ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅ.8-9ರಂದು ಪ್ರತಿದಿನ ಸಂಜೆ 7 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ನಮ್‍ಟೀಮ್ ವತಿಯಿಂದ ನೀನಾಸಂ #Ninasam ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಮ್‍ಟೀಮ್‍ನ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 25 ವರ್ಷಗಳಿಂದ ರಂಗಭೂಮಿಯಲ್ಲಿ ಕ್ರೀಯಾಶೀಲವಾಗಿರುವ ನಮ್‍ಟೀಮ್ ರಂಗತಂಡವು ಈ ಬಾರಿಯು ಹೆಗ್ಗೂಡಿನ ನೀನಾಸಂ ತಿರುಗಾಟದ ಕಲಾವಿದರು ಈ ನಾಟಕಗಳನ್ನು ಪ್ರದರ್ಶಿಸುತ್ತಿದ್ದು, ಮೊದಲ ದಿನವಾದ ಅ.8ರಂದು ಸಂಜೆ 7 ಗಂಟೆಗೆ ಬಾನುಮುಸ್ತಾಕ್ ಅವರ ಕಥೆಯನ್ನು ಆಧರಿಸಿದ `ಹೃದಯದತೀರ್ಪು’ ನಾಟಕವನ್ನು ಪ್ರದರ್ಶಿಸುತ್ತಿದ್ದು, ಡಾ. ಎಂ. ಗಣೇಶ್ ಅವರ ರಂಗರೂಪ ಹಾಗೂ ನಿರ್ದೇಶನ ಈ ನಾಟಕಕ್ಕಿದೆ ಎಂದರು.
ಎರಡನೇ ದಿನವಾದ ಅ.9ರ ಸಂಜೆ 7 ಗಂಟೆಗೆ ಜಿ. ಶಂಕರ್ ಅವರ `ಅವತರಣಮ್ ಭ್ರಾಂತಾಲಯಮ್’ ನಾಟಕ ಪ್ರದರ್ಶನವಾಗಲಿದ್ದು, ಶಂಕರ್ ವೆಂಕಟೇಶ್ವರನ್ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ ಈ ನಾಟಕಗಳ ಪ್ರದರ್ಶನವಾಗಲಿದ್ದು, ಪ್ರವೇಶದರ ಒಂದು ನಾಟಕಕ್ಕೆ ಒಬ್ಬರಿಗೆ 50 ರೂ. ಆಗಿರುತ್ತದೆ.
ಹೆಚ್ಚಿನ ವಿವರಗಳಿಗೆ ಮೊ . 9108237446ರಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಮ್‍ಟೀಮ್‍ನ ಖಜಾಂಚಿ ಸಮನ್ವಯ ಕಾಶಿ, ಸದಸ್ಯರಾದ ನಂದಿನಿ ಸಾಗರ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post