ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ವತಿಯಿಂದ ನ.8 ಹಾಗೂ 9ರಂದು ಸಿಂಧೂರ ನಮನ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದನ್ನು ಭಾರತದ ರಕ್ಷಣಾ ಪಡೆಗಳಿಗೆ ಅರ್ಪಿಸುವ ಉದ್ದೇಶದ ಮೂಲಕ ಮಾದರಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್’ನ 17ನೇ ಸಂಗೀತ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಈ ಸುಂದರ ಕಾರ್ಯಕ್ರಮವನ್ನು ದೇಶದ ರಕ್ಷಣಾ ಪಡೆಗಳಿಗೆ ಸಮರ್ಪಿಸಲಾಗುತ್ತದೆ.
ಜಯನಗರ 8ನೆ ಬ್ಲಾಕ್, ಜಯರಾಮ ಸೇವಮಂಡಳಿಯ ಎರಡನೇ ಮಹಡಿಯ ಸಭಾಂಗಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?
ಸಿಂಧೂರ ನಮನ
ಮುಂಜಾನೆ 9 ಗಂಟೆಯ ಕಾರ್ಯಕ್ರಮದಲ್ಲಿ ವಿದೂಷಿ ಮಾಲಿನಿ ಸುಬ್ರಹ್ಮಣ್ಯ ಅವರ ಗಾಯನ ನಡೆಯಲಿದ್ದು, ವಿ.ಸಿ.ವಿ. ಶೃತಿ ಅವರು ಪಿಟೀಲು, ವಿ.ಆರ್. ನರಸಿಂಹನ್ ಅವರು ಮೃದಂಗ, ವಿ.ಎನ್. ಫಣೀಂದ್ರ ಅವರು ಘಟ ಪಕ್ಕವಾದ್ಯದಲ್ಲಿ ಸಹಕಾರ ನೀಡಲಿದ್ದಾರೆ.
11 ಗಂಟೆಗೆ ನಡೆಯಲಿರುವ ವಿ.ಲಾವಣ್ಯ ಕೃಷ್ಣಮೂರ್ತಿ ಗಾಯನ ಕಾರ್ಯಕ್ರಮಕ್ಕೆ ವಿ. ಟಿ.ಎಸ್. ಕೃಷ್ಣಮೂರ್ತಿ ಪಿಟೀಲಿನಲ್ಲಿ, ವಿ.ಬಿ.ಎಸ್. ಆನಂದ್ ಮೃದಂಗದಲ್ಲಿ, ವಿ. ಎನ್. ಫಣೀಂದ್ರ ಘಟದಲ್ಲಿ ಸಾಥ್ ನೀಡಲಿದ್ದಾರೆ.
ಸಂಜೆ 5 ಗಂಟೆಗೆ ಡಾ.ಕೆ. ವಾಗೀಶ್ ಅವರ ಗಾಯನಕ್ಕೆ, ವಿ. ನಳಿನಾ ಮೋಹನ್ ಪಿಟೀಲಿನಲ್ಲಿ, ವಿ.ಎನ್. ವಾಸುದೇವ್ ಮೃದಂಗದಲ್ಲಿ, ವಿ.ಬಿ.ಜೆ. ಕಿರಣ್ ಕುಮಾರ್ ಖಂಜಿರದಲ್ಲಿ ಸಾಥ್ ನೀಡಲಿದ್ದಾರೆ.
ಸಂಜೆ 7 ಗಂಟೆಗೆ ವಿ.ಜಿ.ಕೆ. ಮನಮೋಹನ್ ಗಾಯನಕ್ಕೆ ವಿ. ಕೇಶವ್ ಮೋಹನ್ ಪಿಟೀಲಿನಲ್ಲಿ, ವಿ.ಎ. ರಾಧೇಶ್ ಮೃದಂಗದಲ್ಲಿ, ವಿ.ಬಿ.ಜೆ. ಕಿರಣ್ ಕುಮಾರ್ ಖಂಜಿರದಲ್ಲಿ ಸಾಥ್ ನೀಡಲಿದ್ದಾರೆ.
ಇನ್ನು, ನ.9ರಂದು ಬೆಳಗ್ಗೆ 8.30ಕ್ಕೆ ಡಾ.ಸತ್ಯನಾರಾಯಣ ರಾಜು ಅವರ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ನಂತರ 10 ಗಂಟೆಗೆ ವೀರ ನಾರಿಯರಿಗೆ ಅಭಿನಂದನೆಗಳು ಎಂಬ ಕಲ್ಪನೆಯಡಿ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಆಹ್ವಾನಿತರಾಗಿ ಅಕ್ಯುರೆಕ್ಸ್ ಅಧ್ಯಕ್ಷ ರಾಮಮೋಹನ್, ಟಿವಿ9 ಕಾರ್ಯನಿರ್ವಾಹಕ ನಿರ್ಮಾಪಕ ರಂಗನಾಥ್ ಭಾರದ್ವಾಜ್ ಪಾಲ್ಗೊಳ್ಳಲಿದ್ದಾರೆ.
ವಿದ್ವಾನ್ ಚೆಲುವ ರಾಜು (ಮೃದಂಗ), ವಿದ್ವಾನ್ ಟಿ.ಆರ್. ಶ್ರೀನಾಥ್ (ಕೊಳಲು), ವಿದ್ವಾನ್ ಎಸ್.ಎ. ಶಶಿಧರ್ (ಕೊಳಲು), ವಿದ್ವಾನ್ ವೇಣುಗೋಪಾಲ್ ಹೆಮ್ಮಿಗೆ (ಕೊಳಲು), ವಿದ್ವಾನ್ ವಾಸುದೇವ್ ಎನ್. (ಮೃದಂಗ), ವಿದುಷಿ ಸುಕನ್ಯಾ ರಾಮ ಗೋಪಾಲ್ (ಘಟ), ವಿದುಷಿ ಯೋಗವಂದನಾ (ವೀಣಾ) ಅವರುಗಳಿಗೆ `ಸಾಮ ಪುರಸ್ಕಾರ` ನೀಡಿ ಗೌರವಿಸಲಾಗುವುದು.
ಚಿ ಪ್ರಣವ್ ಕಿಕ್ಕೇರಿ (ಗಾಯನ), ನಿಶಾಂತ್ ಎಂ (ಗಾಯನ), ರುಚಿರಾ ಜ್ಯೋತ್ಸ್ನಾ (ಗಾಯನ), ಕ್ಷಮಾ ಅಗ್ನಿಹೋತ್ರಿ (ನೃತ್ಯ), ಹಂಸ ಬಿ.ಎನ್. (ಪಿಟೀಲು), ಸುಮುಖ್ ಕಾರಂತ್ (ಖಂಜಿರಾ), ಅಮೋಘ ಕೈಪಾ ಮಧುಸೂಧನ್ (ಮೃದಂಗ) ಅವರುಗಳಿಗೆ ಸಾಮ ಯುವ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಕುಂ. ವೈಭವಿ ಕಶ್ಯಪ್ (ರೇಖಾಚಿತ್ರ), ಕುಂ. ಸಾನ್ವಿ (ಕೊನ್ನಕ್ಕೋಲ್), ಕುಂ. ರೋಹಿಣಿ (ಗಾಯನ), ಕುಂ. ಮೌಕ್ತಿಕ (ರೇಖಾಚಿತ್ರ ಮತ್ತು ಪಿಟೀಲು), ಕುಂ. ಶಿವಾತ್ಮಿಕಾ (ಪಿಟೀಲು), ಕುಂ. ಸೌಮ್ಯ ಭಟ್ (ಸಂಸ್ಕೃತ ಮತ್ತು ಸಂಗೀತ) ಅವರುಗಳಿಗೆ ಬಾಲ ಪುರಸ್ಕಾರ ನೀಡಲಾಗುವುದು.
ಕುಂ. ವಲ್ಲಭಿ ಭಾರದ್ವಾಜ್ (ಸಂಗೀತ) ಅವರಿಗೆ ಪ್ರತಿಭಾ ಶ್ಲಾಘನೆ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ಶ್ರೀನಿವಾಸನ್ ಪುತ್ತೂರು ಅವರಿಂದ ಹಾಸ್ಯ ಪ್ರಜ್ಞೆ ಕಾರ್ಯಕ್ರಮ ನಡೆಯಲಿದ್ದು, 3 ಗಂಟೆಗೆ ಕು.ರುಚಿರಾ ಶರ್ಮಾ ಅವರಿಂದ ನಡೆಯಲಿರುವ ಗಾಯನಕ್ಕೆ ಕು. ಹಂಸ ನಾಗರಾಜ್ ಅವರು ಪಿಟೀಲಿನಲ್ಲಿ, ಚಿ.ಕೃಷ್ಣ ವೇದಾಂತ್ ಅವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.
ಸಂಜೆ 6 ಗಂಟೆಗೆ ವಿದ್ವಾನ್ ಡಿ. ಬಾಲಕೃಷ್ಣ ಅವರಿಂದ ವೀಣಾ ವಾದನ ನಡೆಯಲಿದ್ದು, ವಿ.ಬಿ.ಎಸ್. ಪ್ರಶಾಂತ್ ಮೃದಂಗದಲ್ಲಿ ಹಾಗೂ ವಿ.ಬಿ.ಆರ್. ರವಿಕುಮಾರ್ ಅವರು ಘಟದಲ್ಲಿ ಸಾಥ್ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post