ಅತ್ಯಂತ ಅಪರೂಪದ ‘ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ’ ಹೊಂದಿರುವ ರೋಗಿಗೆ ವಿಶ್ವದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ಮುಕುಂದಪುರದ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್. ತಂದೆ, ಮಗ ಇಬ್ಬರೂ ಒಂದೇ ಅಪರೂಪದ ಆನುವಂಶಿಕ ತೊಂದರೆ ಹೊಂದಿದ್ದರೂ ತಂದೆಯೇ ತನ್ನ ಮಗನಿಗೆ ಮೂತ್ರಪಿಂಡ ದಾನ ಮಾಡಿದ್ದು, ನಿಜಕ್ಕೂ ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದೆ. ವಿಶ್ವದಲ್ಲೇ ಈ ರೀತಿಯ ಮೊದಲ ಶಸ್ತ್ರಚಿಕಿತ್ಸೆಯಾಗಿದೆ.
ಕಲ್ಪ ಮೀಡಿಯಾ ಹೌಸ್ | ಕೋಲ್ಕತ್ತಾ |
ಮುಕುಂದಪುರ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ವೈದ್ಯರ ತಂಡವು ಅತ್ಯಂತ ಅಪರೂಪದ ಆನುವಂಶಿಕ ರಕ್ತಸ್ರಾವ ರೋಗವಾದ ‘ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ’ ಇದ್ದ ಭೂತಾನ್‌ನ ಯುವಕನೊಬ್ಬನಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿ ದಾಖಲೆ ಮಾಡಿದೆ. ಇದೊಂದು ವಿಶ್ವದಲ್ಲೇ ಮೊದಲ ಬಾರಿಗೆ ನಡೆದ ಅತ್ಯಂತ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ.
ಜಗತ್ತಿನಲ್ಲಿ ಕೇವಲ 50 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸುವ ಅತ್ಯಂತ ವಿರಳ ಸಮಸ್ಯೆಯಿಂದ ಆ ಯುವಕ ಬಳಲುತ್ತಿದ್ದ. ಇದುವರೆಗೆ ಜಗತ್ತಿನಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಇಂತಹ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರಲಿಲ್ಲ. ಆದರೆ ನಾರಾಯಣ ಹೆಲ್ತ್ #NarayanaHealth ಸಂಸ್ಥೆ ಈ ಮಹಾ ಸಾಧನೆ ಮಾಡಿ ತೋರಿಸಿದ್ದು, ಸಂಕೀರ್ಣ ಮತ್ತು ಅಪಾಯಕಾರಿ ಪ್ರಕರಣಗಳನ್ನು ನಿರ್ವಹಿಸುವಲ್ಲಿ ತಾನು ವಿಶ್ವಮಟ್ಟದ ಪರಿಣತಿ ಹೊಂದಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ರೋಗಿಗೆ ತಂದೆಯ ಹೊರತು ಬೇರೆ ಯಾರೂ ದಾನಿ ಆಗಲು ಸಾಧ್ಯವಿರಲಿಲ್ಲ. ಆದರೆ ತಂದೆಯೂ ಇದೇ ಅಪರೂಪದ ಆನುವಂಶಿಕ ತೊಂದರೆ ಹೊಂದಿದ್ದರು. ಇದರಿಂದ ಈ ಪ್ರಕರಣವು ವೈದ್ಯಕೀಯವಾಗಿ ಮತ್ತು ನೈತಿಕವಾಗಿ ಅತ್ಯಂತ ಸಂಕೀರ್ಣವಾಗಿತ್ತು ಮತ್ತು ಸವಾಲಿನದಾಗಿತ್ತು.
ಬಹುವಿಭಾಗೀಯ ತಂಡದ ದೀರ್ಘ ಚರ್ಚೆ, ಅಪಾಯ ಮೌಲ್ಯಮಾಪನದ ನಂತರ ಅತ್ಯಂತ ನಿಖರತೆಯೊಂದಿಗೆ ಈ ಅಪರೂಪದ #Surgery ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ದಾನಿ ಮತ್ತು ಸ್ವೀಕರಿಸುವವರು ಇಬ್ಬರೂ ಒಂದೇ ಆನುವಂಶಿಕ ತೊಂದರೆ ಹೊಂದಿದ್ದು ನಡೆದ ಜಗತ್ತಿನ ಮೊದಲ ಮೂತ್ರಪಿಂಡ ಕಸಿ #KidneyTransplant ಶಸ್ತ್ರಚಿಕಿತ್ಸೆ ಎಂಬ ಗೌರವಕ್ಕೆ ಈ ಪ್ರಕರಣವು ಪಾತ್ರವಾಗಿದೆ. ವಿಶೇಷವಾಗಿ ವೈದ್ಯಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸಾಧನೆ ಎಂಬ ದಾಖಲೆ ಬರೆದಿದೆ.

ಈ ಅಪರೂಪದ ರಕ್ತಸ್ರಾವ ತೊಂದರೆಯ ಕುರಿತು ಮಾತನಾಡಿದ ಮುಕುಂದಪುರ ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್ ನ ಹೆಮಟಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಶಿಶಿರ್ ಕುಮಾರ್ ಪಾತ್ರ ಅವರು, “ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ ಎಷ್ಟು ಅಪರೂಪ ಎಂದರೆ ಜಗತ್ತಿನಲ್ಲಿ ಸುಮಾರು 50 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಬರುತ್ತದೆ. ಇಂತಹ ಪ್ರಕರಣ ನಿರ್ವಹಣೆ ಅತ್ಯಂತ ಸೂಕ್ಷ್ಮವಾಗಿದೆ. ಫ್ಯಾಕ್ಟರ್ VII ಕಡಿಮೆಯಾದರೆ ಅತಿಯಾದ ರಕ್ತಸ್ರಾವ ಉಂಟಾಗಬಹುದು, ಮತ್ತೂ ಕಡಿಮೆಯಾದರೆ ಅಪಾಯಕಾರಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಬುದು. ನಾವು ನಿಮಿಷ ನಿಮಿಷಕ್ಕೂ ಅತ್ಯಂತ ಸಣ್ಣ ವಿಚಾರದಲ್ಲಿಯೂ ಸುರಕ್ಷತೆ ನೋಡಿಕೊಳ್ಳಬೇಕಿತ್ತು. ಈಗ ರೋಗಿ ಮತ್ತು ಅವರ ತಂದೆ ಇಬ್ಬರೂ ಚೆನ್ನಾಗಿರುವುದು ನೋಡಿ ತುಂಬಾ ಸಂತೋಷವಾಗುತ್ತಿದೆ” ಎಂದು ಹೇಳಿದರು.
ಶಸ್ತ್ರಚಿಕಿತ್ಸೆಯ ನಂತರವೂ ಬಹಳಷ್ಟು ಸವಾಲುಗಳಿದ್ದುವು. ರೋಗಿಗೆ ಸಣ್ಣ ರಕ್ತ ಹೆಪ್ಪುಗಟ್ಟುವಿಕೆಯಿಂದ ತಾತ್ಕಾಲಿಕ ಪಾರ್ಶ್ವವಾಯು ಬಂದಿತ್ತು. ಆದರೆ ನೆಫ್ರಾಲಜಿ, ನ್ಯೂರಾಲಜಿ ಮತ್ತು ಹೆಮಟಾಲಜಿ ತಂಡಗಳ ಸಂಯುಕ್ತ ಆರೈಕೆಯಲ್ಲಿ ರೋಗಿ ಪೂರ್ಣ ಚೇತರಿಕೆ ಕಂಡಿದ್ದಾರೆ. ಈಗ ಅವರ ಕ್ರಿಯೇಟಿನಿನ್ ಮಟ್ಟ ಸ್ಥಿರವಾಗಿದೆ ಮತ್ತು ಅವರು ಆರೋಗ್ಯಕರವಾಗಿ ಬದುಕುತ್ತಿದ್ದಾರೆ.
-ಡಾ. ಶಿಶಿರ್ ಕುಮಾರ್ ಪಾತ್ರ

ಇದಕ್ಕೆ ಪೂರಕವಾಗಿ ಮಾತನಾಡಿದ ನಾರಾಯಣ ಹೆಲ್ತ್ ನ ಗ್ರೂಪ್ ಸಿಓಓ ಶ್ರೀ ಆರ್. ವೆಂಕಟೇಶ್ ಅವರು, “ಅತ್ಯುನ್ನತ ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳುತ್ತಾ ವೈದ್ಯಕೀಯ ಸಾಮರ್ಥ್ಯದ ಗಡಿಯನ್ನು ಮೀರುವುದರ ಮೇಲೆ ನಾರಾಯಣ ಹೆಲ್ತ್ ನಂಬಿಕೆ ಇಟ್ಟಿದೆ. ಈ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆಯು ನಮ್ಮ ಬಹುವಿಭಾಗೀಯ ಸಹಯೋಗ, ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ಪದ್ಧತಿಗಳು ಮತ್ತು ಅದ್ಭುತವಾದ ಚಿಕಿತ್ಸಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ನಮ್ಮ ಮೇಲೆ ನಂಬಿಕೆ ಇಟ್ಟ ಕುಟುಂಬಕ್ಕೆ ಕೃತಜ್ಞತೆ” ಎಂದು ಹೇಳಿದರು.
ಈ ಪ್ರಕರಣವು ಈಗಾಗಲೇ ಭಾರತ ಮತ್ತು ವಿದೇಶಗಳ ವೈದ್ಯಕೀಯ ತಜ್ಞರ ಗಮನ ಸೆಳೆದಿರುವುದು ವಿಶೇಷವಾಗಿದೆ. ನಾರಾಯಣ ಆರ್‌ಎನ್ ಟಾಗೋರ್ ಹಾಸ್ಪಿಟಲ್, ಮುಕುಂದಪುರ, ಕೋಲ್ಕತ್ತಾ ಕುರಿತು ಕೋಲ್ಕತ್ತಾದ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್‌ನ ಮುಕುಂದಪುರದಲ್ಲಿರುವ 681 ಹಾಸಿಗೆಗಳ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜೆಸಿಐ ಮತ್ತು ಎನ್.ಎ.ಬಿ.ಎಚ್ ಮಾನ್ಯತೆ ಪಡೆದಿದೆ. ಹೃದಯ ವಿಜ್ಞಾನ (ಹೃದಯ ಕಸಿ ಸಹಿತ), ಮೂತ್ರಪಿಂಡ ವಿಜ್ಞಾನ (ಮೂತ್ರಪಿಂಡ ಕಸಿ ಸಹಿತ), ಜೀರ್ಣಾಂಗ ವಿಜ್ಞಾನ (ಯಕೃತ್ತು ಕಸಿ ಸಹಿತ), ನರವಿಜ್ಞಾನ, ಸಮಗ್ರ ಕ್ಯಾನ್ಸರ್ ಆರೈಕೆ, ಆರ್ಥೋಪೆಡಿಕ್ಸ್ ಮತ್ತು ಇತರ ವಿಶೇಷತೆಗಳಲ್ಲಿ ಪೂರ್ವ ಭಾರತದ ಅತ್ಯಂತ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post