ಕಲ್ಪ ಮೀಡಿಯಾ ಹೌಸ್ | ಮುಂಬೈ |
ಕಾಂತಾರ ಚಾಪ್ಟರ್ 1ರ ಯಶಸ್ಸಿನ ಉತ್ತುಂಗದಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ #RishabShetty ಹೋದೆಡೆಯೆಲ್ಲಾ ಅದ್ದೂರಿ ಸ್ವಾಗತ ದೊರೆಯುತ್ತಿದ್ದು, ಮುಂಬೈನಲ್ಲಿ ಅಭಿಮಾನಿಗಳು ಅಕ್ಷರಶಃ ರಾಶಿ ರಾಶಿ ಹೂಮಳೆಗರೆದು ಸ್ವಾಗತ ಕೋರಿದ್ದಾರೆ.
ದೇಶ ವಿದೇಶಗಳಲ್ಲಿ ಚಾಪ್ಟರ್ 1 #KantaraChapter1 ಬಾಕ್ಸ್ ಆಫೀಸ್’ನಲ್ಲಿ ಧೂಳೆಬ್ಬಿಸುತ್ತಾ ಅಬ್ಬರಿಸುತ್ತಿದ್ದು, 1 ಸಾವಿರ ಕೋಟಿ ರೂ. ಕಲೆಕ್ಷನ್’ನತ್ತ ಸಾಗುತ್ತಿದೆ.
ಇದರ ಬೆನ್ನಲ್ಲೇ ಮುಂಬೈನ #Mumbai ಗೈಟಿ ಗ್ಯಾಲಕ್ಸಿ ಥಿಯೇಟರ್’ಗೆ ಭೇಟಿ ನೀಡಿದ ರಿಷಬ್ ಅವರನ್ನುನ ಅಭಿಮಾನಿಗಳು ಅವರ ಮೇಲೆ ಹೂಚೆಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ರಿಷಬ್ ಶೆಟ್ಟಿ ಕಾರ್’ನ ಸನ್ರೂಪ್’ನಲ್ಲಿ ನಿಂತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಥಿಯೇಟರ್ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ರಿಷಬ್ ಅವರನ್ನ ವಿಭಿನ್ನವಾಗಿ ಸ್ವಾಗತ ಮಾಡಿದ್ದಾರೆ. ರಾಶಿ ರಾಶಿ ಹೂವಿನ ವೃಷ್ಠಿ ಮಾಡಿ ಸ್ವಾಗತಿಸಿದ್ದು, ಅಭಿಮಾನಿಗಳಿಗೆ ಅವರು ಕೈಕುಲುಕಿದ್ದಾರೆ. ಅಲ್ಲದೇ, ಅಭಿಮಾನಿಗಳ ಜೊತೆಯಲ್ಲಿಯೇ ರಿಷಬ್ ಕುಳಿತು ಸಿನಿಮಾ ನೋಡಿದ್ದು ವಿಶೇಷವಾಗಿದೆ.
ಇನ್ನು, ರಿಷಬ್ ಶೆಟ್ಟಿಯನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಬಹುಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ದೇಶ-ವಿದೇಶದಲ್ಲಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ತೆರೆಕಂಡು ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಆದರೆ ಒಂದು ಕಡೆ ಈ ಸಿನಿಮಾದಲ್ಲಿ ತೋರಿಸಿಲಾದ ದೈವದ ಕುರಿತಾಗಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ.
ಈ ನಿಟ್ಟಿನಲ್ಲಿ ಚಿತ್ರತಂಡ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳುತ್ತಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರಕ್ಕೆ ಅಭೂತಪೂರ್ವ ಯಶಸ್ಸು ಸಿಗುತ್ತಿದೆ.
ಈಗಾಗಲೇ 600 ಕೋಟಿ ರೂ. ಸಂಗ್ರಹ ಮಾಡಿಕೊಂಡು 1 ಸಾವಿರ ಕೋಟಿ. ರೂ. ಕ್ಲಬ್ ಸೇರುವತ್ತ ಸಾಗುತ್ತಿದೆ. ಅಲ್ಲದೇ, ಒಟಿಟಿ ಹಕ್ಕು 125 ಕೋಟಿ ರೂ.ಗೆ ಮಾರಾಟಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















