ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾನಸಿಕ ಆರೋಗ್ಯ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕಾಗಿದೆ ಎಂದು ನ್ಯಾ.ಎಂ.ಎಸ್. ಸಂತೋಷ್ ಹೇಳಿದರು.
ಗೋಪಿ ವೃತ್ತದಲ್ಲಿ ಮಾನಸಿಕ ಆರೋಗ್ಯ ಅರಿವು ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯ ಸಂರಕ್ಷಣೆಯು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಮಾನಸಿಕ ಆರೋಗ್ಯ ಕಾಯಿದೆ 2017ರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಮಾನಸಿಕ ಆರೋಗ್ಯವೆಂಬುದು ತನ್ನ ಹಕ್ಕು ಎಂದು ಅವರು ತಿಳಿಸಿದರು.

ಡಾ. ರಜನಿ ಪೈ ಹಾಗೂ ಡಾ. ಪ್ರೀತಿ ಶಾನಭಾಗ ರವರು ತಮ್ಮ ಸಂಸ್ಥೆಗಳ ಮೂಲಕ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ವಿವಿಧ ಸೇವೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ, ಇಲ್ಲಿಯ ವಿದ್ಯಾರ್ಥಿಗಳ ಮೂಲಕ ಒಂದು ಮಾನಸಿಕ ಆರೋಗ್ಯ ಸಂರಕ್ಷಣೆಯ ಪಡೆಯನ್ನೇ ನಿರ್ಮಾಣ ಮಾಡುತ್ತಿದ್ದಾರೆ. ಮಾನಸಿಕ ಆರೋಗ್ಯದ ಕುರಿತು ಆಗಲಿ ಮಾನಸಿಕ ಅನಾರೋಗ್ಯದ ಕುರಿತಾಗಲಿ ಜನರು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಮಾನಸ ಸಂಸ್ಥೆ ಇಂತಹ ಸಾರ್ವಜನಿಕ ಸ್ಥಳದಲ್ಲೂ ಮಾನಸಿಕ ಆರೋಗ್ಯವನ್ನು ಮುಕ್ತವಾಗಿ ಮಾತನಾಡಬೇಕು ಹಾಗೂ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ತೋರಿಸಿ ಕೊಡುತ್ತಿದೆ. ಇದು ಒಂದು ಅತ್ಯಂತ ಪ್ರಶಂಸನೀಯ ವಿಷಯ ಎಂದರು.
ನಮ್ಮ ಕಾನೂನು ಸೇವಾ ಪ್ರಾಧಿಕಾರವೂ ಕೂಡ ಮಾನಸಿಕ ಆರೋಗ್ಯ ಪರಿಶೀಲನಾ ಸಮಿತಿಯನ್ನು ರಚಿಸಿ ನಿನ್ನೆಯಷ್ಟೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಅದನ್ನು ಉದ್ಘಾಟಿಸಿದೆ. ಅದಕ್ಕೆ ಡಾ.ರಜನೀ ಪೈರವರು ಒಬ್ಬ ಸದಸ್ಯರಾಗಿರುತ್ತಾರೆ. ಮಾನಸಿಕ ಆರೋಗ್ಯ ಹಾಗೂ ಮಾನಸಿಕ ಅಸ್ವಸ್ಥತೆ, ಇವೆರಡರ ಕುರಿತು ಮುಕ್ತವಾಗಿ ಮಾತನಾಡುವ ಪರಸ್ಪರ ಬೆಂಬಲ ಮೂಡಿಸುವ ವಾತಾವರಣ ನಮ್ಮಲ್ಲಿ ಸೃಷ್ಟಿಯಾಗಬೇಕು ಎಂದು ಅವರು ತಿಳಿಸಿದರು.
ಮನೋಸಾಮಾಜಿಕ ಸಂರಕ್ಷಣೆಗಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಿದ ನಂತರ ಮಾತನಾಡಿದ ಶಿವಮೊಗ್ಗದ ಖ್ಯಾತ ಕವಯತ್ರಿ ಸವಿತಾ ನಾಗಭೂಷಣರವರು, ಮಾನಸಿಕ ಆರೋಗ್ಯ ಎಂಬುದು ಜೀವನದಲ್ಲಿ ಅತ್ಯಂತ ಪ್ರಮುಖ ಅಂಶ. ಮನಸ್ಸಿನ ಆರೋಗ್ಯವಿಲ್ಲದ ವ್ಯಕ್ತಿ ಯಾವುದನ್ನು ಸಾಧಿಸಲಾರ. ನಮ್ಮ ಮಾನಸಿಕ ಆರೋಗ್ಯವನ್ನು ಉಳಿಸಿಕೊಳ್ಳಬಲ್ಲ ದಾರಿಯನ್ನು ನಾವು ಕಂಡುಕೊಳ್ಳಬೇಕು. ಮಾತ್ರವಲ್ಲ ಮಾನಸಿಕ ತೊಂದರೆಗೆ ಒಳಗಾದ ಯಾವುದೇ ವ್ಯಕ್ತಿಗೆ ಸೂಕ್ತ ಸಮಾಧಾನ ಬೆಂಬಲ ಹಾಗೂ ಭರವಸೆಯನ್ನು ನೀಡುವ ಮನೋಭಾವ ನಮ್ಮೆಲ್ಲರದ್ದು ಆಗಿರಬೇಕು ಎಂದರು.

ಈ ಪ್ರತಿಜ್ಞೆಯಲ್ಲಿ ಮಾನಸಿಕ ಆರೋಗ್ಯವನ್ನು ಹಕ್ಕು ಎಂದು ಪರಿಗಣಿಸುವ ಹಾಗೂ ಅದರ ವಿರುದ್ಧದ ಮಿಥ್ಯೆಗಳನ್ನು ಹೋಗಲಾಡಿಸಿಕೊಳ್ಳುವ ಹಾಗೂ ಮಾನಸಿಕ ಆರೋಗ್ಯವನ್ನು ಎತ್ತಿ ಹಿಡಿಯುವ ಕಾಯಿದೆಗಳನ್ನು ಸಮರ್ಥಿಸುವ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಡಾ.ಸಂಧ್ಯಾ ಕಾವೇರಿ ಅವರು, ಮನೋ ಸಾಮಾಜಿಕ ಸಂರಕ್ಷಣೆ ಎಂಬುದು ಮಾನಸಿಕ ಆರೋಗ್ಯದ ಕುರಿತ ಅರಿವು, ಮಾನಸಿಕ ಸ್ವಾಸ್ಥ್ಯಕ್ಕೆ ತೊಂದರೆಯಾದಾಗ ಆರೋಗ್ಯ ಸೇವೆಗಳನ್ನು ಶೀಘ್ರವಾಗಿ ಪಡೆಯುವುದು ಹಾಗೂ ದೊರಕಿಸುವುದಾಗಿದೆ. ಅಲ್ಲದೇ, ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು, ಮಾನಸಿಕ ಬೆಂಬಲವನ್ನು ನೀಡಬಲ್ಲ ಸಾಮರಸ್ಯದ ಸಹಕಾರದ ವಿಶ್ವಾಸದ ಸಾಮಾಜಿಕ ವಾತಾವರಣವನ್ನು ಕಲ್ಪಿಸಿಕೊಳ್ಳುವುದು, ಮಾನಸಿಕ ಆರೋಗ್ಯವನ್ನು ಹಕ್ಕು ಎಂದು ಪರಿಗಣಿಸಿ ಗೌರವಿಸುವುದು, ಪ್ರತಿಯೊಬ್ಬರ ಘನತೆ ಗೌರವ ಹಾಗೂ ಭಾವನಾತ್ಮಕ ಸ್ಥಿತಿಗತಿಗಳನ್ನು ಗೌರವಿಸಿ ಬಾಳುವುದು ಇತ್ಯಾದಿ ಅಂಶಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಮಾನಸಿಕ ಆರೋಗ್ಯವೆಂಬುದು ಇಡೀ ಸಮಾಜ ಅತಿ ಅಗತ್ಯವಾಗಿ ಪರಿಗಣಿಸಬೇಕಾದ ಹಾಗೂ ಸಮಗ್ರ ಆರೋಗ್ಯದಲ್ಲಿ ಸೇರಿಸಿಕೊಳ್ಳಬೇಕಾದ ಅಂಶ ಎಂಬುದನ್ನು ಸಾರ್ವಜನಿಕರ ಗಮನ ಸೆಳೆದು ಮನವರಿಕೆ ಮಾಡುವುದು ಸಪ್ತಾಹ ಕಾರ್ಯಕ್ರಮದ ಹಾಗೂ ಇಂದಿನ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ಉದ್ದೇಶ ಎಂದವರು ತಿಳಿಸಿದರು.

ಉಪನ್ಯಾಸಕರಾದ ಶ್ರೀದೇವಿ ಕಾರ್ಯಕ್ರಮವನ್ನು ನಿರೂಪಿಸಿ, ಮಂಜುನಾಥ ಸ್ವಾಮಿ ವಂದಿಸಿದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ಮನಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಅರ್ಚನಾ ಭಟ್, ಡಾ. ಹರಿಹರನ್, ಮಂಜುನಾಥ್ ಹಾಗೂ ಡಾ.ಕೆ.ಟಿ. ಶ್ವೇತಾ ವಹಿಸಿದ್ದರು.
ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಸಿಬ್ಬಂದಿಗಳು ಹಾಗೂ ಹಲವಾರು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊಂಬತ್ತಿ ಬೆಳಗಿಸಿ ಪ್ರತಿಜ್ಞಾವಿಧಿಯನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಉದ್ದೇಶ, ಏಳು ದಿನಗಳ ಕಾಲ ನಡೆಸಲಾದ ವಿವಿಧ ಅರಿವಿನ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಎಲ್ಲರನ್ನು ಈ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು.
ಸಪ್ತಾಹದಲ್ಲಿ ಏನೆಲ್ಲಾ ನಡೆಸಲಾಯಿತು?
ಮಾನಸ ಸಂಸ್ಥೆಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ಅ.10ರಂದು ಶಿವಮೊಗ್ಗದ ಡಿಎಆರ್ ಸಭಾಂಗಣದಿAದ ಮಾನಸ ನರ್ಸಿಂಗ್ ಹೋಂವರೆಗೆ ಜಾಗೃತಿ ಜಾಥಾವನ್ನು ನಡೆಸಿದ್ದರು. ಅದೇ ದಿನ ಜಿಲ್ಲಾ ಪೊಲೀಸ್ ಇಲಾಖೆಯ ಸುಮಾರು 200 ಸಿಬ್ಬಂದಿಗಳಿಗೆ ಒತ್ತಡ ನಿರ್ವಹಣೆ ಹಾಗೂ ತುರ್ತು ಸನ್ನಿವೇಶಗಳಲ್ಲಿ ಮಾನಸಿಕ ಆರೋಗ್ಯ ಸೇವೆ ವಿಷಯಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅವರು ನಡೆಸಿದ್ದರು. ನ್ಯಾಯಾಧೀಶರಾದ ಎಂ.ಎಸ್. ಸಂತೋಷ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಉಪಸ್ಥಿತರಿದ್ದರು.
ಅದೇ ದಿನ ವೆಬಿನಾರ್ ಮೂಲಕ ಮಾನಸಿಕ ಆರೋಗ್ಯ ಸೇವೆ ಲಭ್ಯತೆ ತುರ್ತು ಹಾಗೂ ಬಿಕ್ಕಟ್ಟು ಸನ್ನಿವೇಶದಲ್ಲಿ ಎಂಬ ವಿಷಯದ ಕುರಿತು ವೆಬಿರ್ನಾ ಮೂಲಕ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಅ.11ರಂದು ಕಾಲೇಜಿನ ವಿದ್ಯಾರ್ಥಿಗಳು ಶಿವಮೊಗ್ಗ ಸಿಟಿ ಸೆಂಟರ್ ಮಾಲ್ ನಲ್ಲಿ ನೃತ್ಯರೂಪಕದ ಮೂಲಕ ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಸಾರ್ವಜನಿಕರ ಗಮನವನ್ನು ಸೆಳೆದರು. ಅದೇ ಸ್ಥಳದಲ್ಲಿ ವಿದ್ಯಾರ್ಥಿಗಳು ಅಭಿವ್ಯಕ್ತಿ ಕಲೆ ಹಾಗೂ ಚಿಕಿತ್ಸೆ ಎಂಬ ವಿಷಯದ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಅ.13ರಂದು ಕಾಲೇಜಿನ ಮನಃಶಾಸ್ತç ವಿಭಾಗದ ಮೂಲಕ ಹದಿಹರೆಯದ ವಿದ್ಯಾರ್ಥಿಗಳಿಗಾಗಿ ಆಪ್ಟಿಟ್ಯೂಡ್ ಪರೀಕ್ಷೆ ಅಂದರೆ ಅಭಿಕ್ಷಮತೆ ಪರೀಕ್ಷೆಯನ್ನು ನಡೆಸಿ ಮುಂದಿನ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಅವರನ್ನು ಪ್ರೋತ್ಸಾಹಿಸಲಾಯಿತು.
ಅ.14ರಂದು ಕಾಲೇಜಿನ ಮನಃಶಾಸ್ತç ವಿದ್ಯಾರ್ಥಿಗಳು ಡಿಸಾರ್ಸ್ಟ್ ಮ್ಯಾನೇಜ್ಮೆಂಟ್ ಅಥವಾ ಬಿಕ್ಕಟ್ಟು ನಿರ್ವಹಣೆ ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು ನಡೆಸಿಕೊಟ್ಟರು.
ಅ.15ರಂದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಆಪ್ತ ಎಂಬ ಆಪ್ತ ಸಮಾಲೋಚನಾ ಹಾಗೂ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿ ಆಪ್ತ ಸಮಾಲೋಚನೆಯ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಮನೋವೈದ್ಯರಾದ ಡಾ.ಪ್ರವೀಣ್ ಹಾಗೂ ಹಿರಿಯ ಆಪ್ತ ಸಮಾಲೋಚಕರಾದ ಗಣೇಶ ರಾವ್ ನಾಡಿಗೇರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಅ.16ರಂದು ಕಟೀಲ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನಶಾಸ್ತç ಪದವಿ ವಿದ್ಯಾರ್ಥಿಗಳು ಶಿವಮೊಗ್ಗ ಎಫ್’ಎಂ ಮೂಲಕ ಮಾನಸಿಕ ಆರೋಗ್ಯ ಹಾಗೂ ಅದರ ಪ್ರಾಮುಖ್ಯತೆಯ ಕುರಿತು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅ.17ರಂದು ಡಾ.ಸುಭಾಸಿಸ್ ಭಾದ್ರ ,ಮುಖ್ಯಸ್ಥರು ಬಿಕ್ಕಟ್ಟು ನಿರ್ವಹಣಾ ಮನಶಾಸ್ತçಜ್ಞ ವಿಭಾಗ ,ಬೆಂಗಳೂರು ಇವರಿಂದ ಮಾನಸಿಕ ಆರೋಗ್ಯ ಪ್ರಥಮ ಚಿಕಿತ್ಸೆ/ಸೈಕಲಾಜಿಕಲ್ ಫಸ್ಟೇಡ್ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post