ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರತೀಯ ರೈಲ್ವೆಯ ಮೈಸೂರು ವಿಭಾಗದ #Indian Railway Mysore Division ವತಿಯಿಂದ ಮೈಸೂರು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವನ್ನು ಇತ್ತೀಚೆಗೆ ಆಚರಿಸಲಾಯಿತು.


ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕರಾದ ಶಮ್ಮಾಸ್ ಹಮೀದ್, ಜಡ್’ಆರ್ ಯುಸಿಸಿ ಮತ್ತು ಡಿಆರ್ ಯುಸಿಸಿ ಸದಸ್ಯರು, ಶಾಖಾ ಅಧಿಕಾರಿಗಳು, ಲಲಿತಾ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ರೈಲ್ವೇ ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.
ಮೈಸೂರು ನಿಲ್ದಾಣದ ಹಿನ್ನೆಲೆಯೇನು?
ಮೈಸೂರು ಮಹಾರಾಜರು, ರೈಲು ಸಂಪರ್ಕವನ್ನು ಆರ್ಥಿಕ ಅಭಿವೃದ್ಧಿಗೆ ಪ್ರಮುಖವೆಂದು ಪರಿಗಣಿಸಿ, ಮೈಸೂರು ಪ್ರಾಂತ್ಯದಲ್ಲಿ ರೈಲ್ವೇ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸಿದ್ದರು.
ಮಹಾರಾಜರ ಆಡಳಿತದಲ್ಲಿದ್ದ ಮೈಸೂರು ಸ್ಟೇಟ್ ರೈಲ್ವೇ 14 ಏಪ್ರಿಲ್ 1951 ರಂದು ಭಾರತೀಯ ರೈಲ್ವೆ ರಾಷ್ಟ್ರೀಕರಣದ ನಂತರ, ಭಾರತ ಸರಕಾರದ ಅಧೀನದ ದಕ್ಷಿಣ ರೈಲ್ವೇಗೆ ವಿಲೀನಗೊಂಡಿತು. 2003ರಲ್ಲಿ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೇ ವಲಯ ಸ್ಥಾಪನೆಯೊಂದಿಗೆ, ಮೈಸೂರು ವಿಭಾಗವು ಈ ಹೊಸ ವಲಯದ ಅವಿಭಾಜ್ಯ ಅಂಗವಾಯಿತು.

ಮೈಸೂರು ರೈಲು ನಿಲ್ದಾಣವು ಎನ್’ಎಸ್’ಜಿ-2 ವರ್ಗಕ್ಕೆ ಸೇರಿದ ನಿಲ್ದಾಣವಾಗಿದ್ದು, ಒಟ್ಟು ಆರು ಪ್ಲಾಟ್ ಫಾರ್ಮ್ ಹೊಂದಿದೆ. ದ್ವಿ ಸಾಪ್ತಾಹಿಕ, ತ್ರೈ ಸಾಪ್ತಾಹಿಕ ಮತ್ತು ಸಾಪ್ತಾಹಿಕ ಸೇವೆಗಳನ್ನು ಒಳಗೊಂಡಂತೆ 106 ರೈಲುಗಳು ಸಂಚರಿಸುತ್ತವೆ.
ಇವು ಮೈಸೂರು ನಗರಕ್ಕೆ ನವದೆಹಲಿ, ಹಾವ್ಡಾ, ಪಾಟ್ನಾ, ಮುಂಬೈ, ಕಾಚಿಗುಡ, ಚೆನ್ನೈ, ತಿರುವನಂತಪುರಂ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳು ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ.
ನಿಲ್ದಾಣದಲ್ಲಿ ದಿನಕ್ಕೆ ಸರಾಸರಿ 60,000 ಪ್ರಯಾಣಿಕರ ಸಂಚಾರವಿದ್ದು, ದಿನನಿತ್ಯ ಸುಮಾರು ರೂ. 21-25 ಲಕ್ಷಗಳಷ್ಟು ಆದಾಯವನ್ನು ಗಳಿಸುತ್ತದೆ. ಎಸ್ಕಲೆಟರ್’ಗಳು, ಲಿಫ್ಟ್’ಗಳು, ಅಂಡರ್‌ಪಾಸ್, ಪಾದಚಾರಿ ಮೇಲ್ಸೇತುವೆ, ವೈ-ಫೈ, ಕೋಚ್ ಸೂಚನಾ ಫಲಕಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ, ಆಹಾರ ಮಳಿಗೆಗಳು, ನಿರೀಕ್ಷಣಾ ಮಂದಿರಗಳು, ಬ್ಯಾಟರಿ ಚಾಲಿತ ವಾಹನಗಳು, ಎಟಿಎಂಗಳAತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ನಿಲ್ದಾಣವು ದಿವ್ಯಾಂಗಜನ ಸ್ನೇಹಿಯಾಗಿದೆ.
ಇನ್ನು ಪ್ರಮುಖವಾಗಿ, ಮೈಸೂರು ಜಂಕ್ಷನ್ ಪ್ರಸ್ತುತ ರೂ. 395.73 ಕೋಟಿಗಳ ಅಂದಾಜು ವೆಚ್ಚದಲ್ಲಿ ವಿಶ್ವಮಟ್ಟದ ನಿಲ್ದಾಣವಾಗಿ ಮರು ಅಭಿವೃದ್ಧಿಪಡಿಸಲಾಗುತ್ತದೆ.
ಈ ಅಭಿವೃದ್ಧಿಯು ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವಂತೆ ಹೊಸ ರೈಲುಗಳ ಚಾಲನೆ, ಹಾಲಿ ರೈಲುಗಳ ಸೇವೆಗಳ ಆವೃತ್ತಿ ಹೆಚ್ಚಿಸುವುದು ಹಾಗೂ ಹೊಸ ತಾಣಗಳಿಗೆ ಸಂಪರ್ಕ ಕಲ್ಪಿಸುವಂತೆ ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ಮೂರು ಹೊಸ ಪ್ಲಾಟ್ ಫಾರಂಗಳು, ನಾಲ್ಕು ಪಿಟ್ ಲೈನ್’ಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಸ್ಟೇಬ್ಲಿಂಗ್ ಲೈನ್’ಗಳನ್ನು ನಿರ್ಮಿಸುವ ಕಾರ್ಯ ಮಂಜೂರಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post