ಕಲ್ಪ ಮೀಡಿಯಾ ಹೌಸ್ | ಮೈಸೂರು |
ರಾಷ್ಟ್ರೀಯ ಗೀತೆ #VandeMataram ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ನೈಋತ್ಯ ರೈಲ್ವೆ #SWR ಮೈಸೂರು ವಿಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಾರ್ಮೋನಿಯಂ ವಾದಕ ವೈ.ಎಂ. ಪುಟ್ಟಣ್ಣಯ್ಯ ಅವರನ್ನು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ದೇಶಭಕ್ತಿ ಸಂಯೋಜನೆಗಳ ಪ್ರಚಾರಕ್ಕೆ ನೀಡಿದ ಕೊಡುಗೆಗಾಗಿ ಡಿಆರ್’ಎಂ #DRM ವತಿಯಿಂದ ಸನ್ಮಾನಿಸಲಾಯಿತು.
ಈ ಐತಿಹಾಸಿಕ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ನಡೆದ ವಂದೇ ಮಾತರಂ ಸಮೂಹ ಗಾಯನದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್, ಮೈಸೂರು ವಿಭಾಗದ ಹಣಕಾರು ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪೃಥ್ವಿ ಎಸ್. ಹುಲ್ಲತ್ತಿ, ಮೈಸೂರು ವಿಭಾಗ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಆಚರಣೆಯ ಭಾಗವಾಗಿ, ವಿಭಾಗದಾದ್ಯಂತ ರೈಲು ನಿಲ್ದಾಣಗಳಲ್ಲಿ ವಂದೇ ಮಾತರಂ ನುಡಿಸಿದ್ದು ಗಮನ ಸೆಳೆಯಿತು. ಇದು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಗಳಲ್ಲಿ ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಭಾವನೆಯನ್ನು ಪ್ರೇರೇಪಿಸಿತು.
ಭಾರತದ ಸ್ವಾತಂತ್ರ, ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಕೇತಿಸುವ ಸಂಯೋಜನೆಯಾದ ವಂದೇ ಮಾತರಂನ 150 ವರ್ಷಗಳನ್ನು ಆಚರಿಸಲು ಭಾರತ ಸರ್ಕಾರ ಘೋಷಿಸಿದ ರಾಷ್ಟ್ರವ್ಯಾಪಿ ಆಚರಣೆಯ ಭಾಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಭಾರತದ ಏಕತೆ ಮತ್ತು ಮಾತೃಭೂಮಿಯ ಮೇಲಿನ ಭಕ್ತಿಯ ಸಂಕೇತವಾದ ವಂದೇ ಮಾತರಂನ ನಿರಂತರ ಮನೋಭಾವಕ್ಕೆ ಈ ಸ್ಮರಣಾರ್ಥವು ಹೃತ್ಪೂರ್ವಕ ಗೌರವವಾಗಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ರಾಷ್ಟ್ರದ ಶ್ರೀಮಂತ ಪರಂಪರೆಯನ್ನು ಎತ್ತಿಹಿಡಿಯುವ ಅವರ ದೇಶಭಕ್ತಿಯ ಉತ್ಸಾಹ ಮತ್ತು ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post