ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಂಪ್ರತಿ ಜರುಗುವ ಜಾತ್ರಾ ಮಹೋತ್ಸವ ಎಪ್ರಿಲ್ 10ರಿಂದ 20ರವರೆಗೂ ನಡೆಯಲಿದೆ.
ಎಪ್ರಿಲ್ 10ರಿಂದ 20ರವರೆಗೂ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಎಪ್ರಿಲ್ 1ರಂದು ಗೊನೆ ಕಡಿಯುವ ಕಾರ್ಯ ನಡೆಯಲಿದೆ. ಅಂದು, ಬೆಳಿಗ್ಗೆ ಪ್ರಾರ್ಥನೆ, ಗಂಟೆ 9-15ರ ನಂತರದ ವೃಷಭ ಲಗ್ನದಲ್ಲಿ ಗೊನೆ ಕಡಿಯುವುದು, ಕೊಟ್ಟಿಬೆಟ್ಟು ಏಳ್ಳಾಡುಗುತ್ತುರವರಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಯಾವತ್ತು ಏನು ಕಾರ್ಯಕ್ರಮ?
- ಎಪ್ರಿಲ್ 10: ಬೆಳಿಗ್ಗೆ 9-30ರ ನಂತರ ವೃಷಭ ಲಗ್ನದಲ್ಲಿ ಧ್ವಜಾರೋಹಣ ನಡೆಯಲಿದ್ದು, ಕುರಿಯ ಮಾಡಾವು ಏಳ್ಳಾಡುಗುತ್ತುರವರಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ – ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು, ಶ್ರೀರಾಮ ಪೇಟೆ, ಕಾರ್ಚಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ಸವಾರಿ
- ಎಪ್ರಿಲ್ 11: ಅಧಿಕಾರಿ ಮತ್ತು ಸಿಬ್ಬಂದಿವರ್ಗ, ಕರಾರಸಾನಿ ಪುತ್ತೂರು ವಿಭಾಗದವರಿಂದ ಮಧ್ಯಾಹ್ನ ಅನ್ನಸಂತರ್ಪಣೆ. ರಾತ್ರಿ – ಉತ್ಸವ, ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಸವಾರಿ
- ಎಪ್ರಿಲ್ 12: ರಾತ್ರಿ – ಉತ್ಸವ, ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು ಏಳ್ಳಾಡುಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ ಸವಾರಿ
- ಎಪ್ರಿಲ್ 13: ರಾತ್ರಿ – ಉತ್ಸವ, ಪೇಟೆ ಸವಾರಿ, ಕೋರ್ಟ್ ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳ್ಳಾರುಬೈಲ್ ಸವಾರಿ
- ಎಪ್ರಿಲ್ 14: ಮಂಗಳವಾರ ಮೇಷ ಸಂಕ್ರಮಣ. ರಾತ್ರಿ – ಉತ್ಸವ, ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆ ಸವಾರಿ
- ಎಪ್ರಿಲ್ 15: ಸೌರಮಾನ ಯುಗಾದಿ(ವಿಷು) ಬೆಳಿಗ್ಗೆ – ಉತ್ಸವ, ವಸಂತಕಟ್ಟೆ ಪೂಜೆ. ರಾತ್ರಿ – ಉತ್ಸವ, ಬಂಡಿ ಉತ್ಸವ (ಚಂದ್ರಮಂಡಲ) ಬನ್ನೂರು, ಅಶೋಕನಗರ, ರೈಲ್ವೇ ಮಾರ್ಗ ಸವಾರಿ

- ಎಪ್ರಿಲ್ 16: ಬೆಳಿಗ್ಗೆ 8-30ರಿಂದ : ತುಲಾಭಾರ ಸೇವೆ. ರಾತ್ರಿ- ಉತ್ಸವ, ಬಲ್ನಾಡು ಶ್ರೀ ದಂಡನಾಯಕ – ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಾಲಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ
- ಎಪ್ರಿಲ್ 17: ಬೆಳಿಗ್ಗೆ – ಉತ್ಸವ, ವಸಂತ ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲುಕಾಣಿಕೆ, ಬ್ರಹ್ಮರಥ ದಾನಿ ದಿ| ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣಾರ್ಥ ಸಹೋದರಿ, ಸಹೋದರರು ಹಾಗೂ ಮಕ್ಕಳಿಂದ ಮಧ್ಯಾಹ್ನ ಅನ್ನಸಂತರ್ಪಣೆ. ರಾತ್ರಿ 7-30 ಗಂಟೆ ನಂತರ ಉತ್ಸವ. ಸಿಡಿಮದ್ದು (ಪುತ್ತೂರು ಬೆಡಿ) ಪ್ರದರ್ಶನ, ಬ್ರಹ್ಮರಥೋತ್ಸವ. ಬಂಗಾರ್ ಕಾಯರ್‌ಕಟ್ಟೆ ಸವಾರಿ, ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ
- ಎಪ್ರಿಲ್ 18: ಬೆಳಿಗ್ಗೆ ಗಂಟೆ 7-30ಕ್ಕೆ ಬಾಗಿಲು ತೆಗೆಯುವ ಮೂಹೂರ್ತ, ಬೆಳಿಗ್ಗೆ ಗಂಟೆ 8-30ರಿಂದ ತುಲಾಭಾರ ಸೇವೆ, ಸಂಜೆ 3-30ಕ್ಕೆ ವೀರಮಂಗಲ ಅವಭೃತ ಸ್ನಾನಕ್ಕೆ ಸವಾರಿ
- ಎಪ್ರಿಲ್ 19: ಬೆಳಿಗ್ಗೆ ಧ್ವಜಾವರೋಹಣ, ರಾತ್ರಿ ಚೂರ್ಣೋತ್ಸವ ವಸಂತ ಪೂಜೆ ಪ್ರಾರಂಭ, ಹುಲಿಭೂತ, ರಕ್ತೇಶ್ವರಿ ನೇಮ
- ಎಪ್ರಿಲ್ 20: ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಜಣತ್ತಾಯ, ಪಂಜುರ್ಲಿ, ವಗೈಸಿ ದೈವಗಳ ನೇಮ
ಭಕ್ತಾದಿಗಳಿಗೆ ವಿಶೇಷ ಮಾಹಿತಿ:
- ಪ್ರತಿದಿನ ಸಂಜೆ 5-00ಕ್ಕೆ ಬಲಿ ಹೊರಡುವುದು
- ಕಟ್ಟೆಯಲ್ಲಿ ಕಟ್ಟೆಪೂಜೆ ಮಾಡಿಸಿದ ಸೇವಾದಾರರಿಗೆ ಮಾತ್ರ ಪ್ರಸಾದ ವಿತರಣೆ
- ದೇವಳದಲ್ಲಿ ಕಟ್ಟೆಪೂಜೆ ಮಾಡಲಿಚ್ಚಿಸುವವರು 2026ರ ಎಪ್ರಿಲ್ 17ರ ಮುಂಚಿತವಾಗಿ ರಶೀದಿ ಮಾಡಿಸಬೇಕು.
- ಎಪ್ರಿಲ್ 18 ರಂದು ಹಿಂದೆ ನಡೆದುಕೊಂಡು ಬಂದ ಕಟ್ಟೆ ಪೂಜೆ ಮಾತ್ರ ನಡೆಯಲಿದೆ.
- ಎಪ್ರಿಲ್ 16 ಹಾಗೂ 18ರಂದು ಬೆಳಗ್ಗೆ 8.30ರ ನಂತರ ನಡೆಯುವ ತುಲಾಭಾರ ಸೇವೆಯನ್ನು ಮಾಡಲಿಚ್ಛಿಸುವವರು ದೇವಳದ ಕಚೇರಿಯಲ್ಲಿ ಮುಂಚಿತವಾಗಿ ವಿಚಾರಿಸಬೇಕು.

- ರಥದಲ್ಲಿ ಪ್ರಸಾದ ವಿತರಣೆ ಇರುವುದಿಲ್ಲ.
- ರಥದ ಬಳಿ ಹಣ್ಣುಕಾಯಿ ಸೇವೆಗೆ ಮತ್ತು ರಥಕಾಣಿಕೆ ಅರ್ಪಿಸಲು ವ್ಯವಸ್ಥೆ ಇರುತ್ತದೆ.
- ಅನ್ನದಾನಕ್ಕಾಗಿ ಹಸಿರು ಹೊರೆಕಾಣಿಕೆ ಸಲ್ಲಿಸುವವರು ಪ್ರತಿದಿನ ಅನ್ನದಾಸೋಹ ಭವನದಲ್ಲಿ ತಂದು ಒಪ್ಪಿಸಬಹುದು
- ಎಪ್ರಿಲ್ 14ರಂದು (ಮೇಷ ಮಾಸದ 30) ಪುನರ್ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಜರಗಲಿದೆ.
- ಭಕ್ತಾದಿಗಳು ರೂ. 50ಕ್ಕೆ ಮೇಲ್ಪಟ್ಟು ಮನಿ ಆಡರ್ರ ಮೂಲಕ ಹಣ ಕಳುಹಿಸಿದಲ್ಲಿ ದೇವಳದ ರಶೀದಿಯೊಂದಿಗೆ ಪ್ರಸಾದ ಕಳುಹಿಸಿ ಕೊಡಲಾಗುತ್ತದೆ ಎಂದು ದೇವಾಲಯದ ಆಹ್ವಾನ ಪತ್ರಿಕೆಯಲ್ಲಿ ನಮೂದಿಸಲಾಗಿದೆ.
ದೇವಾಲಯದ ವಿಳಾಸ:
ಕಾರ್ಯನಿರ್ವಹಣಾಧಿಕಾರಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು-574201 ದಕ್ಷಿಣ ಕನ್ನಡ
ದೇವಾಲಯದ ಎಸ್’ಬಿ ಖಾತೆ ಸಂಖ್ಯೆ: 01342200003335
ಕೆನರಾ ಬ್ಯಾಂಕ್, ಪುತ್ತೂರು.
ಐಎಫ್’ಎಸ್’ಸಿ: CNRB0010134
ಹೆಚ್ಚಿನ ಮಾಹಿತಿ ಹಾಗೂ ಸೇವೆಗಳಿಗಾಗಿ ದೇವಾಲಯದ ಆಡಳಿತ ಕಚೇರಿಯನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















