ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ರಿಯಾಲಿಟಿ ಷೋಗಾಗಿ ಡಿಸೆಂಬರ್ 14ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಬಸವೇಶ್ವರ ನಗರದ 3ನೇ ಕ್ರಾಸ್‌ನಲ್ಲಿರುವ ಆಕ್ಸ್ಫರ್ಡ್ ಇಂಗ್ಲಿಷ್ ಸ್ಕೂಲ್‌ನ ಆವರಣದಲ್ಲಿ ಆಡಿಷನ್ ನಡೆಯಲಿದೆ.
5ರಿಂದ 12 ವರ್ಷ ವಯೋಮಿತಿಯ ಮಕ್ಕಳು ಈ ಆಡಿಷನ್‌ನಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಮಕ್ಕಳು ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ #Gichi Giligili Juniors ರಿಯಾಲಿಟಿ ಷೋದಲ್ಲಿ ಜನಪ್ರಿಯ ಟಿವಿ ಕಲಾವಿದರೊಂದಿಗೆ ಪಾಲ್ಗೊಳ್ಳಬಹುದು. ಅವರಿಗೆ ಅತ್ಯುತ್ತಮ ತರಬೇತಿಯನ್ನೂ ನೀಡಲಾಗುತ್ತದೆ.
ಮಕ್ಕಳ ಸಂಭಾಷಣಾ ಸಾಮರ್ಥ್ಯ, ತಕ್ಷಣದ ಪ್ರತಿಕ್ರಿಯೆ, ಕಥೆ ಹೇಳುವ ಶೈಲಿ ಇತ್ಯಾದಿ ಅಂಶಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತದೆ. ಶಿವಮೊಗ್ಗದ ಆಡಿಷನ್‌ನಲ್ಲಿ ಆಯ್ಕೆಯಾದ ಮಕ್ಕಳಿಗೆ ಮುಂದಿನ ಹಂತಗಳ ಆಡಿಷನ್ಸ್ ಮತ್ತು ಅಂತಿಮ ಆಯ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
ಹೆಚ್ಚಿನ ವಿವರಗಳನ್ನು ಆಡಿಷನ್ ಸ್ಥಳದಲ್ಲಿ ನೀಡಲಾಗುವುದು. ಆಸಕ್ತ ಮಕ್ಕಳು ನಿಗದಿತ ದಿನಾಂಕದಂದು ಪೋಷಕರೊಂದಿಗೆ ಭಾವಚಿತ್ರ ಮತ್ತು (ಮಕ್ಕಳ ಮತ್ತು ಪೋಷಕರ) ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿ ಸಹಿತ ಆಡಿಷನ್‌ಗೆ ಹಾಜರಾಗಬೇಕು ಎಂದು ಕಲರ್ಸ್ ಕನ್ನಡ ವಾಹಿನಿಯ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















