ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವ ಔಷಧ ತಜ್ಞ ದಿನಾಚರಣೆ #WorldPharmacistDay ಅಂಗವಾಗಿ ವಿವಿಧ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಫಾರ್ಮಸಿ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಜಾಥಾ ಯಶಸ್ವಿಯಾಯಿತು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ, ಜಿಲ್ಲಾ ಔಷಧ ತಜ್ಞರ ಸಂಘ ಹಾಗೂ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ವತಿಯಿಂದ ಜಾಥ ಏರ್ಪಡಿಸಲಾಗಿತ್ತು.
ದೇಶದ ಪ್ರಜೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಔಷಧ ತಜ್ಞರ ಪಾತ್ರ ಮಹತ್ವದಾಗಿದೆ. ಔಷಧ ತಜ್ಞರ ಪಾತ್ರವನ್ನು ಗೌರವಿಸಲು ಮತ್ತು ಸಾರ್ವಜನಿಕ ಯೋಗ ಕ್ಷೇಮಕ್ಕಾಗಿ ಇಂತಹ ಅಪೂರ್ವ ವೇದಿಕೆ ಪೂರಕವಾಗಿದೆ.
-ಡಾ.ಪಿ. ನಾರಾಯಣ್, ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ
ಇದೇ ವೇಳೆ ಮೈಸೂರು ಮೆಡಿಕಲ್ಸ್ ವಿವೇಕಾನಂದ ನಾಯಕ್ ಹಾಗೂ ಮೆಗ್ಗಾನ್ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಪ್ರಭಾಕರ್ ಅವರಿಗೆ ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ತು ಮತ್ತು ಆಹಾರ ಸುರಕ್ಷತೆ ಔಷಧ ಆಡಳಿತ ಮಂಡಳಿ ಕೊಡಮಾಡುವ ಸರ್ವೋತ್ತಮ ಔಷಧ ತಜ್ಞ ಪ್ರಶಸ್ತಿಯನ್ನು ಸರ್ಕಾರದ ಪರವಾಗಿ ಸಹಾಯಕ ಔಷಧ ನಿಯಂತ್ರಕ ಡಾ.ವೀರೇಶ ಬಾಬು ಹಾಗೂ ಸಹಾಯಕ ಔಷಧ ನಿಯಂತ್ರಕಿ ವಿ. ವಿಶಾಲಾಕ್ಷಿ ಅವರು ಪ್ರದಾನ ಮಾಡಿ ಗೌರವಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಔಷಧ ವ್ಯಾಪಾರಿ ಸಂಘದ ಅಧ್ಯಕ್ಷರಾದ ಮಧುಸೂಧನ, ಜಿಲ್ಲಾ ರಿಜಿಸ್ಟರ್ಡ್ ಫಾರ್ಮಸಿಸ್ಟ್ ಸಂಘದ ಅಧ್ಯಕ್ಷರಾದ ಗಣೇಶ ರಾವ್, ಸಹ ಪ್ರಾಧ್ಯಾಪಕ ಪ್ರಸನ್ನ ಉಪಸ್ಥಿತರಿದ್ದರು. ಉಪನ್ಯಾಸಕಿ ಸಂಜನ ನಿರೂಪಿಸಿ, ಲಿಖಿತಾ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post