ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಭಾರತದ 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಜಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಹೋರಾಟ ಅವಿಸ್ಮರಣೀಯ. ಉತ್ತರ ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಲಕ್ಷ್ಮೀಬಾಯಿ ಮೊದಲಿಗರು . ಬ್ರಿಟಿಷರ ವಿರುದ್ಧ ಘರ್ಜಿಸಿದ ದಿಟ್ಟ ಮಹಿಳೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈಹಿಂದ್ ಪ್ರತಿಷ್ಠಾನ , ಋಗ್ವೇದಿ ಯೂಥ್ ಕ್ಲಬ್ ಹಾಗೂ ಯುವ ಸಂಘಟನೆಗಳ ಒಕ್ಕೂಟ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಜನ್ಮ ದಿನದಲ್ಲಿ ಮಾತನಾಡಿದರು.

ಯುವ ಸಂಘಟನೆ ಯ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡ ಮೋಳೆ ಮಾತನಾಡಿ ಆದರ್ಶ ಸ್ವಾತಂತ್ರ ಹೋರಾಟಗಾರ ರಾದ ರಾಣಿಯ ಇತಿಹಾಸ ಮಾದರಿ. ಯುವ ಪೀಳಿಗೆ ದೇಶ ಭಕ್ತಿ ಹೊಂದಬೇಕು. ರಾಷ್ಟ್ರೀಯ ವೀರರ ಇತಿಹಾಸ ಅರಿಯಬೇಕು ಎಂದರು.
ಝಾನ್ಸಿ ರಾಣಿ ಲಕ್ಷ್ಮಿಯ ಬಾಯಿಯವರ ಇತಿಹಾಸದ ಕತೆಗಳನ್ನು ತಿಳಿಸಲಾಯಿತು. ಋಗ್ವೇದಿ ಯೂತ್ ಕ್ಲಬ್ ಸದಸ್ಯರಾದ ಮಹೇಂದ್ರ, ಆದರ್ಶ, ರಕ್ಷಿತ್ ,ಸಂಜು, ಸೂರ್ಯ, ನಾಗೇಂದ್ರ, ಪ್ರಸಾದ್, ಶ್ರೀನಿವಾಸ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post