ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕೋವಿಡ್ #Covid ಬಳಿಕ ಈ ಹಿಂದೆ 60 ವರ್ಷಗಳ ಬಳಿಕ ಕಾಣಿಸುತ್ತಿದ್ದ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಈಗ 40ನೇ ವಯಸ್ಸಿಗೆ ಕಾಣಿಸಿಕೊಳ್ಳುತ್ತಿವೆ. ಹೃದಯ ಮತ್ತು ಮೆದುಳಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯ ಅವಶ್ಯವಿದೆ ಎಂದು ಖ್ಯಾತ ನರ ರೋಗ ತಜ್ಞ ಡಾ. ಸುಶ್ರುತ ಗೌಡ ತಿಳಿಸಿದ್ದಾರೆ.
ನಗರದ ಎಸ್ ಎಂ ಕೃಷ್ಣ ಮೆಮೋರಿಯಲ್ ನ್ಯೂರೋ ಝೋನ್ ಹಾಗು ಪ್ರಿಂಟ್ ಜರ್ನಲಿಸ್ಟ್ಸ್ ಆಫ್ ಮೈಸೂರು ಆಶ್ರಯದಲ್ಲಿ ನ್ಯೂ ಮೆಡ್ ಡಯಾಗ್ನಸ್ಟಿಕ್ಸ್ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಹಾಗು ಸಲಹಾ ಶಿಬಿರದಲ್ಲಿ ಅವರು ಮಾತನಾಡಿದರು.
“ಸಾಂಕ್ರಾಮಿಕ ಅಲ್ಲದ ಕಾಯಿಲೆಗಳು ಬಹು ವೇಗವಾಗಿ ಹಬ್ಬುತ್ತಿವೆ. ಅವುಗಳನ್ನು ಎದುರಿಸಬೇಕಾದರೆ ಸಮಾಜ ತನ್ನ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಿದೆ” ಎಂದು ಅವರು ಅಭಿಪ್ರಾಯಪಟ್ಟರು.
“ಬದುಕಿನ ಒತ್ತಡಗಳನ್ನು ನಿಭಾಯಿಸಲು ಉತ್ತಮ ಆರೋಗ್ಯ ಅಗತ್ಯ. ಕೋವಿಡ್ ಬಳಿಕ ಹಲವಾರು ಹೊಸ ಆರೋಗ್ಯ ಸವಾಲುಗಳು ಎದುರಾಗಿವೆ ಎಂದು ಅವರು ತಿಳಿಸಿದರು.
ನಿಯಮಿತ ತಪಾಸಣೆ ನಮ್ಮ ಆರೋಗ್ಯ ಸ್ಥಿತಿಗತಿ ತಿಳಿಯಲು ಸಹಕಾರಿ. ಉತ್ತಮ ಆರೋಗ್ಯಯುತ ಸಮಾಜ ನಿರ್ಮಾಣ ನಮ್ಮ ಗುರಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಆದಿತ್ಯ ಆಸ್ಪತ್ರೆಯ ಡಾ. ಎನ್ ಚಂದ್ರಶೇಖರ್ ಮಾತನಾಡಿ ಒಳ್ಳೆಯ ವ್ಯಕ್ತಿ- ಬದಲಾವಣೆಗಳನ್ನು ಸಮಾಜ ಬೆಂಬಲಿಸ ಬೇಕು ಎಂದರು.
ಹಿರಿಯ ಪತ್ರಕರ್ತರಾದ ಎಚ್.ಎಸ್. ದಿನೇಶ್ ಕುಮಾರ್, ಟಿ.ಆರ್. ಸತೀಶ್ ಕುಮಾರ್ ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















