ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಂದ್ರಪ್ರದೇಶದ ಗುಂಟೂರು ನಾಗಾರ್ಜುನ್ ಯೂನಿವರ್ಸಿಟಿಯಲ್ಲಿ ಸೆ. 23 ರಿಂದ 25ರವರೆಗೆ ಅಥ್ಲೆಟಿಕ್ಸ್ ಅಸೋಸಿಯೇಸನ್ಸ್ ವತಿಯಿಂದ ನಡೆದ 36ನೇ ಸೌತ್‌ಜ್ಹೋನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-2025ರ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಶಾಲೆ/ ವಸತಿ ನಿಲಯಗಳ ಕ್ರೀಡಾಪಟಗಳು ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ.
ಸಂಜಯ್ ಸುನೀಲ್ ಹಂಚಿನಮನೆ 60ಮೀ ಮಿಡ್ಲ್ ಪ್ರಥಮ, ರಿಲೇಯಲ್ಲಿ ದ್ವಿತೀಯ, ಶರತ್ ಕೆ.ಜೆ. 600 ಮೀ ಮತ್ತು ಮಿಡ್ಲ್ ರಿಲೇಯಲ್ಲಿ ದ್ವಿತೀಯ, ಸಚಿನ್ ಎಲ್.ಜೆ.. ಮಿಡ್ಲ್ ರಿಲೇಯಲ್ಲಿ ಮತ್ತು ಮತ್ತು ಸಿರಿ ಕೆ.ಜೆ. ಮಿಡ್ಲ್ ರಿಲೇ ತೃತೀಯ ಸ್ಥಾನಗಳಲ್ಲಿ ವಿಜೇತರಾಗಿದ್ದಾರೆ.
ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದಲ್ಲಿ ಬಾಳಪ್ಪ ಮಾನೆ ಅಥ್ಲೆಟಿಕ್ ದೈನಂದಿನ ತರಬೇತಿ ನೀಡುತ್ತಿದ್ದಾರೆ. ವಿಜೇತರಿಗೆ ಜಿಲ್ಲಾಧಿಕಾರಿಗಳು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಜಿಲ್ಲಾ ಅಥ್ಲೆಟಿಕ್ ಅಸೋಸಿಯೋಶನ್ ಕಾರ್ಯದರ್ಶಿಗಳು ಹಾಗು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post