ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪಟ್ಟಣದ ಪ್ರತಿಷ್ಠಿತ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ #MartialArts ಕುರಿತಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರ್ಣ ಯಶಸ್ವಿಯಾಗಿ ನಡೆಯಿತು.
ಬ್ಲಾಕ್ ಬೆಲ್ಟ್ ಯುರೋಪಿಯನ್ ಚಾಂಪಿಯನ್ ಮೈಕ್ ಹೈಟೋನೇನ್, ಹಂಶಿ ಮೆಹಲ್ ವೊರ್ (ಫೌಂಡರ್ ಬಿಜೆಓಐ), ರೆಂಷಿ ಶಬ್ಬೀರ್ ಅಹಮ್ಮದ್ (ಕೋಚ್ ಬಿಜೆಓಐ ಶಿವಮೊಗ್ಗ) ಸೆನ್ಸ್ಯಿಿಪ್ರನ್ಶು ವೋರಾ (ಕೋಚ್ ಬಿ ಜೆ ಓ ಐ ಮುಂಬಯಿ) ಇವರುಗಳ ಜೊತೆ ಕುಮದ್ವತಿ ಕೇಂದ್ರೀಯ ವಸತಿ ಶಾಲೆ #KumadvatiCentralSchool ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ ಕುರಿತ ವಿಚಾರ ಸಂಕಿರ್ಣ ನಡೆಯಿತು.
ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ ಕುರಿತು ಮಾಹಿತಿ ಹಾಗೂ ತಮ್ಮ ಸಾಧನೆಗಳನ್ನು ಹಂಚಿಕೊಂಡಿದ್ದು, ಜೊತೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವೇದಿಕೆಯಲ್ಲಿ ಕೋ-ಅರ್ಡಿ’ನೇಟರ್ ಪ್ರಭು ಹಾಗೂ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಹಶಿಕ್ಷಕಿಯರಾದ ಮೋನಿಷಾ ವಂದಿಸಿ, ಐಶ್ವರ್ಯ ಸ್ವಾಗತಿಸಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post