ಕಲ್ಪ ಮೀಡಿಯಾ ಹೌಸ್ | ಬೀರೂರು |
ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಮಹಿಳೆಯ ಮಾಂಗಲ್ಯ ಸರ #Mangalya Chain ಅಪಹರಿಸಿರುವ ಘಟನೆ ತಾಲೂಕಿನ ದೋಗಿಹಳ್ಳಿಯಲ್ಲಿ ನಡೆದಿದೆ.
ಬೈಕ್ ನಲ್ಲಿ ಅಂಗಡಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಸಿಗರೇಟ್ ಕೊಡುವಂತೆ ಅಂಗಡಿಯ ಮಾಲೀಕಳಾದ ಪದ್ಮಾವತಿ ಅವರ ಬಳಿ ಕೇಳಿದ್ದು, ಪದ್ಮಾವತಿ ಅವರು ಸಿಗರೇಟ್ ತೆಗೆಯಲು ತಿರುಗಿದಾಗ ಆಕೆಯ ಮಾಂಗಲ್ಯ ಸರದ ಅರ್ಧಭಾಗ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಪದ್ಮಾವತಿ ಅವರು ತಕ್ಷಣ ಕೂಗಿಕೊಂಡಿದ್ದು, ಬೈಕ್ ಅನ್ನು ಗ್ರಾಮಸ್ಥರು ಅಡ್ಡಗಟ್ಟಿದ ಪರಿಣಾಮ ಓರ್ವ ಆರೋಪಿ ಸಿಕ್ಕಿಬಿದ್ದು, ಮತ್ತೋರ್ವ ಪರಾರಿಯಾಗಿದ್ದಾರೆ.
ರಾಜಸ್ಥಾನ ಮೂಲದ ಬಾಬುಲಾಲ್ ಮತ್ತು ನಿತೇಶ್ ಮಾಂಗಲ್ಯ ಸರ ಅಪಹರಿಸಲು ಯತ್ನಿಸಿದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ನಿತೇಶ್ ಸಿಕ್ಕಿಬಿದ್ದು, ಬಾಬುಲಾಲ್ ಪರಾರಿಯಾಗಿದ್ದಾನೆ. ಗ್ರಾಮಸ್ಥರು ನಿತೇಶ್ ನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















