವಿತ್ತು. ಹತ್ತಾರು ಪೊಲೀಸ್ ಅಧಿಕಾರಿಗಳ ತಂಡ ವರ್ಷಗಟ್ಟಲೆ ಪ್ರಯತ್ನಪಟ್ಟರೂ ಕೊಲೆ ರಹಸ್ಯ ಬಗೆಹರಿದಿರಲಿಲ್ಲ. ಹೀಗಿರುವಾಗ ಪ್ರಯತ್ನವನ್ನೇ ಮಾಡದೆ ನನ್ನ ಎದುರು ಆ ಸೆನ್ಯೇಷನಲ್ ಮರ್ಡರ್ ಕೇಸ್‌ನ ಹಿಂದಿನ ಹೂರಣ ಬಿಚ್ಚಿಕೊಂಡಿತ್ತು!

ನಮ್ಮ ಲಾಕಪ್‌ನಲ್ಲಿರುವ ಉಪವಾಸ ಕೆಡವಬಾರದು ಎಂಬುದು, ದಕ್ಷ-ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದ ಎಂ.ಕೆ. ಗಣಪತಿ ಅವರಿಂದ ನಾನು ಕಲಿತ ಪಾಠ. ‘ಅಪರಾಧಿಗಳ ಬಗ್ಗೆ ಬಾಯಿ ಬಿಡಿಸಲು ಆರೋಪಿಗಳ ಮೇಲೆ ದಂಡ ಪ್ರಯೋಗ ಅನಿವಾರ್ಯ, ಆದರೆ ಅವರು ಉಪವಾಸದಿಂದ ಬಳಲಬಾರದು. ನಾವು ಮನೆಗೆ ಹೋಗಿ ಬಿಸಿಬಿಸಿ ಊಟ ಮಾಡಿ ಮಲಗುತ್ತೇವೆ. ಅತ್ತ ನಮ್ಮ ಲಾಕಪ್‌ನಲ್ಲಿರುವ ವ್ಯಕ್ತಿಯನ್ನು ಅನ್ನ-ನೀರು ಕೊಡದೆ ಬಳಲಿಸುವುದು ಯಾವ ನ್ಯಾಯ? ಅವರ ಯೋಗಕ್ಷೇಮ ವಿಚಾರಿಸಿಯೇ ಮನೆಗೆ ಹೋಗಬೇಕು’ ಎಂದು ಅವರು ನಾನು ಪ್ರೊಬೆಷನರಿಯಲ್ಲಿರುವಾಗ ಹೇಳಿದ ಮಾತನ್ನು ಸೇವೆಯುದ್ದಕ್ಕೂ ಪಾಲಿಸುತ್ತ ಬಂದಿದ್ದೆ.

ಹಾಗೆ ನೋಡಿದರೆ ಆ ಕಳ್ಳ ನನ್ನ ಕೈಗೆ ಸಿಕ್ಕಿ ಬಿದ್ದಿದ್ದೇ ಆಕಸ್ಮಿಕ. ನಾನಾಗ ವೈಯಾಲಿಕಾವಲ್ ಠಾಣೆಯಲ್ಲಿ ಎಸ್‌ಐ. ಅವತ್ತು ಸಂಜೆ ಚಾಮಯ್ಯ ಎಂಬ ಕಾನ್‌ಸ್ಟೇಬಲ್‌ನನ್ನು ಕೂರಿಸಿಕೊಂಡು ನನ್ನ ಬುಲೆಟ್ ಮೋಟಾರ್‌ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದೆ. ಸ್ಯಾಂಕಿ ರಸ್ತೆಯಲ್ಲಿರುವ ಕಾವೇರಿ ಟಾಕೀಸ್ ಜಂಕ್ಷನ್‌ನಲ್ಲಿ ನಿಂತೆ. ಸಂಜೆ 7.30ರ ಸಮಯ. ಅಷ್ಟು ಹೊತ್ತಿನಲ್ಲಿ ಟ್ರಾಫಿಕ್‌ಜಾಮ್. ಆದರೆ ಆ ದಿನಗಳಲ್ಲಿ ರಸ್ತೆಗಳೆಲ್ಲ ಬಿಕೋ ಆಗ ಬೆಂಗಳೂರಿನ ಯಾವ ರಸ್ತೆಯೂ ಒನ್‌ವೇ ಆಗಿರಲಿಲ್ಲ. ಮುಂಬಯಿ, ಹೈದರಾಬಾದ್ ಕಡೆಯಿಂದ ಬರುವ ಲಾರಿಗಳು ಬೆಂಗಳೂರಿನ ಹೃದಯಭಾಗದ ರಾಜಭವನ ರಸ್ತೆ ಮೂಲಕ ಮದ್ರಾಸ್‌ಗೆ ಹೋಗುತ್ತಿದ್ದವು! ಫುಟ್‌ಪಾತ್ ಪಕ್ಕ ವ್ಯಕ್ತಿಯೊಬ್ಬ ಸೈಕಲ್ ಮೇಲೆ ಟೀ, ಬನ್ ಮಾರುತ್ತಿದ್ದ. ವ್ಯಕ್ತಿಯೊಬ್ಬ ಸೈಕಲ್ ನಿಲ್ಲಿಸಿ ಟೀ ಕುಡಿಯುತ್ತಿದ್ದ. ಸೈಕಲ್ ಹಿಂದೆ ಗೋಣಿಚೀಲದಲ್ಲಿ ಯಾವುದೋ ವಸ್ತು ಅಡಗಿಸಿಟ್ಟಂತೆ ಕಂಡಿತು. ಅದು ವಿಗ್ರಹ ಇರಬಹುದೇ ಎಂಬ ಅನುಮಾನ ಕಾಡಿತು. ಚೆಕ್ ಮಾಡಿ ಬಾ ಎಂದು ಮಪ್ತಿಯಲ್ಲಿದ್ದ ಕಳಿಸಿದೆ.

ಆತ ಗೋಣಿಚೀಲ ಮುಟ್ಟುತ್ತಿದ್ದಂತೆ ಆ ವ್ಯಕ್ತಿ ಗಡಿಬಿಡಿಯಿಂದ ಹೊರಡಲು ಮುಂದಾದ. ತತಕ್ಷಣ ನಾನು ಅಲ್ಲಿಗೆ ಧಾವಿಸಿ ವ್ಯಕ್ತಿ ಗಡಿಬಿಡಿಯಿಂದ ಹೊರಡಲು ಮುಂದಾದ. ತಕ್ಷಣ ನಾನು ಅಲ್ಲಿಗೆ ಧಾವಿಸಿ ಹಿಡಿದುಕೊಂಡೆ. ಗೋಣಿಚೀಲ ಬಿಚ್ಚಿ ನೋಡಿದಾಗ ಅದರಲ್ಲಿ ಟೇಬಲ್‌ಫ್ಯಾನ್, ಟ್ರಾನ್ಸಿಸ್ಟರ್, ಗೋಡೆ ಗಡಿಯಾರ ಹಾಗೂ ಕೆಲವು ಶೋಪೀಸ್‌ಗಳಿದ್ದವು. ಠಾಣೆಗೆ ತಂದು ವಿಚಾರಿಸಿದಾಗ, ಆತ ನಟರಾಜ ಎಂಬ ನಟೋರಿಯಸ್ ಕಳ್ಳ ಎನ್ನುವುದು ಬೆಳಕಿಗೆ ಬಂತು. ಅಶೋಕನಗರ ಠಾಣೆ ವ್ಯಾಪ್ತಿಯಲ್ಲೇ ಆತ ೧೫ಕ್ಕೂ ಮನೆಗಳಿಗೆ ಕನ್ನ ಹಾಕಿದ್ದ. ಐದು ದಿನ ಆತನನ್ನು ಕಸ್ಟಡಿಗೆ ತೆಗೆದುಕೊಂಡು ೫ ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ವಸ್ತು ವಶಪಡಿಸಿಕೊಂಡೆ. ಕಸ್ಟಡಿ ಅವಧಿ ಮುಗಿದು ಸೆಂಟ್ರಲ್ ಜೈಲ್‌ಗೆ ಕಳಿಸಬೇಕು ಎನ್ನುವಷ್ಟರಲ್ಲಿ ಆತ ಕೊಲೆ ರಹಸ್ಯ ಬಯಲು ಮಾಡಿದ್ದ.
(ಮುಂದುವರೆಯುವುದು)

Tags: Bangalore PoliceBullet SavariKalpa NewsTiger BB Ashok Kumar
Share196Tweet123Send
Previous Post

ಉತ್ತರ ಕೊರಿಯಾ ಎಂಬ ನರಕ-26: ಸರಿಯಾದ ಬೆಲೆ ತೆರುತ್ತದೆ

Next Post

ಇದೊಂದು ಜಗತ್ತು; ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-1

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇದೊಂದು ಜಗತ್ತು; ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-1

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿಕಾರಿಪುರ | ತಾಲೂಕಿನ ಮೂರು ಹಳ್ಳಿಗಳ ವ್ಯಾಪ್ತಿಯಲ್ಲಿ ಚಿರತೆ ದಾಳಿ | ಮೂವರಿಗೆ ತೀವ್ರ ಗಾಯ

ಹೊಸನಗರ, ಕಡಸೂರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ | ಗ್ರಾಮಸ್ಥರಲ್ಲಿ ಆತಂಕ!

May 25, 2026
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

May 25, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಮೇ 26ರಂದು ಭದ್ರಾವತಿಯ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

May 25, 2026
ಮೈತ್ರಿ ಪ್ರಾಥಮಿಕ, ಕುಮದ್ವತಿ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷ ಆರಂಭ | ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

ಮೈತ್ರಿ ಪ್ರಾಥಮಿಕ, ಕುಮದ್ವತಿ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷ ಆರಂಭ | ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

May 25, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL