ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರದಿಂದ ರೈತರಿಗೆ ವಿಶೇಷವಾಗಿ ಶಕ್ತಿತುಂಬುವ ಕಾರ್ಯ ಆಗಿದ್ದು, ಪಿಎಂ ಕಿಸಾನ್, #PM Kisan ಫಸಲ್ ಭೀಮಾ ಯೋಜನೆಯ #Fasal Bhima Scheme ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP Raghavendra ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ 1,64,913 ರೈತರಿಗೆ 20 ಕಂತುಗಳಲ್ಲಿ 540 ಕೋಟಿ ರೂ. ಜಮಾ ಆಗಿದೆ. ಫಸಲ್ ಭೀಮಾ ಯೋಜನೆಯಡಿ ಕೃಷಿಬೆಳೆಗೆ 1,93,570 ರೈತರಿಗೆ 235 ಕೋಟಿ ರೂ. ಹಣ ಜಮಾ ಆಗಿದೆ. ತೋಟಗಾರಿಕಾ ಮತ್ತು ಹವಾಮಾನ ಆಧರಿತ ಬೆಳೆಗಳಿಗೆ ಬೆಳೆವಿಮೆ ಯೋಜನೆಯಲ್ಲಿ 2,49,837 ರೈತರಿಗೆ 620 ಕೋಟಿ ಜಮಾ ಆಗಿದೆ ಎಂದರು.

ಜಿಲ್ಲೆಯ 9366 ರೈತರಿಗೆ 5,58,46,000 ರೂ. ಜಮಾ ಆಗಿದ್ದು, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಭತ್ತ ಇನ್ನಿತರ ಕೃಷಿ ಬೆಳೆಗೆ 2023-2024ನೇ ಸಾಲಿನ ಬೆಳೆನಷ್ಟ ಪರಿಹಾರ, 13.5 ಕೋಟಿ ಈಗಾಗಲೇ ಮೂರು ತಿಂಗಳ ಕೆಳಗೆ ಜಮಾ ಆಗಿದೆ. ಈ ತಿಂಗಳ ಅಂತ್ಯದ ವೇಳೆಗೆ 2024-25ನೇ ಸಾಲಿನ ಹವಾಮಾನಾಧಾರಿತ ಬೆಳೆನಷ್ಟ 80 ರಿಂದ 95 ಸಾವಿರ ರೈತರಿಗೆ 180 ಕೋಟಿಯವರೆಗೆ ಪರಿಹಾರ ಬರುವ ನಿರೀಕ್ಷೆಯಿದ್ದು, ಈವರ್ಷ 60 ಸಾವಿರ ರೈತರಿಗೆ 1 ಲಕ್ಷ ಎಕರೆಗೆ ಅಡಿಕೆ ಬೆಳೆಹಾನಿ ಪರಿಹಾರ ಸಿಗಲಿದೆ. ಅಲ್ಲದೆ 3ಸಾವಿರ ಎಕರೆಯಲ್ಲಿ ಬೆಳೆದ ಶುಂಠಿ, ಮಾವು ಪರಿಹಾರ ಕೂಡ ರೈತರ ಖಾತೆಗೆ ಜಮಾ ಆಗಲಿದೆ ಎಂದರು.

ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಮತ್ತು ಬೆಳೆವಿಮೆ ಹಣ ಜಮಾ ಆಗಲಿದೆ ಎಂದ ಅವರು, ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತು ನಿನ್ನೆ ನಡೆದ ದುರ್ಘಟನೆಗೆ ಸರ್ಕಾರವೇ ಹೊಣೆ ಹೋರಬೇಕಾಗಿದೆ. ಬೇರೆ ರಾಜ್ಯಗಳಲ್ಲಿ ಇಲ್ಲದ ಕೇಂದ್ರದ ಖರೀದಿ ನಿಗಧಿತ ದರದ ಸಮಸ್ಯೆ ನಮ್ಮಲ್ಲಿ ಏಕೆ ಎಂಬುದು ತಿಳಿಯುತ್ತಿಲ್ಲ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣ ಎಂದರು.

ಸಾಗರದಲ್ಲಿ ಹೈವೆಗೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಆಗಿ 2ವರ್ಷ ಆಗಿದೆ. ಭೂಸ್ವಾಧೀನ ಪ್ರಕ್ರಿಯೆ ನಿಧಾನವಾಗುತ್ತಿದೆ. ಕೊಡಚಾದ್ರಿ ಮತ್ತು ಕೊಲ್ಲೂರು ನಡುವಿನ ಕೇಬಲ್ ಕಾರ್ ಯೋಜನೆಗೆ ಕೂಡ ಭೂಸ್ವಾಧೀನ ಪ್ರಕ್ರಿಯೆಯಿಂದ ಸ್ವಲ್ಪ ವಿಳಂಬವಾಗಿದೆ. ಹೆದ್ದಾರಿಗೆ ಸಂಬಂಧಿಸಿದಂತೆ ಎರಡು ಸೇತುವೆಗಳಿಗೂ ಕೂಡ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ಯೋಜನೆ ಕುಂಟುತ್ತಾ ಸಾಗಿದ್ದು, ಈ ಸಂಬಂಧ ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಫೆಬ್ರವರಿ ಅಂತ್ಯದವೇಳೆಗೆ ಎಲ್ಲವೂ ಬಗೆಹರಿಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ, ಪ್ರಮುಖರಾದ ಶಿವರಾಜ್, ಮಾಲತೇಶ್, ಸಿದ್ಲಿಂಗಪ್ಪ, ಕುಮಾರನಾಯ್ಕ, ಗಣೇಶ್ ಬಿಳಿಕಿ, ಬಳ್ಳೆಕೆರೆ ಸಂತೋಷ್, ರಾಜೇಶ್ ಕಾಮತ್, ಅಣ್ಣಪ್ಪ, ಚಂದ್ರಶೇಖರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post