ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯ ಅನನ್ಯಾ ಶಾಸ್ತ್ರೀ (25) ಸಿವಿಲ್ ನ್ಯಾಯಾಧೀಶರಾಗಿ #CivilJudge (ನ್ಯಾಯಾಂಗ) ನೇಮಕಗೊಂಡಿದ್ದಾರೆ.
ಇವರು ಬಿಎಸ್ಸಿ ಪದವಿ ಪಡೆದ ಬಳಿಕ ಕಾನೂನು ಶಾಸ್ತ್ರ ವ್ಯಾಸಂಗ ಮಾಡಿದ್ದಾರೆ. ಇವರು ಉಮಾಕಾಂತ ಶಾಸ್ತ್ರೀ ಹಾಗೂ ಎಂ.ಎಲ್. ವಿಜಯಾ ಶಾಸ್ತ್ರೀ ಅವರ ಪುತ್ರಿ.
ಸಾಗರ #Sagar ತಾಲ್ಲೂಕು ಅರಳಗೋಡು ಸಮೀಪದ ಜೇಗಳ ಗ್ರಾಮದ ಸಮ್ಯಕ್ತ ಶಾಂತರಾಜ್ ಮುಪ್ಪಾನೆ (24) ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಇವರು ಶಾಂತರಾಜ್ ಮುಪ್ಪಾನೆ ಮತ್ತು ಪದ್ಮಶ್ರೀ ದಂಪತಿಗಳ ಪುತ್ರಿ. ತಂದೆ ಶಾಂತರಾಜ್ ಶಿವಮೊಗ್ಗದಲ್ಲಿ ಸರ್ಕಾರಿ ಅಭಿಯೋಜಕರಾಗಿ #GovernmentProsecutor ಕಾರ್ಯನಿರ್ವಹಿಸುತ್ತಿದ್ದಾರೆ.
ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪದ ಕಹಳೇಶ್ವರ ಗ್ರಾಮದ ರಕ್ಷಿತಾ (26) ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಇವರು ರೈತ ಸತ್ಯನಾರಾಯಣ, ನಾಗರತ್ನ ದಂಪತಿಯ ಪುತ್ರಿ. ಇವರು ರಿಪ್ಪನ್‌ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು ಬಳಿಕ ಶಿವಮೊಗ್ಗ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಪೂಣಗೊಳಿಸಿದ್ದರು.
ಶಿವಮೊಗ್ಗದ ವಕೀಲ ಗಿರೀಶ್ ಅವರ ಬಳಿ ಸಹಾಯಕ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















