ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಕಲೋತ್ಸವದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ರೊಟೇರಿಯನ್ ಹಾಗೂ ಇನ್ನರ್ ವೀಲ್ ಸದಸ್ಯನಿಯರಿಂದ ಕರೋನಾ ಬಗ್ಗೆ ಸಾರ್ವಜನಿಕರಿಗೆ ಹಾಗೂ ಸದಸ್ಯರಿಗೆ ಕಿರು ಪ್ರಹಸನದ ಮುಖಾಂತರ ಜಾಗೃತಿಯನ್ನು ಮೂಡಿಸಿ ಮಾಹಿತಿ ನೀಡಲಾಯಿತು.
ಈ ಕಿರು ಪ್ರಹಸನದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷ ನೆಪ್ಚೂನ್ ಕಿಶೋರ್, ಮಾಜಿ ಅಧ್ಯಕ್ಷ ಜಿ ವಿಜಯಕುಮಾರ್, ಡಾ. ಅರುಣ್, ಸುಮತಿ ಕುಮಾರಸ್ವಾಮಿ, ಅರುಣ್ ದೀಕ್ಷಿತ್, ಡಾ. ಅವಿನಾಶ್, ಬಿಂದು ವಿಜಯ ಕುಮಾರ್, ಡಾ. ಧನಂಜಯ ರಾಂಪುರ, ವೀಣಾ ಕಿಶೋರ್, ಗಿರಿಜಾ ರಾಂಪುರ ಹಾಗು ಮಕ್ಕಳು ಅಭಿನಯಸಿ ಅಪಾರ ಜನ ಮೆಚ್ಚುಗೆಗೆ ಪಾತ್ರರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post