ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೈರುತ್ಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾಯೋಗಿಕ ಆಧಾರದ ಮೇಲೆ ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ ರೈಲನ್ನು ದೇವನೂರು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ನೀಡಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, 2025ರ ಡಿಸೆಂಬರ್ 15 ರಿಂದ 2026ರ ಮಾರ್ಚ್ 14 ರವರೆಗೆ ಮೂರು ತಿಂಗಳ ಅವಧಿಗೆ ದೇವನೂರು ನಿಲ್ದಾಣದಲ್ಲಿ 56519/56520 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಹೊಸಪೇಟೆ-ಕೆಎಸ್’ಆರ್ ಬೆಂಗಳೂರು ಪ್ಯಾಸೆಂಜರ್ ರೈಲುಗಳಿಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.

1. 56519 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ಹೊಸಪೇಟೆ ಪ್ಯಾಸೆಂಜರ್ ರೈಲು ದೇವನೂರು ನಿಲ್ದಾಣಕ್ಕೆ ಬೆಳಿಗ್ಗೆ 08:39 ಗಂಟೆಗೆ ಆಗಮಿಸಿ, 08:40 ಗಂಟೆಗೆ ನಿರ್ಗಮಿಸಲಿದೆ.
2. 56520 ಸಂಖ್ಯೆಯ ಹೊಸಪೇಟೆ-ಕೆಎಸ್’ಆರ್ ಬೆಂಗಳೂರು ಪ್ಯಾಸೆಂಜರ್ ರೈಲು ದೇವನೂರು ನಿಲ್ದಾಣಕ್ಕೆ ಸಂಜೆ 06:36 ಗಂಟೆಗೆ ಆಗಮಿಸಿ, 18:37 ಗಂಟೆಗೆ ನಿರ್ಗಮಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post