ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೀಪಾವಳಿ ಹಬ್ಬದ #Deepavali Festival ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಹಬ್ಬದ ಜನದಟ್ಟಣೆಯನ್ನು ಕಡಿಮೆ ಮಾಡಲು ನೈಋತ್ಯ ರೈಲ್ವೆ ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು #Special Express Train ಓಡಿಸಲು ನಿರ್ಧರಿಸಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಎಲ್ಲಾ ವಿಶೇಷ ರೈಲುಗಳ ವಿವರ ಹೀಗಿದೆ.
- 06203 ಸಂಖ್ಯೆಯ (ಒಂದು ಟ್ರಿಪ್) ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ಎಕ್ಸ್’ಪ್ರೆಸ್ ವಿಶೇಷ ರೈಲು ಅ.18ರಂದು 19:40 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್’ನಿಂದ ಹೊರಟು ಮರುದಿನ ಬೆಳಿಗ್ಗೆ 07:30 ಗಂಟೆಗೆ ಕಲಬುರಗಿಗೆ ಆಗಮಿಸುತ್ತದೆ.
- ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06204 ಕಲಬುರಗಿ – ಯಶವಂತಪುರ ಎಕ್ಸ್’ಪ್ರೆಸ್ ವಿಶೇಷ ರೈಲು ಅ.19ರಂದು ಬೆಳಿಗ್ಗೆ 09:35 ಗಂಟೆಗೆ ಕಲಬುರಗಿಯಿಂದ ಹೊರಟು ಅದೇ ದಿನ ರಾತ್ರಿ 20:30 ಗಂಟೆಗೆ ಯಶವಂತಪುರ ತಲುಪುತ್ತದೆ.
- 06207 ಸಂಖ್ಯೆಯ ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ಎಕ್ಸ್’ಪ್ರೆಸ್ ವಿಶೇಷ ರೈಲು ಅ.20ರಂದು ಸಂಜೆ 7:40 ಕ್ಕೆ ಬೆಂಗಳೂರು ಕಂಟೋನ್ಮೆಂಟ್’ನಿಂದ ಹೊರಟು ಮರುದಿನ ಬೆಳಿಗ್ಗೆ 7:30 ಕ್ಕೆ ಕಲಬುರಗಿಗೆ ಆಗಮಿಸುತ್ತದೆ.
- ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06208 ಕಲಬುರಗಿ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್’ಪ್ರೆಸ್ ವಿಶೇಷ ರೈಲು ಅ.21ರಂದು ಬೆಳಿಗ್ಗೆ 9:35 ಕ್ಕೆ ಕಲಬುರಗಿಯಿಂದ ಹೊರಟು ಅದೇ ದಿನ ರಾತ್ರಿ 20:30 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ.
- 06209 ಸಂಖ್ಯೆಯ ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ಎಕ್ಸ್’ಪ್ರೆಸ್ ವಿಶೇಷ ರೈಲು ಅ.21ರಂದು 22:10 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್’ನಿAದ ಹೊರಟು ಮರುದಿನ 09:00 ಗಂಟೆಗೆ ಕಲಬುರಗಿ ತಲುಪಲಿದೆ.
- ಹಿಂದಿರುಗುವ ದಿಕ್ಕಿನಲ್ಲಿ, 06210 ಸಂಖ್ಯೆಯ ಕಲಬುರಗಿ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್’ಪ್ರೆಸ್ ವಿಶೇಷ ರೈಲು ಅ.22ರಂದು 10:45 ಗಂಟೆಗೆ ಕಲಬುರಗಿಯಿಂದ ಹೊರಟು ಅದೇ ದಿನ 22:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಯಾವ ಮಾರ್ಗ?
ಮೇಲಿನ ಎಲ್ಲಾ ರೈಲುಗಳು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಾಬಾದ್ ಮಾರ್ಗದ ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತವೆ.
ಎಷ್ಟು ಬೋಗಿ ಇರಲಿವೆ?
- ಪ್ರತಿಯೊಂದು ವಿಶೇಷ ರೈಲು 22 ಬೋಗಿಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ 20 ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು 2 ದ್ವಿತೀಯ ದರ್ಜೆ ಲಗೇಜ್-ಕಮ್-ದಿವ್ಯಾಂಗಜನ್ ಬೋಗಿಗಳು ಇರುತ್ತವೆ.
- 06235 ಸಂಖ್ಯೆಯ (ಎರಡು ಟ್ರಿಪ್) ಯಶವಂತಪುರ – ಬನಾರಸ್ ಎಕ್ಸ್’ಪ್ರೆಸ್ ವಿಶೇಷ ರೈಲು ಅ.19ಮತ್ತು ಅ.26ರ ಭಾನುವಾರದಂದು ಬೆಳಿಗ್ಗೆ 07:00 ಗಂಟೆಗೆ ಯಶವಂತಪುರದಿಂದ ಹೊರಟು ಮಂಗಳವಾರ ಬೆಳಿಗ್ಗೆ 05:00 ಗಂಟೆಗೆ ಬನಾರಸ್ ತಲುಪಲಿದೆ.
- ಹಿಂದಿರುಗುವ ದಿಕ್ಕಿನಲ್ಲಿ, 06236 ಸಂಖ್ಯೆಯ ಬನಾರಸ್ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್’ಪ್ರೆಸ್ ವಿಶೇಷ ರೈಲು ಅ.22 ಮತ್ತು ಅ.29ರ ಬುಧವಾರ ಮಧ್ಯಾಹ್ನ 12:15 ಕ್ಕೆ ಬನಾರಸ್’ನಿಂದ ಹೊರಟು ಶುಕ್ರವಾರ ಬೆಳಿಗ್ಗೆ 05:00 ಕ್ಕೆ ಬೆಂಗಳೂರು ಕಂಟೋನ್ಮೆಂಟ್’ಗೆ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ?
ಯಲಹಂಕ, ಧರ್ಮಾವರಂ, ಅನಂತಪುರ, ಗೂಟಿ, ಧೋನೆ, ಕರ್ನೂಲ್ ನಗರ, ಮಹಬೂಬ್ ನಗರ, ಕಾಚೆಗುಡ, ಕಾಜಿಪೇಟೆ, ರಾಮಗುಂಡಂ, ಬಲ್ಹರ್ಷ, ನಾಗ್ಪುರ, ಇಟಾಸಿರ್, ಮದನ್ ಮಹಲ್, ಕಟ್ನಿ, ಸತ್ನಾ, ಮಾಣಿಕ್ಪುರ, ಪ್ರಯಾಗ್ ರಾಜ್ ಛೋಕಿ ಮತ್ತು ವಾರಣಾಸಿ ನಿಲ್ದಾಣಗಳು.
ಎಷ್ಟು ಬೋಗಿಗಳು ಇರಲಿವೆ?
- ವಿಶೇಷ ರೈಲು 23 ಬೋಗಿಗಳನ್ನು ಒಳಗೊಂಡಿದ್ದು, 2 ಎಸಿ 2-ಟೈರ್, 5 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್’ಎಲ್‌ಆರ್/ಡಿ ಕೋಚ್’ಗಳನ್ನು ಒಳಗೊಂಡಿರುತ್ತದೆ.
- 06261 ಸಂಖ್ಯೆಯ ಯಶವಂತಪುರ – ಮುಜಫರ್ಪುರ ಎಕ್ಸ್’ಪ್ರೆಸ್ ವಿಶೇಷ ರೈಲು ಅ.22ರ ಬುಧವಾರ ಬೆಳಿಗ್ಗೆ 07:00 ಗಂಟೆಗೆ ಯಶವಂತಪುರದಿಂದ ಹೊರಟು ಶುಕ್ರವಾರ ಮಧ್ಯಾಹ್ನ 12:00 ಗಂಟೆಗೆ ಮುಜಫರ್ಪುರ ತಲುಪುತ್ತದೆ.
- ಹಿಂದಿರುಗುವ ದಿಕ್ಕಿನಲ್ಲಿ, 06262 ಸಂಖ್ಯೆಯ ಮುಜಫರ್ಪುರ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್’ಪ್ರೆಸ್ ವಿಶೇಷ ರೈಲು ಅ.24ರ ಶುಕ್ರವಾರ ರಾತ್ರಿ 23:45 ಗಂಟೆಗೆ ಮುಜಫರ್ಪುರದಿಂದ ಹೊರಟು ಸೋಮವಾರ ಬೆಳಿಗ್ಗೆ 06:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ.
ಎಲ್ಲೆಲ್ಲಿ ನಿಲುಗಡೆ?
ಯಲಹಂಕ, ಧರ್ಮಾವರಂ, ಅನಂತಪುರ, ಧೋನೆ, ಮಹಬೂಬ್ ನಗರ, ಕಾಚೆಗುಡ, ಕಾಜಿಪೇಟ್, ರಾಮಗುಂಡಂ, ಬಲ್ಹರ್ಷಾ, ನಾಗಪುರ, ಇಟಾಸಿರ್, ಜಬಲ್ಪುರ, ಸತ್ನಾ, ಪ್ರಯಾಗ್ ರಾಜ್ ಛೋಕಿ, ಪಂ.ದೀನ್ ದಯಾಳ್ ಉಪಾಧ್ಯಾಯ ಜೂ., ಬಕ್ಸಾರ್, ಅರಾ, ಹನಪುರ್ ಸ್ಟೇಷನ್.
ಎಷ್ಟು ಬೋಗಿಗಳು ಇರಲಿವೆ?
- ವಿಶೇಷ ರೈಲು 23 ಕೋಚ್’ಗಳನ್ನು ಒಳಗೊಂಡಿದ್ದು, ಫಸ್ಟ್-ಕಮ್-ಸೆಕೆಂಡ್ ಎಸಿ ಕೋಚ್, 3 ಎಸಿ 2-ಟೈರ್, 1 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್’ಎಲ್‌ಆರ್/ಡಿ ಕೋಚ್’ಗಳನ್ನು ಒಳಗೊಂಡಿರುತ್ತದೆ.
- 05541 ಸಂಖ್ಯೆಯ(ಐದು ಟ್ರಿಪ್) ದರ್ಭಂಗಾ-ಯಶವಂತಪುರ ಎಕ್ಸ್’ಪ್ರೆಸ್ ವಿಶೇಷ ರೈಲು ಅ.20 ರಿಂದ ಅ. 17ರವರೆಗೆ ಪ್ರತಿ ಸೋಮವಾರ ಮಧ್ಯಾಹ್ನ 3:35 ಕ್ಕೆ ಯಶವಂತಪುರದಿಂದ ಹೊರಟು ಗುರುವಾರ ಮಧ್ಯಾಹ್ನ 02:30 ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ.
- ಹಿಂದಿರುಗುವ ದಿಕ್ಕಿನಲ್ಲಿ, 05542 ಸಂಖ್ಯೆಯ ಯಶವಂತಪುರ – ದರ್ಭಂಗಾ ಎಕ್ಸ್’ಪ್ರೆಸ್ ವಿಶೇಷ ರೈಲು ಅ.23 ರಿಂದ ಅ.20 ರವರೆಗೆ ಪ್ರತಿ ಗುರುವಾರ ಮಧ್ಯಾಹ್ನ 1:15 ಕ್ಕೆ ಯಶವಂತಪುರದಿಂದ ಹೊರಟು ಭಾನುವಾರ ಬೆಳಿಗ್ಗೆ 04:30 ಕ್ಕೆ ದರ್ಭಂಗಾ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಸಮಸ್ತಿಪುರ್, ಮುಜಾಫಪುರರ್, ಹಾಜಿಫುರ್, ಸೋನ್ಪುರ್, ಛಾಪ್ರಾ, ಸಿವಾನ್, ಡಿಯೋರಿಯಾ ಸದರ್, ಗೋರಖ್ಪುರ್, ಗೊಂಡಾ, ಐಶ್ಬಾಗ್, ಕಾನ್ಪುರ್ ಸೆಂಟ್ರಲ್, ಓರೈ, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ, ಬೀನಾ, ಭೋಪಾಲ್, ಇಟಾಸಿರ್, ಆಮ್ಲಾ, ನಾಗ್ಪುರ, ಚಂದ್ರಾಪುರ, ಬಲ್ಹಶಾರ್, ಕಾಪುರ್, ರಾಮಗುಂಡಮ್, ಕಾಪುರ್, ರಾಮಗುಂಡ್ರಮ್, ಧೋಣೆ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕ ನಿಲ್ದಾಣಗಳು.
ಎಷ್ಟು ಬೋಗಿ ಇರಲಿವೆ?
ವಿಶೇಷ ರೈಲು 8 ಎಸಿ 3-ಟೈರ್, 6 ಸ್ಲೀಪರ್ ಕ್ಲಾಸ್, 8 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್’ಎಲ್’ಆರ್/ಡಿ ಕೋಚ್’ಗಳನ್ನು ಒಳಗೊಂಡಿರುವ 24 ಕೋಚ್’ಗಳನ್ನು ಒಳಗೊಂಡಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post