ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನ ಮುಟ್ಟಿ ಭಜಿಸಿ ಭಕ್ತಿಯಿಂದ ಭಗವಂತನನ್ನು ಕರೆದರೆ ನಾವಿದ್ದಲ್ಲಿಗೆ ಶ್ರೀಕೃಷ್ಣ #Shri Krishna ಬಂದು ನಿಲ್ಲುತ್ತಾನೆ ಎಂದು ಬಾಳಗಾರ ಮಠಾಧೀಶರಾದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಅವರು ಆಯನೂರು ಸಮೀಪದ ವೀರಗಾನ ಭೈರನಕೊಪ್ಪದ ಶ್ರೀ ರಾಮಚಾರ್ ಅವರು, ಸ್ವಗೃಹದಲ್ಲಿ ಆಯೋಜಿಸಿದ್ದ ಬೃಹತೀಸಹಸ್ರ ಯಾಗದ ಪೂರ್ಣಾಹುತಿ ಹಾಗೂ ಶ್ರೀ ಕೃಷ್ಣನಿಗೆ ಶತಾಧಿಕ ಕುಂಭಾಭಿಷೇಕ ಮಾಡಿದ ನಂತರದಲ್ಲಿ ಆಶೀರ್ವಚನ ನೀಡಿದರು.
ಒಂದಂಶದಲ್ಲಿ ಶ್ರೀ ಕೃಷ್ಣ ದ್ವಾರಕೆಯಲ್ಲಿ ಇದ್ದರೆ ಇನ್ನೊಂದು ಅಂಶದಲ್ಲಿ ಉಡುಪಿಯಲ್ಲಿ ಇರುವ ಕೃಷ್ಣ ಇದ್ದಾನೆ, ಸುಕೃತದ ಫಲವಾಗಿ ಮತ್ತೊಂದು ಅಂಶದಲ್ಲಿ ಇಲ್ಲಿ ನಿಂತಿದ್ದಾನೆ. ಗೃಹಸ್ಥರು ಮುಟ್ಟಿ ಪೂಜಿಸಿವ ಕಡಗೊಲು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸದ್ದಾರೆ. ಮಧ್ವಾಚಾರ್ಯರು ರಚಿಸಿದ ದ್ವಾದಶ ಸ್ತೋತ್ರದ ಮಹತ್ವವನ್ನು ತಿಳಿಸಿದರು.
ವಿದ್ಯುಕ್ತವಾಗಿ ಎರಡು ದಿನಗಳ ಕಾಲ ನಡೆದ ಈ ಯಾಗದಲ್ಲಿ ಶ್ರೀರಾಮಾಚಾರ್ಯರು, ಅವರ ಪತ್ನಿ ವಾರಿಜಾಕ್ಷಿ ದಂಪತಿಗಳು ಶ್ರೀಗಳ ಉಪಸ್ಥಿತಿಯಲ್ಲಿ ಬೃಹತಿ ಸಹಸ್ರ ಯಾಗದ ಪೂರ್ಣಾಹುತಿ ನೆರವೇರಿಸಿದರು.
ಯಾಗದ ಆಚಾರ್ಯತ್ವದ ನೇತೃತ್ಶ ವಹಿಸಿದ್ದ ವಿದ್ವಾನ್ ಆಯನೂರು ಶ್ರೀ ಮಧುಸೂದನಚಾರ್ಯರ ನಲವತ್ತನೆ ಬೃಹತಿ ಸಹಸ್ರ ಯಾಗ ಇದಾಗಿದ್ದು, ರಮೇಶ್ ಆಚಾರ್ಯ, ಕೃಷ್ಣಾಚಾರ್ಯ, ಸುಬ್ರಹ್ಮಣ್ಯ ಆಚಾರ್ಯರು ಹಾಗೂ ವಿಷ್ಣು ಆಚಾರ್ಯರು ಯಾಗದಲ್ಲಿ ಸಹಕರಿಸಿದರು,
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















