ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿಗೆ ಸಮೀಪದ ಹೊಸೂಡಿಯಲ್ಲಿ ಫೆ.24ರಂದು ಆ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರಸ್ವಾಮಿ ದೇವರಿಗೆ ಶತರುದ್ರಾಭಿಷೇಕ ಮತ್ತು ರುದ್ರಹೋಮ ಏರ್ಪಡಿಸಲಾಗಿದೆ. ಮತ್ತು ಅದೇ ದಿನ ದೇವಾಲಯದ ಆವರಣದಲ್ಲಿರುವ ನಾಗ ದೇವತೆಗೆ ಪವಮಾನ ಅಭಿಷೇಕ, ಶ್ರೀ ಚೌಡೇಶ್ವರಿಗೆ ಪಂಚಾಮೃತ ಅಭಿಷೇಕ ಹಮ್ಮಿಕೊಳ್ಳಲಾಗಿದೆ.
ಶತರುದ್ರಾಭಿಷೇಕ #Shatharudrabhisheka ಮತ್ತು ರುದ್ರಹೋಮಕ್ಕೆ #Rudrahoma 200ರೂ., ಪವಮಾನ, ಪಂಚಾಮೃತ ಅಭಿಷೇಕಕ್ಕೆ ತಲಾ 100ರೂ. ಪಾವತೊಸಿ ಸೇವಾ ಚೀಟಿಯನ್ನು ಪಡೆಯಬೇಕು. ಸೇವೆಗೆ ರಸೀದಿ ಹಾಕಿಸಿದವರು ಅಂದು ಬೆಳಿಗ್ಗೆ 10-30ರ ಒಳಗೆ ದೇವಸ್ಥಾನದಲ್ಲಿ ಇರಬೇಕು ಎಂದು ತಿಳಿಸಲಾಗಿದೆ.
ಭಕ್ತಾದಿಗಳು ಸ್ವಾಮಿಯ ಶತರುದ್ರಾಭಿಷೇಕಕ್ಕೆ ಹಾಲು ಹೂ ಹಣ್ಣು, ಎಳನೀರು ಮತ್ತು ತೆಂಗಿನ ಕಾಯಿಗಳನ್ನು ಸಮರ್ಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















