ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಂಡು ನಿಲ್ದಾಣದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಏರ್ ಕನ್ಕೋರ್ಸ್ (ಭಾಗ-2) ಕಾಮಗಾರಿಗಳ ಹಿನ್ನೆಲೆ, ಕೆಳಗಿನ ರೈಲುಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ #Rerouting of trains ಮತ್ತು ನಿಯಂತ್ರಣಗೊಳ್ಳಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಬದಲಾದ ರೈಲು ಮಾರ್ಗಗಳ ಮಾಹಿತಿ ಹೀಗಿವೆ.
06269 ಸಂಖ್ಯೆಯ ಮೈಸೂರು-ಎಸ್’ಎಂವಿಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್, 17.02.2026 ರಿಂದ 16.03.2026ರವರೆಗೆ ತನ್ನ ನಿಯಮಿತ ಮಾರ್ಗವಾದ ಬೆಂಗಳೂರು ದಂಡು ನಿಲ್ದಾಣದಲ್ಲಿ ನಿಲುಗಡೆ ನೀಡದೇ, ಕೆಎಸ್’ಆರ್ ಬೆಂಗಳೂರು-ಯಶವAತಪುರ- ಬಾನಸವಾಡಿ -ಎಸ್’ಎಂವಿಟಿ ಬೆಂಗಳೂರು ಮಾರ್ಗದ ಮೂಲಕ ಸಂಚರಿಸಲಿದೆ.
06270 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್, 17.02.2026 ರಿಂದ 16.03.2026ರವರೆಗೆ ತನ್ನ ನಿಯಮಿತ ಮಾರ್ಗವಾದ ಬೆಂಗಳೂರು ದಂಡು ನಿಲ್ದಾಣದಲ್ಲಿ ನಿಲುಗಡೆ ನೀಡದೇ, ಎಸ್’ಎಂವಿಟಿ ಬೆಂಗಳೂರು- ಬಾನಸವಾಡಿ -ಯಶವಂತಪುರ-ಕೆಎಸ್‌ಆð ಬೆಂಗಳೂರು ಮಾರ್ಗದ ಮೂಲಕ ಸಂಚರಿಸಲಿದೆ.
ರೈಲು ಸಂಚಾರ ನಿಯಂತ್ರಣ
ರೈಲು ಸಂಖ್ಯೆ 16021 ಡಾ. ಎಂ.ಜಿ.ಆರ್ ಚೆನ್ನೆÊ ಸೆಂಟ್ರಲ್-ಅಶೋಕಪುರA ದೈನಂದಿನ ಎಕ್ಸ್’ಪ್ರೆಸ್, 17.02.2026 ರಿಂದ 19.02.2026ರವರೆಗೆ ಹಾಗೂ 03.03.2026 ಮತ್ತು 04.03.2026 ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















