ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಎಫ್-8 ಮತ್ತು ಎಎಫ್-12 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.11 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಆಲ್ಕೋಳ, ಇಂದಿರಾಗಾಂಧಿ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಕೆಎಸ್’ಆರ್‌ಟಿಸಿ ಲೇಔಟ್, ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ, ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಕುವೆಂಪು ಬಡಾವಣೆ, ಲಕ್ಷ್ಮಿ ಪುರ, ಕೆಎಚ್ಬಿ ಎ ನಿಂದ ಎಫ್ ಬ್ಲಾಕ್’ವರೆಗೆ, ಕರಿಯಣ್ಣ ಬಿಲ್ಡಿಂಗ್, ತಿಮ್ಮಕ್ಕ ಲೇಔಟ್, 100 ಅಡಿ ರಸ್ತೆ, ಕೆಂಚಪ್ಪ ಲೇಔಟ್, ಸಹ್ಯಾದ್ರಿ ನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮಿ ಲೇಔಟ್, ಪುಷ್ಪಗಿರಿ ಲೇಔಟ್, ಎಂಎಂಎಸ್ ಲೇಔಟ್, ಭೋವಿ ಕಾಲೋನಿ, ಆದರ್ಶ ನಗರ, ಆಟೋಕಾಲೋನಿ, ಕಾಶಿಪುರ ರೈಲ್ವೆ ಟ್ರಾಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post