ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈರುತ್ಯ ರೈಲ್ವೆ, #South Western Railway ಮೈಸೂರು ವಿಭಾಗವು ಆಲ್ ಇಂಡಿಯಾ ಪೆನ್ಷನ್ ನ್ಯಾಯಾಧಿವೇಶನ – 2025 #South Western Railway All India Pension Tribunal hearing ಅನ್ನು ಡಿ.15ರಂದು ಆಯೋಜಿಸಿದೆ.
ಅಂದು ಬೆಳಗ್ಗೆ 11 ಗಂಟೆಗೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿ, ಮೈಸೂನರಿಲ್ಲಿ ನಡೆಸಲಾಗುತ್ತದೆ.
ನ್ಯಾಯಾಧಿವೇಶನದಲ್ಲಿ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಎಲ್ಲಾ ರೈಲ್ವೆ ಪೆನ್ಷನರ್’ಗಳು, ಕುಟುಂಬದ ಪೆನ್ಷನರ್’ಗಳು ಮತ್ತು ಅವರ ಅವಲಂಬಿತರು ನ್ಯಾಯಾಧಿವೇಶನದಲ್ಲಿ ಭಾಗವಹಿಸಿ, ತಮ್ಮ ಯಾವುದೇ ಪೆನ್ಷನ್ ಸಂಬಂಧಿತ ಅಹವಾಲುಗಳ ಪರಿಶೀಲನೆ ಮತ್ತು ಪರಿಹಾರಕ್ಕಾಗಿ ಆಹ್ವಾನಿಸಲಾಗಿದೆ.
ಪೆನ್ಷನ್ ನ್ಯಾಯಾಧಿವೇಶನವು ಬಾಕಿ ಉಳಿದಿರುವ ಪೆನ್ಷನ್ ಸಂಬಂಧಿತ ಸಮಸ್ಯೆಗಳ ಸಮಯೋಚಿತ ಪರಿಹಾರ ಮತ್ತು ಪರಿಣಾಮಕಾರಿಯಾದ ಅಹವಾಲು ನಿವಾರಣೆ ಒದಗಿಸುವ ವಿಶೇಷ ವೇದಿಕೆಯಾಗಿದೆ.
ಪೆನ್ಷನರ್’ಗಳು ತಮ್ಮ ಪ್ರಕರಣಗಳ ತ್ವರಿತ ಪರಿಶೀಲನೆಗಾಗಿ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ನ್ಯಾಯಾಧಿವೇಶನಕ್ಕೆ ಹಾಜರಾಗಬಹುದು ಎಂದು ಇಲಾಖೆ ತಿಳಿಸಿದೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















