ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ: Poornachethana 21ನೇ ಶತಮಾನದ ಭಾರತೀಯ ಶಾಲೆಯ ವಿದ್ಯಾರ್ಥಿಗಳು ಗುರುವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ Union Minister Pradhan ಅವರನ್ನು ಭೇಟಿ ಮಾಡಿ, ತಾವೇ ಬರೆದು ಪ್ರಕಟಿಸಿರುವ “ಪಾಠ್ ಶಾಲಾ- ಜೀವನ್ ಯಾತ್ರಾ” Paat Shaala – Jeevan Yatra ಪುಸ್ತಕದ ಪ್ರತಿಯನ್ನು ಪ್ರದಾನ ಮಾಡಿದರು.
ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ತೋಶನ್, ಎಂಟನೇ ತರಗತಿ ವಿದ್ಯಾರ್ಥಿ ಮಹೇಶ್, 10ನೇ ತರಗತಿ ವಿದ್ಯಾರ್ಥಿಗಳಾದ ಸುಹಾಸ್ ಹಾಗು ಸುದಿತಿ ಸಚಿವರನ್ನು ಭೇಟಿ ಮಾಡಿ ಪುಸ್ತಕ ಪ್ರದಾನ ಮಾಡಿದರು.
ಶಾಲಾ ಮಕ್ಕಳೇ ಬರೆದಿರುವ 189 ಲೇಖನಗಳ ಗುಚ್ಚವಾದ ಈ ಪುಸ್ತಕವನ್ನು ಖ್ಯಾತ ಸಾಹಿತಿ ದಿ . ಎಸ್ ಎಲ್ ಭೈರಪ್ಪ ಅವರು ಬಿಡುಗಡೆ ಮಾಡಿದ್ದರು. ಶಾಲಾ ಮಕ್ಕಳು ತಮ್ಮ ಅನುಭವನ್ನು ಇಲ್ಲಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಈ ಹಿಂದೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Finance Minister Nirmala Sitaraman ಸೇರಿದಂತೆ ಹಲವಾರು ಗಣ್ಯರು ಈ ಪುಸ್ತಕದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದರು.
ಈ ಸಂದರ್ಭದಲ್ಲಿ ಮಕ್ಕಳು, ಸಚಿವರಿಗೆ ತಮ್ಮ ಶಾಲೆ, ಶಾಲೆಯಲ್ಲಿ 21ನೇ ಶತಮಾನದ ಭಾರತೀಯ ಕೌಶಲ್ಯ ಕಲಿಕೆ, ತಾವು ಪ್ರಕಟಿಸಿರುವ ಪುಸ್ತಕದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭಲ್ಲಿ ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್, ಶಾಲೆಯ ಚಟುವಟಿಕೆಗಳು, ರಾಷ್ಟ್ರೀಯ ಶಿಕ್ಷಣ ನೀತಿ ೨೦೨೨ಕ್ಕೆ ಪೂರಕವಾಗಿರುವುದು ಸ್ಪೂರ್ತಿದಾಯಕ ಎಂದು ತಿಳಿಸಿ, ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲೆಯ ಮುಖ್ಯ ಕಾರ್ಯ ನಿರ್ವಾಕಹ ಅಧಿಕಾರಿ ಬಿ ದರ್ಶನ್ ರಾಜ್ ಮಾತನಾಡಿ, ಸಚಿವರ ಪ್ರೋತ್ಸಾಹದ ನುಡಿ, ಮಕ್ಕಳಿಗೆ ಹೊಸ ಉತ್ಸಾಹ ತುಂಬಿತು. ಶಾಲೆಯ ಚಟುವಟಿಕೆಗಳು ಹಾಗು ಮುಂದಿನ ಯೋಜನೆಗಳ ಬಗ್ಗೆ ಈ ಸಂದರ್ಭದಲ್ಲಿ ಸಚಿವರಿಗೆ ವಿವರಿಸಲಾಯಿತು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















