ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಮಾಚೇನಹಳ್ಳಿ ಬಳಿಯಲ್ಲಿ ಭೂಕುಸಿತ ಉಂಟಾಗಿರುವ ಕಾರಣ ಶಿವಮೊಗ್ಗ-ಭದ್ರಾವತಿ ನಡುವೆ ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಟಿಎಂಎಈಎಸ್ ಆರ್ಯುವೇದ ಕಾಲೇಜು ಮುಂಭಾಗ ಹಾದು ಹೋಗುವ ಶಿವಮೊಗ್ಗ – ಭದಾವತಿ ರಸ್ತೆಯ ಭೂಕುಸಿತ ಉಂಟಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಸ್ಥಳವನ್ನು ಸಂಬಂಧಪಟ್ಟ ಗುತ್ತಿಗೆದಾರರು, ಪೋಲಿಸ್ ಇಲಾಖೆಯವರು ಪರಿಶೀಲಿಸಿದ್ದು, ರಸ್ತೆಯ ಭೂಕುಸಿತದಿಂದ ಪ್ರಸ್ತುತ ಇರುವ ಸರ್ವಿಸ್ ರಸ್ತೆಗೆ ಅತಿಯಾಗಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶಕ್ಕೆ ಶಿಫಾರಸ್ಸು ಮಾಡಲಾಗಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳಂತೆ, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರಸ್ತೆ ಕಾಮಗಾರಿಯನ್ನು ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ or the Dictio the ಮೋಟಾರು ವಾಹನ ಕಾಯ್ದೆ 1988 ಕಲಂ 115 ರನ್ವಯ ಮೇಲ್ಕಂಡ ಕೋಷ್ಟಕದಲ್ಲಿ ವಿವರಿಸಿದಂತೆ ತಾತ್ಕಾಲಿಕವಾಗಿ -ಈ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಿದೆ.
ಮಾರ್ಗದ ವಿವರ – ಬಳಸಬೇಕಾದ ಪರ್ಯಾಯ ಮಾರ್ಗ
- ಮಾಚೇನಹಳ್ಳಿ ಗ್ರಾಮದ KMF Dairy | ಕಟ್ಟಡದ ಮುಂಬಾಗದ ಸರ್ವಿಸ್ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿರ್ಬಂಧಿಸುವುದು. ಶಿವಮೊಗ್ಗ-ಭದ್ರಾವತಿ-ತರೀಕರೆ-ಬೆಂಗಳೂರುಗಳಿಗೆ ಚಲಿಸುವ ಮತ್ತು ಭದ್ರಾವತಿ-ಶಿವಮೊಗ್ಗಕ್ಕೆ ಚಲಿಸುವ ಲಘು ವಾಹನಗಳಿಗೆ ಮಾತ್ರ ಸದರಿ ಸರ್ವಿಸ್ ರಸ್ತೆಯನ್ನು ಬಳಸುವುದು.
- ಮಾಚೇನಹಳ್ಳಿ ಗ್ರಾಮದ K.M.F Dairy ಕಟ್ಟಡದ ಮುಂಬಾಗದ ಸರ್ವಿಸ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ಕೂಡಲೇ ನಿರ್ಬಂಧಿಸುವುದು. ಶಿವಮೊಗ್ಗ-ಭದ್ರಾವತಿ-ತರೀಕೆರೆ-ಬೆಂಗಳೂರುಗಳಿಗೆ ಚಲಿಸುವ ಮತ್ತು ಭದ್ರಾವತಿ-ಶಿವಮೊಗ್ಗಕ್ಕೆ ಚಲಿಸುವ ಲಘು ವಾಹನಗಳಿಗೆ ಮಾತ್ರ ಸದರಿ ಸರ್ವಿಸ್ ರಸ್ತೆಯನ್ನು ಬಳಸುವುದು. ಬೆಂಗಳೂರು-ತರೀಕೆರೆ-ಭದ್ರಾವತಿ-ಶಿವಮೊಗ್ಗಕ್ಕೆ ಚಲಿಸುವ ಭಾರಿ ಗಾತ್ರದ ವಾಹನಗಳನ್ನು ಸಂಪೂರ್ಣವಾಗಿ ನಿರ್ಭಂದಿಸುವುದು.

- ಭದ್ರಾವತಿಯಿಂದ-ಶಿವಮೊಗ್ಗಕ್ಕೆ ಬರುವ ಭಾರಿ ಗಾತ್ರದ ವಾಹನಗಳು ಭದ್ರಾವತಿ-ಐಬಿ ವೃತ್ತದಿಂದ (ಮಿಲ್ಟಿ ಕ್ಯಾಂಪ್)-ಹಿರಿಯೂರು, ಹುಣೆಸೇಕಟ್ಟೆ ಜಂಕ್ಷನ್, ಲಕ್ಕಿನಕೊಪ್ಪ ಜಂಕ್ಷನ್- ಶಿವಮೊಗ್ಗ ವಿಮಾನ ನಿಲ್ದಾಣ ಮಾರ್ಗ- MRS ವೃತ್ತ
- ಭದ್ರಾವತಿಯಿಂದ-ಶಿವಮೊಗ್ಗಕ್ಕೆ ಬರುವ ಭಾರಿ ಗಾತ್ರದ ವಾಹನಗಳು ಭದ್ರಾವತಿ-ಐಬಿ ವೃತ್ತದಿಂದ (ಮಿಲ್ಟಿ ಕ್ಯಾಂಪ್)-ಹಿರಿಯೂರು, ಹುಣಸೇಕಟ್ಟೆ ಜಂಕ್ಷನ್, ಲಕ್ಕಿನಕೊಪ್ಪ ಜಂಕ್ಷನ್-ಶಿವಮೊಗ್ಗ ವಿಮಾನ ನಿಲ್ದಾಣ ಮಾರ್ಗ-MRS ವೃತ್ತ ಮಾರ್ಗವಾಗಿ ಚಲಿಸುವುದು.
- ಶಿವಮೊಗ್ಗದಿಂದ-ಭದ್ರಾವತಿಗೆ ಬರುವ ಭಾರಿ | ಗಾತ್ರದ ವಾಹನಗಳು MRS ವೃತ್ತ, ಶಿವಮೊಗ್ಗ ವಿಮಾನ ನಿಲ್ದಾಣ, ಲಕ್ಕಿನಕೊಪ್ಪ ಜಂಕ್ಷನ್, ಹುಣಸೇಕಟ್ಟೆ ಜಂಕ್ಷನ್, ಹಿರಿಯೂರು, ಭದ್ರಾವತಿ -ಐಬಿ ವೃತ್ತದಿಂದ | (ಮಿಲ್ಟಿ ಕ್ಯಾಂಪ್) ಮಾರ್ಗ

- ಶಿವಮೊಗ್ಗದಿಂದ-ಭದ್ರಾವತಿಗೆ ಬರುವ ಭಾರಿ ಗಾತ್ರದ ವಾಹನಗಳು MRS ವೃತ್ತ, ಶಿವಮೊಗ್ಗ ವಿಮಾನ ನಿಲ್ದಾಣ, ಲಕ್ಕಿನಕೊಪ್ಪ ಜಂಕ್ಷನ್, ಹುಣೆಸೇಕಟ್ಟೆ ಜಂಕ್ಷನ್, ಹಿರಿಯೂರು, ಭದ್ರಾವತಿ-ಐಬಿ ವೃತ್ತದಿಂದ (ಮಿಲ್ಟಿ ಕ್ಯಾಂಪ್) ಮಾರ್ಗವಾಗಿ ಚಲಿಸುವುದು.
- ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಲಘು ಗಾತ್ರದ ವಾಹನಗಳು ಭದ್ರಾವತಿ-ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆ, ಶಿವರಾಮ ನಗರ-ಮಾಚೇನಹಳ್ಳಿ | ಕೈಗಾರಿಕಾ ವಲಯ-ಮಲವಗೊಪ್ಪ- MRS | ವೃತ್ತ ಮಾರ್ಗ.
- ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುವ ಲಘು ಗಾತ್ರದ ವಾಹನಗಳು ಭದ್ರಾವತಿ-ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆ, ಶಿವರಾಮ ನಗರ-ಮಾಚೇನಹಳ್ಳಿ ಕೈಗಾರಿಕಾ ವಲಯ-ಮಲವಗೊಪ್ಪ-MRS ವೃತ್ತ ಮಾರ್ಗವಾಗಿ ಚಲಿಸುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















