No Result
View All Result
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ
English Articles

Ramachandrapura Seer Hails PM Narendra Modi’s Leadership

by ಕಲ್ಪ ನ್ಯೂಸ್
June 10, 2026
0

Kalpa Media House  |  Honavar/Sagara  | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...

Read moreDetails
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
  • Advertise With Us
  • Grievances
  • About Us
  • Contact Us
Thursday, June 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಚಾಮರಾಜನಗರ

ಉತ್ತಮ ಕಥೆ ಪುಸ್ತಕಗಳು ಸಮಗ್ರ ವಿಕಾಸಕ್ಕೆ ಬುನಾದಿ: ಪೊಲೀಸ್ ಅಧೀಕ್ಷಕಿ ಸ್ನೇಹ ರಾಜ್

ಚಾಮರಾಜನಗರ | ಚಿಗುರು 2026 ಕಾರ್ಯಕ್ರಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 5, 2026
in ಚಾಮರಾಜನಗರ
0
ಉತ್ತಮ ಕಥೆ ಪುಸ್ತಕಗಳು ಸಮಗ್ರ ವಿಕಾಸಕ್ಕೆ ಬುನಾದಿ: ಪೊಲೀಸ್ ಅಧೀಕ್ಷಕಿ ಸ್ನೇಹ ರಾಜ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  |

ಬಾಲ್ಯದಿಂದಲೂ ಉತ್ತಮ ಕಥೆ ಪುಸ್ತಕಗಳನ್ನು ಅಧ್ಯಯನ ಮಾಡಿ ಸಮಗ್ರ ವಿಕಾಸಕ್ಕೆ ಬುನಾದಿ ಹಾಕಿಕೊಳ್ಳಬೇಕು. ಶಿಕ್ಷಣ, ಕಲೆ ಸಾಹಿತ್ಯ, ಸಂಗೀತ, ನೃತ್ಯ ,ನಾಟಕ ಚಿತ್ರಕಲೆ, ವಿವಿಧ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂದು ಪೊಲೀಸ್ ಅಧೀಕ್ಷಕರಾದ ಸ್ನೇಹ ರಾಜ್ ರವರು ತಿಳಿಸಿದರು.

ಅವರು ಯೂಥ್ ಫಾರ್ ಸೇವಾ ಸಂಸ್ಥೆ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಚಿಗುರು 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧನೆ ಮಾಡಿರುವ ಎಲ್ಲರಿಗೂ ಬಾಲ್ಯದ ನೆನಪು ಸದಾ ಅಮರವಾಗಿರುತ್ತದೆ. ತಂದೆ ತಾಯಿ ಶಿಕ್ಷಕರು ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಿದಾಗ ಮಕ್ಕಳ ವಿಕಾಸ ಉಂಟಾಗಿ ಬೆಳವಣಿಗೆಗೆ ಸಹಾಯಕವಾಗುತ್ತದೆ. ನೂರಾರು ಉತ್ತಮ ಕಥೆಯ ಪುಸ್ತಕಗಳು ಇದ್ದು ಅವುಗಳನ್ನು ಸಂಗ್ರಹಿಸಿ ಓದಬೇಕು. ಪೋಷಕರು ಪುಸ್ತಕಗಳನ್ನು ತಾವು ಓದಿ ಮಕ್ಕಳು ಓದುವಂತೆ ಮಾಡುವುದು ಬಹಳ ಒಳ್ಳೆಯದು. ಪುಸ್ತಕಗಳಿಂದ ಬಹಳಷ್ಟು ವಿದ್ಯಾರ್ಥಿಗಳು ಪ್ರೇರಕರಾಗಿ, ಸ್ವ ಅಧ್ಯಯನದಿಂದ ಉನ್ನತ ಸಾಧನೆಯನ್ನು ಮಾಡಬಹುದು. ಕಲಿಕೆಗೆ ಆಸಕ್ತಿಯನ್ನು ಪುಸ್ತಕಗಳು ಹೆಚ್ಚಿಸುತ್ತದೆ. ಸರ್ಕಾರಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳನ್ನು ವಿವಿಧ 15ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಸ್ಪೂರ್ತಿ ತುಂಬಿರುವ ಯೂತ್ ಫಾರ್ ಸೇವಾ ಸಂಸ್ಥೆ ಉತ್ತಮ ಕಾರ್ಯವನ್ನು ಮಾಡಿದೆ ಎಂದು ತಿಳಿಸಿದರು.

ಉದ್ಯಮಿ ವೆಂಕಟ ನಾಗಪ್ಪ ಶೆಟ್ಟಿ ಮಾತನಾಡಿ ಸಂಸ್ಥೆ ಕಳೆದ ಐದು ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಮಕ್ಕಳಿಗಾಗಿ ರೂಪಿಸಿರುವ ಚಿಗುರು ಕಾರ್ಯಕ್ರಮ ಸಾವಿರಾರು ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಮಾತನಾಡಿ ಪ್ರತಿಭೆಗಳನ್ನು ಸಮಾಜಕ್ಕೆ ಅರ್ಪಿಸುವುದು ಸಂಘ ಸಂಸ್ಥೆಗಳ ಪ್ರಮುಖ ಕಾರ್ಯವಾಗಿದೆ. ಪ್ರತಿಭಾನ್ವಿತರಿಗೆ ವೇದಿಕೆಗಳನ್ನು, ಸ್ಪರ್ಧೆಗಳನ್ನು ಆಯೋಜಿಸಿ ಉತ್ತಮ ಸ್ಥಾನಮಾನವನ್ನು ಗಳಿಸಿಕೊಳ್ಳುವಂತೆ ಆತ್ಮವಿಶ್ವಾಸವನ್ನು ಮೂಡಿಸುವ ಕಾರ್ಯವನ್ನು ಯೂತ್ ಫಾರ್ ಸೇವಾ ಸಂಸ್ಥೆ ಮಾಡುತ್ತಿದೆ. ಶಿಕ್ಷಣ ಪರಿಸರ, ಸ್ವಚ್ಛತೆ ,ಇಂಗ್ಲಿಷ್ ಕಲಿಕೆ, ವಿಜ್ಞಾನದ ಪ್ರೋತ್ಸಾಹ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸೇವಾ ಮನೋಭಾವದಿಂದ ಯುವಶಕ್ತಿಯನ್ನು ರೂಪಿಸುತ್ತಿರುವ ಸಂಸ್ಥೆ. ಮುಂದಿನ ಯುವಶಕ್ತಿ ಆಗಿರುವ ಮಕ್ಕಳಲ್ಲಿ ತಮ್ಮಲ್ಲಿ ಅಡಗಿರುವ ಮಹಾ ಶಕ್ತಿ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ಸಾಧ್ಯವಿದೆ. ಅನೇಕ ನಟ ನಟಿಯರು, ಕ್ರೀಡಾಪಟುಗಳು ಚಿತ್ರಕಾರರು, ಕಲೆ, ಸಾಹಿತ್ಯ ಸಂಗೀತ ,ಕವಿ , ಗಾಯನಶ್ರೇಷ್ಠರು ಸಮಾಜಮುಖಿ ಯಾಗಿ ಸೇವೆ ಸಲ್ಲಿಸಲು ವೇದಿಕೆಗಳು ಪ್ರಮುಖ ಎಂದು ತಿಳಿಸಿದರು.

ಸ್ತ್ರೀರೋಗ ತಜ್ಞ ಡಾ. ಶ್ವೇತಾ ಶಶಿಧರ್ ಮಾತನಾಡಿ ಚಾಮರಾಜನಗರ ಜಿಲ್ಲೆ ಕಲೆಯ ಸಾಹಿತ್ಯ, ಸಂಗೀತಕ್ಕೆ ಪ್ರಸಿದ್ಧಿಯಾಗಿದೆ. ಪ್ರತಿಭಾವಿಕಸಕ್ಕೆ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಶಿಕ್ಷಕರು ಪೋಷಕರು ನಿರಂತರವಾಗಿ ಅವರನ್ನು ಬೆಂಬಲಿಸಿ ಅವಕಾಶವನ್ನು ಕಲ್ಪಿಸಿ ಕೊಡಬೇಕು .ಸಂಘ ಸಂಸ್ಥೆಗಳು ನಿರಂತರವಾಗಿ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಾಧಕರು ಹೊರಬರಬೇಕು ಚಿಗುರು ಮೂಲಕ ಸಾವಿರಾರು ಮಕ್ಕಳ ಸಂತೋಷಕ್ಕೆ ಕಾರಣವಾಗಿರುವ ಯೂತ್ ಫಾರ್ ಸೇವಾ ಸಂಸ್ಥೆ ಒಳ್ಳೆಯ ಕಾರ್ಯ ಮಾಡಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಅಂಗಗಳು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಕರ್ನಾಟಕ ಸರ್ಕಾರದ ಮಾಜಿ ರಾಜ್ಯ ಆಯುಕ್ತರಾದ ಕೆ ವಿ ರಾಜಣ್ಣ ರವರು ಮಾತನಾಡಿ ಅಚ್ಚುಕಟ್ಟಾಗಿ ಚಿಗುರು 2026 ರೂಪಿಸಿರುವ ಸಂಸ್ಥೆಗೆ ಧನ್ಯವಾದಗಳು ಅರ್ಪಿಸಿದರು.

ಕರ್ನಾಟಕ ಸ್ವಯಂಸೇವಕ ನಿರ್ವಹಣೆಯ ಜವಾಬ್ದಾರಿ ವಹಿಸಿರುವ ರಾಘವೇಂದ್ರರವರು ಸೇವಾ ಸಂಸ್ಥೆ ಬೆಳೆದು ಬಂದ ಹಾಗೂ ಕಾರ್ಯನಿರ್ವಹಿಸುತ್ತಿರುವ ಚಟುವಟಿಕೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಗುರುಪ್ರಸಾದ್ ಯೂತ್ ಫಾರ್ ಸೇವಾ ಸಂಸ್ಥೆಯ ವಿಷ್ಣು, ತೇಜನಾಯಕ್, ಡಾ. ಕಾರ್ತಿಕ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: ChamarajanagaraKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಚಾಮರಾಜನಗರ
Share198Tweet124Send
Previous Post

ಸೊರಬ | ಉಳವಿ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ

Next Post

ಶಿವಮೊಗ್ಗಕ್ಕೆ ಬರ್ತಿದ್ದಾರೆ ಸಂಸದ ತೇಜಸ್ವಿ ಸೂರ್ಯ | ಯಾವತ್ತು? ಏನು ಕಾರ್ಯಕ್ರಮ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗಕ್ಕೆ ಬರ್ತಿದ್ದಾರೆ ಸಂಸದ ತೇಜಸ್ವಿ ಸೂರ್ಯ | ಯಾವತ್ತು? ಏನು ಕಾರ್ಯಕ್ರಮ?

ಶಿವಮೊಗ್ಗಕ್ಕೆ ಬರ್ತಿದ್ದಾರೆ ಸಂಸದ ತೇಜಸ್ವಿ ಸೂರ್ಯ | ಯಾವತ್ತು? ಏನು ಕಾರ್ಯಕ್ರಮ?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

June 10, 2026
ಸೊರಬ | 10 ವರ್ಷದ ಚಿರತೆ ಸಾವು | ವಿದ್ಯುತ್ ಹರಿಸಿ ಕೊಂದರಾ?

ಸೊರಬ | 10 ವರ್ಷದ ಚಿರತೆ ಸಾವು | ವಿದ್ಯುತ್ ಹರಿಸಿ ಕೊಂದರಾ?

June 10, 2026
ಬಾಯಿ ತೆರೆಯಲಾಗದೆ 14 ತಿಂಗಳು ಹೋರಾಟ | ಶಸ್ತ್ರಚಿಕಿತ್ಸೆಯಿಂದ ಶಿವಮೊಗ್ಗ ಮಹಿಳೆಗೆ ಹೊಸ ಜೀವನ

ಬಾಯಿ ತೆರೆಯಲಾಗದೆ 14 ತಿಂಗಳು ಹೋರಾಟ | ಶಸ್ತ್ರಚಿಕಿತ್ಸೆಯಿಂದ ಶಿವಮೊಗ್ಗ ಮಹಿಳೆಗೆ ಹೊಸ ಜೀವನ

June 10, 2026
ಶಿಕ್ಷಣದಿಂದ ಸಮಾಜ ನಿರ್ಮಾಣ ಸಾಧ್ಯ: ಡಾ. ವಾಸುದೇವ ಕೆ. ಆತ್ರೆ

ಶಿಕ್ಷಣದಿಂದ ಸಮಾಜ ನಿರ್ಮಾಣ ಸಾಧ್ಯ: ಡಾ. ವಾಸುದೇವ ಕೆ. ಆತ್ರೆ

June 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL