ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕೃಷಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳಲು ಹುರಿದುಂಬಿಸಿ ಹಾಗೂ ನಿಜವಾದ ಕಾರ್ಯಾನುಭವದ ಉದ್ದೇಶಗಳನ್ನು ತಿಳಿಸಿಕೊಟ್ಟು, ಹಳ್ಳಿಯ ಜೀವನವೇ ಸುಂದರ ಎಂದು ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿ ಎಸ್ ಸಿ ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕಲ್ಮನೆ ಗ್ರಾಮದಲ್ಲಿ ಕೃಷಿ ಮಾಹಿತಿ ಕೇಂದ್ರ ಹಾಗೂ ಕೈತೋಟವನ್ನು ಅತ್ಯಂತ ಸೃಜನಾತ್ಮಕವಾಗಿ ನಿರ್ಮಿಸಿ ಗ್ರಾಮಸ್ಥರ ಗಮನ ಸೆಳೆದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮದ ರೈತರ ಕೃಷಿ ಜ್ಞಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜೀವಂತ ಮಾದರಿಗಳಿಂದ ಹಿಡಿದು ಪರಿಣಾಮಕಾರಿ ಕೃಷಿ ವಿಧಾನಗಳವರೆಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಸುಂದರ ಕೇಂದ್ರವನ್ನು ನಿರ್ಮಿಸಿದ್ದಾರೆ.
ಕೈ ತೋಟದ ಉದ್ಘಾಟನೆಯನ್ನು ಡಾ. ಹೇಮ್ಲಾ ನಾಯ್ಕ್ ಶಿಕ್ಷಣ ನಿರ್ದೇಶಕರು ನೆರವೇರಿಸಿ ಈ ಕೈತೋಟದಿಂದ ಹಳ್ಳಿ ಜನರು ಪ್ರಾಯೋಗಿಕವಾಗಿ ವೀಕ್ಷಣೆ ಮಾಡಿ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಮಾಹಿತಿ ಕೇಂದ್ರದಲ್ಲಿ ಕೃಷಿಲೋಕವನ್ನೇ ಸೃಷ್ಟಿಸಿದ್ದಾರೆ ಅಲ್ಲಿಗೆ ಭೇಟಿ ನೀಡಿ ಅಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಹಿತಿ ಕೇಂದ್ರದ ಉದ್ಘಾಟನೆಯನ್ನು ಬಿ.ಕೆ. ಮಂಜಪ್ಪ ನಿವೃತ್ತ ಶಿಕ್ಷಕರು ನಡೆಸಿಕೊಟ್ಟು ನಮ್ಮ ಗ್ರಾಮದ ಕೃಷಿ ಮಕ್ಕಳು ಅತ್ಯಂತ ಉತ್ತಮವಾಗಿ ಕೆಲಸ ಮಾಡಿ ಕೃಷಿ ಲೋಕವನ್ನೇ ಸೃಷ್ಟಿಸಿದ್ದಾರೆ ಎಂದು ಹೇಳಿದರು.

ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ. ಕೆ ಎಸ್. ಶಶಿಧರ್, ಸಂಯೋಜಕರಾದ ಡಾ. ಸಹನಾ ಎಸ್ ಮತ್ತು ಸಹ ಸಂಯೋಜಕರಾದ ಡಾ. ಹೊನ್ನಪ್ಪ ಎಚ್ ಎಮ್, ಡಾ. ಕಿರಣ್ ಕುಮಾರ್, ಆರ್. ಪಾಟಿಲ್, ಡಾ. ನಿರಂಜನ್ ಕೆ ಎಸ್, ಡಾ. ಶೃತಿ ನಾಯಕ್, ಡಾ. ಪ್ರದೀಪ್ ಕುಮಾರ್ ಟಿ ಎಲ್, ಡಾ. ಸತೀಶ್ ಕೆ ಎಮ್. ಉಪಸ್ಥಿತರಿದ್ದರು.
ಗ್ರಾಮದ ಗಣ್ಯ ವ್ಯಕ್ತಿಗಳಾದ ಸುರೇಶ ಗುಡ್ಡಳ್ಳಿ ಸೊಸೈಟಿ ಅಧ್ಯಕ್ಷರು ಹಿತ್ತಲ, ಹಳ್ಳುರಪ್ಪ ಟಿ ಎಚ್, ಹಿತ್ತಲ ಸೊಸೈಟಿ ಸದಸ್ಯರು, ತೀರ್ಥಪ್ಪ ಹಾಲು ಉತ್ಪಾದಕರ ಸಂಘ ಸದಸ್ಯರು, ವೀರಪ್ಪಯ್ಯ, ಸುಧಾ ಉಮೇಶ್, ಗೀತಾ ಮಲ್ಲೇಶಪ್ಪ, ಶಶಿಧರ ಗ್ರಾಮ ಪಂಚಾಯತಿ ಸದಸ್ಯರು, ಕರಿಬಸಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷರು, ನಾಗರಾಜ್ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಊರಿನ ಮುಖಂಡರಾದ ನೇತ್ರಾನಂದ, ಭೀಮನಗೌಡ್ರು, ಕುಮಾರಸ್ವಾಮಿ, ನಾಗರಾಜ್ ಹಾಗೂ ಗ್ರಾಮದ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post