ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಜ್ಞಾನ ವ್ಯವಸ್ಥೆಯ ಬಗ್ಗೆ ವಿಶೇಷ ಗಮನವನ್ನು ಹರಿಸುವುದರ ಜೊತೆಗೆ ಸ್ಥಳೀಯ ಸಂಸ್ಕೃತಿ, ಪರಂಪರೆಗೆ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಜಾಗೃತಿ ನೀಡುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ನ್ಯಾಕ್ ಕಛೇರಿಯ ಮಾಜಿ ಉಪ ಸಲಹೆಗಾರರು ಹಾಗೂ ತುಮಕೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಸ್. ಶ್ರೀನಿವಾಸ ನುಡಿದರು.
ಪಿಇಎಸ್ ಸಂಸ್ಥೆಗೆ ಭೇಟಿ ನೀಡಿದ್ದ ಅವರು, ನ್ಯಾಕ್‌ನ ಮಾನ್ಯತೆಯ ಕುರಿತಾಗಿ ಮಾರ್ಗದರ್ಶನ ನೀಡಿದರು.
ಸಂಶೋಧನೆಗಳ ಫಲಿತಗಳು ಹಾಗೂ ಅವುಗಳಿಂದ ಸಮಾಜದ ಮೇಲೆ ಬೀರಬಹುದಾದ ಪರಿಣಾಮ ಅಥವಾ ಉಪಯೋಗದ ಬಗ್ಗೆ ಸಂಶೋಧಕರು ಗಮನವನ್ನು ಹರಿಸಬೇಕು ಎಂದು ತಿಳಿಸಿದರು.
ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಮಾನ್ಯತೆ ನೀಡುವ ಸಂಸ್ಥೆಯಾದ ನ್ಯಾಕ್ ತನ್ನ ಮಾನ್ಯತೆಯ ಮಾನದಂಡಗಳನ್ನು ಮಾರ್ಪಾಡು ಮಾಡುತ್ತಿದ್ದು ಬೈನರಿ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆಯನ್ನು ನಡೆಸುತ್ತಿದೆ. ಆ ಮೂಲಕ ಸರಳವಾದ ಮೌಲ್ಯಮಾಪನದ ವಿಧಾನವನ್ನು ಅನುಸರಿಸಲು ಸಜ್ಜಾಗಿದೆ. ಸಂಸ್ಥೆಗಳ ಮೂಲಭೂತ ಗುಣಮಟ್ಟದ ಮಾನದಂಡಗಳನ್ನು ಪರಿಶೀಲಿಸುವುದರ ಮೂಲಕ ಮಾನ್ಯತೆಯನ್ನು ನೀಡಲಿದ್ದು ಅದರ ಹಂತಗಳ ಬಗ್ಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಪಿಇಎಸ್ ಟ್ರಸ್ಟ್‌ನ ಕುಲಸಚಿವರಾದ ಡಾ. ನಾಗರಾಜ, ಪಿಇಎಸ್ ಐಟಿಎಂನ ಉಪ ಪ್ರಾಚಾರ್ಯರಾದ ಡಾ. ಆರ್, ಸೇಖರ್, ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಕೇಶ್ ಎಂಕೆ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಓಂ ಪ್ರಕಾಶ್ ಯಾದವ್, ಪಿಇಎಸ್ ಐಎಎಮ್‌ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ ಜಿ ಎಂ, ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕರಾದ ಡಾ. ದಿಲೀಪ್ ಕುಮಾರ್ ಎಸ್ ಡಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ರೂಪ ಡಿ ಎಸ್, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮೋಹನ್ ಡಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಹೆಚ್ ಆರ್, ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಎನ್ ಪ್ರವೀಣ್ ಚಂದ್ರ, ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಧಿಕ ಎಂ, ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರವಿಕುಮಾರ್ ಜಿ ಬಿ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















