ಕಲ್ಪ ಮೀಡಿಯಾ ಹೌಸ್ | ಮೈಸೂರು |
ರೈಲ್ವೆ ಕಾರ್ಯಾಚರಣಾ ಕಾರಣಗಳಿಂದಾಗಿ, ಪೂರ್ವ ಮಧ್ಯ ರೈಲ್ವೆಯು ಕೆಳಕಂಡ ರೈಲುಗಳ ನಿರ್ಗಮನ /ಆಗಮನ ಸಮಯಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ #IndianRailway ಮಾಹಿತಿ ನೀಡಿದ್ದು, ಒಟ್ಟಾರೆಯಾಗಿ ಮೂರು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಮದು ತಿಳಿಸಿದೆ.
12577 ಸಂಖ್ಯೆಯ ದರ್ಬಾಂಗ – ಮೈಸೂರು #Mysore ಎಕ್ಸ್’ಪ್ರೆಸ್ ದರ್ಬಾಂಗ ನಿಲ್ದಾಣದಿಂದ ಹೊರಡುವ ಸಮಯವನ್ನು 15:35 ಗಂಟೆಯಿಂದ 15:30 ಗಂಟೆಗೆ ಪರಿಷ್ಕರಿಸಲಾಗಿದೆ. ಈ ಬದಲಾವಣೆ 07 ಏಪ್ರಿಲ್ 2026ರಿಂದ ಅನ್ವಯವಾಗಲಿದೆ.
12578 ಸಂಖ್ಯೆಯ ಮೈಸೂರು – ದರ್ಬಾಂಗ ಎಕ್ಸ್’ಪ್ರೆಸ್ ದರ್ಬಾಂಗ ನಿಲ್ದಾಣಕ್ಕೆ ಆಗಮಿಸುವ ಸಮಯವನ್ನು 16:00 ಗಂಟೆಯಿಂದ 16:10 ಗಂಟೆಗೆ ಪರಿಷ್ಕರಿಸಲಾಗಿದೆ. ಈ ಬದಲಾವಣೆ 06 ಫೆಬ್ರವರಿ 2026ರಿಂದ ಅನ್ವಯವಾಗಲಿದೆ.
15227 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು – ಮುಜಾಫರ್ ಪುರ ಎಕ್ಸ್’ಪ್ರೆಸ್ ಮುಜಾಫರ್ ಪುರ ನಿಲ್ದಾಣಕ್ಕೆ ಆಗಮಿಸುವ ಸಮಯವನ್ನು 01:45 ಗಂಟೆಯಿಂದ 01:50 ಗಂಟೆಗೆ ಪರಿಷ್ಕರಿಸಲಾಗಿದೆ. ಈ ಬದಲಾವಣೆ 05 ಫೆಬ್ರವರಿ 2026ರಿಂದ ಅನ್ವಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















