ಕಲ್ಪ ಮೀಡಿಯಾ ಹೌಸ್ | ಮೈಸೂರು |
ಅರಸೀಕೆರೆ, ಬೀರೂರು, ಚಿಕ್ಕಜಾಜೂರು ಹಾಗೂ ಹರಿಹರ ಯಾರ್ಡ್‌ಗಳಲ್ಲಿ ನಿರ್ವಹಣಾ ಕಾಮಗಾರಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಗರ್ಡರ್‌ಗಳ ಅಳವಡಿಕೆ ಮತ್ತು ತೆರವು ಕಾರ್ಯಕ್ಕಾಗಿ ಲೈನ್ ಬ್ಲಾಕ್ ಹಾಗೂ ವಿದ್ಯುತ್ ಬ್ಲಾಕ್ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳನ್ನು ನಿಯಂತ್ರಿಣ/ ಮರುನಿಗದಿಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ #South Western Railway ತಿಳಿಸಿದೆ.
ವಿವರಗಳು ಕೆಳಗಿನಂತಿವೆ:
- ರೈಲು ಸಂಖ್ಯೆ 07395 ಬಳ್ಳಾರಿ ಜಂಕ್ಷನ್ – ದಾವಣಗೆರೆ ಡೆಮು 29.12.2025 ರಿಂದ 01.01.2026 ಹಾಗೂ 03.01.2026 ರಂದು ಪ್ರಯಾಣ ಆರಂಭಿಸುವ ಈ ರೈಲು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.

- ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 29.12.2025 ರಿಂದ 01.01.2026 ಹಾಗೂ 03.01.2026 ರಿಂದ 07.01.2026 ರವರೆಗೆ ಪ್ರಯಾಣ ಆರಂಭಿಸುವ ಈ ರೈಲು ಮಾರ್ಗ ಮಧ್ಯೆ 90 ನಿಮಿಷ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 29.12.2025 ರಿಂದ 01.01.2026 ಹಾಗೂ 03.01.2026 ರಿಂದ 07.01.2026 ರವರೆಗೆ ಪ್ರಯಾಣ ಆರಂಭಿಸುವ ಈ ರೈಲು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 56272 ಚಿಕ್ಕಮಗಳೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 20.01.2026 ರಿಂದ 22.01.2026 ಹಾಗೂ 24.01.2026 ರಿಂದ 26.01.2026 ರವರೆಗೆ ಪ್ರಯಾಣ ಆರಂಭಿಸುವ ಈ ರೈಲು ಚಿಕ್ಕಮಗಳೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















