ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮುಂಬರುವ ಹೋಳಿ ಹಾಗೂ ಬೇಸಿಗೆಯ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, 06281/06282 ಸಂಖ್ಯೆಯ ಮೈಸೂರು – ಅಜ್ಮೀರ್- ಮೈಸೂರು ಎಕ್ಸ್’ಪ್ರೆಸ್ ವಿಶೇಷ ರೈಲು #Mysore – Ajmer Mysore Express Special Train ಸೇವೆಯನ್ನು ಮುಂದುವರಿಸಲು ತೀರ್ಮಾನಿಸಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಈ ರೈಲು ಈಗಿನ ಮಾರ್ಗ, ನಿಲ್ದಾಣಗಳು, ಶುಲ್ಕ ವ್ಯವಸ್ಥೆ ಹಾಗೂ ಕೋಚ್ ಸಂಯೋಜನೆಯನ್ನು ಉಳಿಸಿಕೊಂಡು, ಪಶ್ಚಿಮ ರೈಲ್ವೇ ವ್ಯಾಪ್ತಿಯಲ್ಲಿ ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಒಟ್ಟು 17 ಹೆಚ್ಚುವರಿ ಪ್ರಯಾಣಗಳನ್ನು ನಡೆಸಲಿದೆ. ಜೊತೆಗೆ, ಈ ಸೇವೆಯನ್ನು ಉತ್ತರ ಪಶ್ಚಿಮ ರೈಲ್ವೆ ವ್ಯಾಪ್ತಿಯ ಅಜ್ಮೀರ್ನಿಂದ ಮರ್ಡಾ ಜಂ ಕ್ಷನ್’ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
06281 ಸಂಖ್ಯೆಯ ಮೈಸೂರು – ಮರ್ಡಾ ಜಂ ಕ್ಷನ್ ಎಕ್ಸ್’ಪ್ರೆಸ್ ವಿಶೇಷ, ಇದನ್ನು ಮೊದಲಿನಿಂದಲೇ 31.01.2026ರವರೆಗೆ ಸಂಚರಿಸಲು ಅಧಿಸೂಚಿಸಲಾಗಿದೆ. ಇದೀಗ 07, 14, 21 ಮತ್ತು 28 ಫೆಬ್ರವರಿ 2026; 07, 14, 21 ಮತ್ತು 28 ಮಾರ್ಚ್ 2026; 04, 11, 18 ಮತ್ತು 25 ಏಪ್ರಿಲ್ 2026; ಹಾಗೂ 02, 09, 16, 23 ಮತ್ತು 30 ಮೇ 2026 (ಶನಿವಾರಗಳು) ರಂದು ಸಂಚರಿಸಲು ವಿಸ್ತರಿಸಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ವಸಾಯಿ ರೋಡ್’ನಲ್ಲಿ 12.00/12.05 ಗಂಟೆಗೆ, ಸೂರತ್’ನಲ್ಲಿ 14.43/14.48 ಗಂಟೆಗೆ, ವಡೋದರ ಜಂ ಕ್ಷನ್’ನಲ್ಲಿ 16.20/16.25 ಗಂಟೆಗೆ, ರತ್ನಾಂ ಜಂ ಕ್ಷನ್’ನಲ್ಲಿ 20.00/20.10 ಗಂಟೆಗೆ, ಮಂದಸೋರ್’ನಲ್ಲಿ 21.25/21.27 ಗಂಟೆಗೆ, ನೀಮಚ್’ನಲ್ಲಿ 22.18/22.20 ಗಂಟೆಗೆ, ಚಿತ್ತೌರ್ಗಢ ಜಂ ಕ್ಷನ್’ನಲ್ಲಿ 00.05/00.10 ಗಂಟೆಗೆ, ಭಿಲ್ವಾರದಲ್ಲಿ 01.30/01.35 ಗಂಟೆಗೆ, ಬಿಜೈನಗರದಲ್ಲಿ 02.40/02.42 ಗಂಟೆಗೆ, ನಾಸಿರಾಬಾದ್’ನಲ್ಲಿ 03.34/03.36 ಗಂಟೆಗೆ ಮತ್ತು ಅಜ್ಮೀರ್ ಜಂಕ್ಷನ್’ನಲ್ಲಿ 04.15/04.25 ಗಂಟೆಗೆ ತಲುಪಿ ಹೊರಡಲಿದೆ, ಮತ್ತು ಮರ್ಡಾ ಜಂ ಕ್ಷನ್’ಗೆ ಬೆಳಿಗ್ಗೆ 05.00 ಗಂಟೆಗೆ ತಲುಪಲಿದೆ.
ಇನ್ನು, 06282 ಸಂಖ್ಯೆ ಮರ್ಡಾ ಜಂ ಕ್ಷನ್ – ಮೈಸೂರು ಎಕ್ಸ್’ಪ್ರೆಸ್ ವಿಶೇಷ, ಇದನ್ನು ಮೊದಲಿನಿಂದಲೇ 02.02.2026ರವರೆಗೆ ಸಂಚರಿಸಲು ಅಧಿಸೂಚಿಸಲಾಗಿದೆ. ಇದೀಗ 09, 16 ಮತ್ತು 23 ಫೆಬ್ರವರಿ 2026; 02, 09, 16, 23 ಮತ್ತು 30 ಮಾರ್ಚ್ 2026; 06, 13, 20 ಮತ್ತು 27 ಏಪ್ರಿಲ್ 2026; 04, 11, 18 ಮತ್ತು 25 ಮೇ 2026; ಹಾಗೂ 01 ಜೂನ್ 2026 (ಸೋಮವಾರಗಳು) ರಂದು ಸಂಚರಿಸಲು ವಿಸ್ತರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ಮರ್ಡಾ ಜಂಕ್ಷನ್’ನಿಂದ ಸಂಜೆ 18.20 ಗಂಟೆಗೆ ಹೊರಟು, ಅಜ್ಮೀರ್ ಜಂ ಕ್ಷನ್’ಗೆ18.40 ಗಂಟೆಗೆ ತಲುಪಿ 18.50 ಗಂಟೆಗೆ ಹೊರಡಲಿದೆ.
ನಂತರ ನಾಸಿರಾಬಾದ್ 19.36/19.38 ಗಂಟೆ, ಬಿಜೈನಗರ 20.20/20.22 ಗಂಟೆ, ಭಿಲ್ವಾರ 21.30/21.35 ಗಂಟೆ, ಚಿತ್ತೌರ್ಗಢ ಜಂ ಕ್ಷನ್ 23.35/23.45 ಗಂಟೆ, ನೀಮಚ್ 00.57/00.59 ಗಂಟೆ, ಮಂದಸೋರ್ 01.44/01.49 ಗಂಟೆ, ರತ್ನಾಂ ಜಂ ಕ್ಷನ್ 03.50/04.00 ಗಂಟೆ, ವಡೋದರ ಜಂ ಕ್ಷನ್ 07.40/07.50 ಗಂಟೆ, ಸೂರತ್ 10.05/10.10 ಗಂಟೆ ಮತ್ತು ವಸಾಯಿ ರೋಡ್ 13.20/13.25 ಗಂಟೆಗೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿ, ನಂತರ ಮೈಸೂರಿನತ್ತ ಮುಂದುವರೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















