ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಚೆನ್ನೈ |
ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ಕೆಳಗಿನ ರೈಲುಗಳ ಸೇವೆಗಳನ್ನು ಮರುನಿಗದಿ, ನಿಯಂತ್ರಣ ಮತ್ತು ಭಾಗಶಃ ರದ್ದುಪಡಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಯಾವೆಲ್ಲಾ ರೈಲುಗಳ ಮರುನಿಗದಿ?
1. 16552 ಸಂಖ್ಯೆಯ ಅಶೋಕಪುರಂ – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸ್’ಪ್ರೆಸ್, ಅಕ್ಟೋಬರ್ 29, 31 , ನವೆಂಬರ್ 19, 21, 26, 28 ಮತ್ತು ಡಿಸೆಂಬರ್ 17, 19ರಂದು ಅಶೋಕಪುರಂನಿಂದ 40 ನಿಮಿಷ ತಡವಾಗಿ ಹೊರಡಲಿದೆ.
2. 66554 ಸಂಖ್ಯೆಯ ಅಶೋಕಪುರಂ – ಕೆಎಸ್’ಆರ್ ಬೆಂಗಳೂರು ಮೆಮೂ, ಅಕ್ಟೋಬರ್ 29, 31, ನವೆಂಬರ್ 19, 21, 26, 28 ಮತ್ತು ಡಿಸೆಂಬರ್ 17, 19ರಂದು ಅಶೋಕಪುರಂನಿಂದ 45 ನಿಮಿಷ ತಡವಾಗಿ ಹೊರಡಲಿದೆ.

1. 16586 ಸಂಖ್ಯೆಯ ಮುರ್ಡೇಶ್ವರ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್, ಅಕ್ಟೋಬರ್ 28, 30, ನವೆಂಬರ್ 18, 20, 25, 27 ಮತ್ತು ಡಿಸೆಂಬರ್ 16, 18 ರಂದು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
2. 06270 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್, ಅಕ್ಟೋಬರ್ 28, 30, ನವೆಂಬರ್ 18, 20, 25, 27 ಮತ್ತು ಡಿಸೆಂಬರ್ 16, 18 ರಂದು ಮಾರ್ಗಮಧ್ಯೆ 100 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
3. 66579 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಅಶೋಕಪುರಂ ಮೆಮೂ, ಅಕ್ಟೋಬರ್ 29, 31, ನವೆಂಬರ್ 19, 21, 26, 28 ಮತ್ತು ಡಿಸೆಂಬರ್ 17, 19ರಂದು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

1. 66579 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಅಶೋಕಪುರಂ ಮೆಮೂ, ಅಕ್ಟೋಬರ್ 29, 31, ನವೆಂಬರ್ 19, 21, 26, 28 ಮತ್ತು ಡಿಸೆಂಬರ್ 17, 19 ರಂದು ಪಾಂಡವಪುರ – ಅಶೋಕಪುರಂ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ಪಾಂಡವಪುರದಲ್ಲೇ ಅಂತ್ಯಗೊಳ್ಳುತ್ತದೆ.
2. 66554 ಸಂಖ್ಯೆಯ ಅಶೋಕಪುರಂ – ಕೆಎಸ್’ಆರ್ ಬೆಂಗಳೂರು ಮೆಮೂ, ಅಕ್ಟೋಬರ್ 29, 31, ನವೆಂಬರ್ 19, 21, 26, 28 ಮತ್ತು ಡಿಸೆಂಬರ್ 17, 19 ರಂದು ಅಶೋಕಪುರಂ – ಪಾಂಡವಪುರ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ನಿಗದಿತ ಸಮಯದಂತೆ ಅಶೋಕಪುರಂ ಬದಲು ಪಾಂಡವಪುರದಿಂದ ಹೊರಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post