ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾನವ ಜೀವನದ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ನೀಡುವ ಮಾರ್ಗದರ್ಶಿ ಎಂದರೆ ಅದು ಭಗವದ್ಗೀತೆಯೇ #bhagavadgita ಎಂದು ಭಜನಾ ಪರಿಷತ್ ಕಾರ್ಯದರ್ಶಿ ಶಬರೀಶ್ ಕಣ್ಣನ್ ಅಭಿಪ್ರಾಯಪಟ್ಟರು.
ನಗರದ ವಿನಾಯಕ ನಗರ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಗೀತಾ ಜಯಂತಿ #GeethaJayanthi ಆಚರಣೆ ಅಂಗವಾಗಿ ಗೀತಾಮೃತ ಸತ್ಸಂಗ, ಎಸ್’ಎವಿಸಿ ಟ್ರಸ್ಟ್ ಮತ್ತು ಕನ್ಯಕಾ ಮಹಿಳಾ ಸಂಘ ಇವರುಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಶ್ರೀ ಭಗವದ್ಗೀತಾ ಅಖಂಡ ಪಾರಾಯಣ ಯಜ್ಞದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬದಲಾವಣೆ ಜಗದ ನಿಯಮ, ನಡೆದದ್ದೆಲ್ಲ ಒಳ್ಳೆಯದೇ, ಏನಾಗುತ್ತದೆಯೋ ಅದು ಒಳ್ಳೆಯದೇ ಆಗಿರುತ್ತದೆ. ಎಲ್ಲವೂ ನಶ್ವರಃ, ಇದು ಜಗದ ನಿಯಮ ಎಂಬ ಪರಮ ಸತ್ಯವನ್ನು ಭಗವದ್ಗೀತೆ ನಮಗೆ ತಿಳಿಸುತ್ತದೆ ಎಂದರು.
ಮಾನವ ಜನ್ಮ ಪಡೆಯುವ ಮೊದಲು ಹಾಗೂ ಮರಣದ ನಂತರ ಮತ್ತು ಮನುಷ್ಯ ಬದುಕಿರುವವರೆಗೆ ಮಾಡಬೇಕಾದ ಸತ್ಕಾರ್ಯವನ್ನು ಹಾಗೂ ಮಾಡಲೇಬಾರದ ವಿಷಯವನ್ನು ಭಗವಂತ ನಮಗೆ ತಿಳಿಸುತ್ತಾನೆ. ತನ್ನ ದೈನಂದಿನ ಜೀವನದಲ್ಲಿ ವಿನಾಕಾರಣ ಚಿಂತೆಯಿAದ ಹೊರಬರಲು ಭಗವದ್ಗೀತೆ ಸಂದೇಶ ತುಂಬಾ ಪ್ರೇರಕವಾಗಿದೆ ಎಂದರು.
ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಕಾರ್ಯವ್ಯಗಳನ್ನು ಅರಿತು ನಿರ್ವಹಿಸಿ ಫಲದ ಬಗ್ಗೆ ಯೋಚಿಸದೆ ನಿಸ್ವಾರ್ಥವಾಗಿ ಕರ್ಮವನ್ನು ಮಾಡುವುದು ಮುಖ್ಯವಾಗಿರುತ್ತದೆ. ಮನುಷ್ಯನು ತನ್ನ ನಿಜ ಸ್ವರೂಪ ಹಾಗೂ ಭಗವಂತನ ನಿಜ ಸ್ವರೂಪವನ್ನು ಅರ್ಥ ಮಾಡಿಕೊಂಡು ಅಜ್ಞಾನ ಕತ್ತಲೆಯನ್ನು ದೂರ ಮಾಡಿ ಭಗವಂತನಲ್ಲಿ ಶರಣಾಗಿ ಮೋಕ್ಷವನ್ನು ಪಡೆಯುವುದೇ ಜೀವನದ ಪರಮ ಗುರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೆ ನಿರಂತವಾಗಿ ವಿವಿಧ ತಂಡಗಳ ಮಾತೆಯರು ಆಗಮಿಸಿ ಗೀತಾ ಪಾರಾಯಣವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಿದ್ದು ವಿಶೇಷವಾಗಿತ್ತು.
ಗೀತಾ ಸತ್ಸಂಗ ಬಳಗದ ಶಾರದಾ ಗೋಪಾಲ್, ಪುಷ್ಪಲತಾ, ದೇವಾಲಯ ಸಮಿತಿಯ ಅಧ್ಯಕ್ಷರಾದ ಅಶ್ವತ್ಥ್ ನಾರಾಯಣ ಶ್ರೇಷ್ಠಿ ಮತ್ತು ಅನೇಕರು ಮುಖ್ಯಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















