ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ #Kuvempu University ಸಿಂಡಿಕೇಟ್ ಸದಸ್ಯರಾಗಿ ಎನ್‌ಇಎಸ್ ಸಂಸ್ಥೆಯ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಚಿದಾನಂದ.ಎನ್.ಕೆ ಅವರನ್ನು ನಾಮನಿರ್ದೇಶನಗೊಳಿಸಿ ಕುಲಪತಿಗಳು ಆದೇಶಿಸಿದ್ದಾರೆ.
ಕುಲಪತಿಗಳಿಗೆ ಪ್ರದತ್ತವಾದ ಅಧಿಕಾರದನ್ವಯ, ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರ ಸೇವಾ ಜೇಷ್ಟತೆಯ ಆಧಾರದಲ್ಲಿ, ಒಂದು ವರ್ಷದ ಅವಧಿಗೆ ಡಾ.ಚಿದಾನಂದ.ಎನ್.ಕೆ ಅವರನ್ನು ಸಿಂಡಿಕೇಟ್ ಸದಸ್ಯರಾಗಿ ಅಧಿಸೂಚಿಸಲಾಗಿದೆ. ರಂಗಕರ್ಮಿಗಳಾದ ಚಿದಾನಂದ ರವರು, ಲೇಖಕರಾಗಿ, ವಾಗ್ಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಡಾ.ಚಿದಾನಂದ.ಎನ್.ಕೆ ರವರಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.




















