ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ತಾಲ್ಲೂಕಿನ ನಾಲೂರ್ ಸಮೀಪದ ರಸ್ತೆಯಲ್ಲಿ ಇಂದು ಕಾಡುಕೋಣ ರಸ್ತೆಗೆ ಹಾರಿದ ಪರಿಣಾಮವಾಗಿ ಒಂದು ಕಾರು ನಿಯಂತ್ರಣ ತಪ್ಪಿ ಜಖಂ ಆಗಿದೆ ಎಂದು ವರದಿಯಾಗಿದೆ.
ಕಾರಿನ ಮುಂಭಾಗ ಭಾಗಶಃ ಹಾನಿಯಾಗಿದೆ. ಈ ಪ್ರದೇಶದಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳು ರಸ್ತೆಯತ್ತ ಬರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಗೆ ಕಾಡು ಪ್ರಾಣಿಗಳ ಸಂಚಾರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post