ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಯಾಣಿಕರ ಅನುಕೂಲಕ್ಕಾಗಿ, ಬೆಂಗಳೂರು ವಿಭಾಗದ ಮೇಲೆ ನಾಯಂಡಹಳ್ಳಿ ನಿಲ್ದಾಣದಲ್ಲಿ ನಾಲ್ಕು ಜೋಡಿ ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ ಒದಗಿಸಲು ನಿರ್ಧರಿಸಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಪ್ರಾಯೋಗಿಕ ನಿಲುಗಡೆಯ ವಿವರಗಳು ಇಂತಿವೆ.
1. 17.02.2026 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 16215 ಮೈಸೂರು – ಕೆಎಸ್’ಆರ್ ಬೆಂಗಳೂರು ಚಾಮುಂಡಿ ಎಕ್ಸ್’ಪ್ರೆಸ್ ಬೆಳಿಗ್ಗೆ 08:45 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 08:46 ಕ್ಕೆ ಹೊರಡಲಿದೆ. ರೈಲು ಸಂಖ್ಯೆ 16216 #KSRBengaluru ಕೆಎಸ್’ಆರ್ ಬೆಂಗಳೂರು – ಮೈಸೂರು ಚಾಮುಂಡಿ ಎಕ್ಸ್’ಪ್ರೆಸ್ #ChamundiExpress ಸಂಜೆ 06:39 ಕ್ಕೆ ಆಗಮಿಸಿ 06:40 ಕ್ಕೆ ಹೊರಡಲಿದೆ.
2. 17.02.2026 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 17307 ಮೈಸೂರು – ಬಾಗಲಕೋಟೆ #Bagalkot ಬಸವ ಎಕ್ಸ್’ಪ್ರೆಸ್ ಮಧ್ಯಾಹ್ನ 03:16 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 03:17 ಕ್ಕೆ ಹೊರಡಲಿದೆ. 16.02.2026 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 17308 ಬಾಗಲಕೋಟೆ – ಮೈಸೂರು ಬಸವ ಎಕ್ಸ್’ಪ್ರೆಸ್ ಬೆಳಿಗ್ಗೆ 08:19 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 08:20 ಕ್ಕೆ ಹೊರಡಲಿದೆ.
3. 17.02.2026 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 16235 ಟುಟಿಕೋರಿನ್ – ಮೈಸೂರು ಎಕ್ಸ್’ಪ್ರೆಸ್ ಬೆಳಿಗ್ಗೆ 06:49 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 06:50 ಕ್ಕೆ ಹೊರಡಲಿದೆ. ರೈಲು ಸಂಖ್ಯೆ 16236 ಮೈಸೂರು – ಟುಟಿಕೋರಿನ್ ಎಕ್ಸ್’ಪ್ರೆಸ್ ರಾತ್ರಿ 08:14 ಕ್ಕೆ ಆಗಮಿಸಿ 08:15 ಕ್ಕೆ ಹೊರಡಲಿದೆ.
4. 17.02.2026 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 16535 ಮೈಸೂರು – ಪಂಢರಪುರ ಗೋಲ್ ಗುಂಬಜ್ ಎಕ್ಸ್’ಪ್ರೆಸ್ ಸಂಜೆ 05:40 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 05:41 ಕ್ಕೆ ಹೊರಡಲಿದೆ. ರೈಲು ಸಂಖ್ಯೆ 16536 ಪಂಢರಪುರ – ಮೈಸೂರು ಗೋಲ್ ಗುಂಬಜ್ ಎಕ್ಸ್’ಪ್ರೆಸ್ ಬೆಳಿಗ್ಗೆ 07:44 ಕ್ಕೆ ಆಗಮಿಸಿ ಬೆಳಿಗ್ಗೆ 07:45 ಕ್ಕೆ ಹೊರಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















