ಕಲ್ಪ ಮೀಡಿಯಾ ಹೌಸ್ | ಬಿಹಾರ |
ಬಿಹಾರ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳ #Bihara Assembly Election ಎಲ್ಲಾ ವರದಿಗಳಲ್ಲಿ ಉಲ್ಲೇಖಿಸಿದ್ದಕ್ಕೂ ಮೀರಿ ಬಿಜೆಪಿ ನೇತೃತ್ವದ ಎನ್’ಡಿಎ #NDA ಮೈತ್ರಿಕೂಟ ಭರ್ಜರಿ ಗೆಲುವಿನತ್ತ ಸಾಗುತ್ತಿದೆ.
12.30ರ ವೇಳೆಗೆ 243 ಕ್ಷೇತ್ರಗಳಲ್ಲಿ 194 ಕ್ಷೇತ್ರಗಳಲ್ಲಿ ಎನ್’ಡಿಎ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ #Mahaghatabandhan ಮೈತ್ರಿಕೂಟ 49 ಸ್ಥಾನಗಳಲ್ಲಷ್ಟೇ ಮುನ್ನಡೆಯಲ್ಲಿದೆ.

ಇನ್ನು, ಚುನಾವಣಾ ಚಾಣಕ್ಯ ಎಂದೇ ಬಿಂಬಿತವಾಗಿದ್ದ ಪ್ರಶಾಂತ್ ಕಿಶೋರ್ ನೇತೃತ್ವದ ಜೆಎಸ್’ಪಿ ಪಕ್ಷ ಒಂದು ಕ್ಷೇತ್ರದಲ್ಲೂ ಸಹ ಇಲ್ಲದೇ ಧೂಳಿಪಟವಾಗಿದ್ದಾರೆ. ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post