ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ನಗರದಲ್ಲಿ ದೌರ್ಜನ್ಯ, ದರೋಡೆ, ಕೊಲೆ ಯತ್ನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇತ್ತೀಚೆಗೆ ಆರ್‍ಎಂಎಲ್ ನಗರದಲ್ಲಿ ಹರೀಶ್ ಎಂಬುವವರ ಮೇಲೆ ಮುಸಲ್ಮಾನ್ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ನ.20ರ ಸಂಜೆಯೊಳಗೆ ಬಂಧಿಸದಿದ್ದರೆ ನ.21ರಂದು ಎಸ್ಪಿ ಕಛೇರಿ ಮುಂದೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಧರಣಿ ನಡೆಸಲಿದೆ ಎಂದು ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ರಾತ್ರಿ 11ಗಂಟೆಗೆ ಆರ್‍ಎಂಎಲ್ ನಗರದಲ್ಲಿ ಹರೀಶ್ ಎಂಬ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆಮಾಡಿದ್ದು ಹಲ್ಲೆಗೂ ಮುನ್ನ ಯಾವ ಧರ್ಮ ಎಂದು ಕೇಳಿದ್ದಾರೆ. ಈ ಘಟನೆ ಪಹಲ್ಗಾಮ್ ಉಗ್ರರ ಘಟನೆಯನ್ನು ನೆನಪಿಸುತ್ತದೆ. ಸ್ಥಳೀಯ ಹಿಂದೂಗಳು ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಘಟನೆ ನಡೆದು ಮೂರು ದಿನಗಳಾದರೂ ಶಿವಮೊಗ್ಗ ಪೊಲೀಸ್ ಕಾರಣರಾದವರನ್ನು ಬಂಧಿಸಿಲ್ಲ. ವೀಡಿಯೋ ಸಾಕ್ಷ್ಯಿ ನೀಡಿದ್ದರೂ ನಿರ್ಲಕ್ಷ್ಯಧೋರಣೆ ತಳೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಾತ್ರೆ ಮಂಜಣ್ಣ, ಜಾದವ್, ರವಿ, ರಾಚಯ್ಯ, ಹರಿಗೆ ಶಿವು, ಬಾಲು, ಕುಬೇರಪ್ಪ, ಜಗದೀಶ್, ಶಶಿಕಲಾ, ರಾಜೇಶ್ವರಿ, ಅನಿತಾ, ಶಿವಾಜಿ, ಮುರುಗೇಶ್, ಟಾಕ್ರಾನಾಯ್ಕ, ಚಿದಾನಂದ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post