ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಪುತ್ತೂರಿನಿಂದ ಅರಸೀಕೆರೆ ನಗರಕ್ಕೆ ಕೆಎಸ್’ಆರ್’ಟಿಸಿ #KSRTC ನೇರ ಬಸ್ ಸಂಚಾರಕ್ಕೆ ಇಂದು ಚಾಲನೆ ನೀಡಲಾಯಿತು.
ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ #AshokKumarRai ಅವರು, ನಗರದಿಂದ ಜಾವಗಲ್’ಗೆ ನೇರ ಬಸ್ ಸಂಚಾರಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆಯಿತ್ತು. ಆದರೆ, ನೂತನ ಮಾರ್ಗದ ಪರಿಶೀಲನೆ ಹಾಗೂ ಸುಸಜ್ಜಿತ ಬಸ್ ನೀಡುವ ಉದ್ದೇಶದಿಂದ ನಡೆಸಿದ ಪ್ರಯತ್ನಗಳು ಫಲ ನೀಡಿದೆ ಎಂದರು.
Also Read: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷವಾಗಿದ್ದ ಕರಡಿ ಸೆರೆ | ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ
#Javagal ಜಾವಗಲ್’ನಲ್ಲಿರುವ ಮುಸಲ್ಮಾನರ ಪ್ರಾರ್ಥನಾ ಮಂದಿರಕ್ಕೆ ತೆರಳಲು ಅನುಕೂಲವಾಗುವಂತೆ ನೂತನ ಬಸ್ ಸಂಚಾರಕ್ಕೆ ಅಲ್ಪಸಂಖ್ಯಾತರು ಬಹಳ ವರ್ಷಗಳಿಂದ ಬೇಡಿಯಿಟ್ಟಿದ್ದರು. ಈಗ ಈ ಮಾರ್ಗದಲ್ಲಿ ಬಸ್ ಸಂಚಾರ ಅರಂಭಗೊಂಡಿದ್ದು, ಪ್ರಯಾಣಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿನಂತಿಸಿದರು.
ಜಾವಗಲ್ ಪ್ರಾರ್ಥನಾ ಮಂದಿರಕ್ಕೆ ತೆರಳುವವರು ಬೆಳಗ್ಗೆ ಪುತ್ತೂರಿನಿಂದ #Puttur ಹೊರಟು ಮಧ್ಯಾಹ್ನ ತಲುಪಿ, ಮತ್ತೆ ಆಕಡೆಯಿಂದ ಹೊರಟು ಸಂಜೆಯೊಳಗೆ ಪುತ್ತೂರಿಗೆ ಮರಳಬಹುದಾಗಿದೆ ಎಂದರು.
ಈ ಬಸ್ ಸಂಚಾರವನ್ನು ಒಂದು ಸಮುದಾಯಕ್ಕಾಗಿ ಆರಂಭಿಸಲಾಗಿದೆ ಎಂದು ಯಾರೂ ಭಾವಿಸುವುದು ಬೇಡ. ಈ ಮಾರ್ಗದ ಎಲ್ಲಾ ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಲಾಗಿದೆ. ಪ್ರಮುಖವಾಗಿ ಜಾವಗಲ್ ಪ್ರಾರ್ಥನಾ ಮಂದಿರಕ್ಕೆ ತೆರಳುವ ಮುಸಲ್ಮಾನ ಬಾಂಧರಿಗೆ ಇದು ಅನುಕೂಲವಾಗಿದೆ. ಮಾತ್ರವಲ್ಲ ಶಕ್ತಿ ಯೋಜನೆಗೆ ಇದು ಪೂರಕವಾಗಿದೆ ಎಂದರು.
ಪುತ್ತೂರು-ಅರಸೀಕೆರೆ ಬಸ್ ಸಮಯ?
ಪುತ್ತೂರಿನಿಂದ ಮುಂಜಾನೆ 8 ಗಂಟೆಗೆ ಹೊರಡುವ ಬಸ್ ಉಪ್ಪಿನಂಗಡಿ, ಸಕಲೇಶಪುರ, ಬೇಲೂರು, ಹಳೆಬೀಡು ಮಾರ್ಗವಾಗಿ 12.30ಕ್ಕೆ ಜಾವಗಲ್ ತಲುಪಿ, 1.30ಕ್ಕೆ ಅರಸೀಕೆರೆಗೆ ತಲುಪುತ್ತದೆ.
ಮತ್ತೆ ಮಧ್ಯಾಹ್ನ 1.45ಕ್ಕೆ ಹೊರಟು ಜಾವಗಲ್, ಹಳೆಬೀಡು, ಬೇಲೂರು, ಸಕಲೇಶಪುರ, ಉಪ್ಪಿನಂಗಡಿ ಮಾರ್ಗವಾಗಿ ಸಂಜೆ 7.15ಕ್ಕೆ ಪುತ್ತೂರು ತಲುಪುತ್ತದೆ.
ಪುತ್ತೂರಿನಲ್ಲಿ ಸಿಟಿ ಬಸ್ ಸಂಚಾರ?
ಇನ್ನು, ನಗರದಲ್ಲಿ ಸಿಟಿ ಬಸ್ ಸಂಚಾರ ಆರಂಭಿಸಬೇಕು ಎಂಬ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಆಟೋ ಚಾಲಕರಿಗೆ ತೊಂದರೆಯಾಗದಂತೆ ಅವರೊಂದಿಗೆ ಚರ್ಚೆ ನಡೆಸಿ, ಸಾಧಕ ಬಾಧಕಗಳನ್ನು ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಸಿಟಿ ಬಸ್ ಆರಂಭದಿಂದ ನಗರದ ವಿವಿಧ ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ, ಕೆಲಸಕ್ಕೆ ತೆರಳುವ ಸಾವಿರಾರು ಮಂದಿಗೆ ನಿತ್ಯ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯಲ್ಲಿ ವಿಚಾರ ಮಾಡಿ, ಎಲ್ಲರಿಗೂ ಉಪಯೋಗ ಆಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















