ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಎನ್ ಎಸ್ ಎಸ್ ಎಂದರೆ ಅದು ಪ್ರೀತಿ, ತ್ಯಾಗ, ಸೌಹಾರ್ದತೆ, ಸಹಯೋಗವೇ ಶಿಬಿರದ ಮುಖ್ಯ ಉದ್ದೇಶ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯವು ಶಿಕಾರಿಪುರ ತಾಲ್ಲೂಕು ಇಟ್ಟಿಗೆಹಳ್ಳಿ ಗ್ರಾಮದಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡ ಎನ್ ಎಸ್ ಎಸ್ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಡಾ. ಶಿವಕುಮಾರ್ ಜಿ ಎಸ್., ಪ್ರಾಚಾರ್ಯರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆಢಳಿತ ಮಂಡಳಿಯ ಪ್ರತಿನಿಧಿಗಳು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಶಿಬಿರದ ನಿರ್ದೇಶಕರು ಮಾತನಾಡಿ, ಶಿಬಿರಾರ್ಥಿಗಳಲ್ಲಿ ಸರ್ವೋತ್ತಮ ಬೆಳವಣಿಗೆಗೆ ಪೂರಕವಾಗಿದೆ. ಇಲ್ಲಿ ವಿದ್ಯಾರ್ಥಿಗಳು ಕಷ್ಟಗಳನ್ನು ಸಹಿಸಿಕೊಂಡು ಬಿಸಿಲು, ಮಳೆಯಂತಹ ಸನ್ನಿವೇಶಗಳಲ್ಲಿ ಜನರು ಹಳ್ಳಿಯ ವಾತಾವರಣ, ಆರೋಗ್ಯ ಬೆಳವಣಿಗೆ ಉತ್ತಮವಾಗಿರಲು ಸಾಧ್ಯವಾಗಿರುವುದನ್ನು ನೆನಪಿಸಿದರು. ನಮ್ಮ ಶಿಬಿರ ಹಳ್ಳಿಯ ಜನರುಗಳಿಗೆ ಆರೋಗ್ಯ ಕಾಪಾಡಿಕೊಳ್ಳುವಿಕೆ, ವ್ಯಸನದಿಂ ಮುಕ್ತವಾಗುವಿಕೆ, ಅಗ್ನಿ ದುರಂತದಂತಹ ಕಾರ್ಯಕ್ರಮಗಳ ಬಗೆಗೆ ಅರಿವು ಮೂಡಿಸುವುದಾಗಿರುತ್ತದೆ. ಎನ್ ಎಸ್ ಎಸ್ ಶಿಬಿರದ ಮುಖ್ಯ ಸಾರಾಂಶ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡು ಸೌಹಾರ್ದತೆಯಿಂದ ಬದುಕುವ ಮನೋಭಾವವನ್ನು ಮೂಡಿಸುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳು ಹಾಗೂ ಕಾರ್ಯಕ್ರಮಾಧಿಕಾರಿ ರವಿಕುಮಾರ್ ಎನ್ ಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ನಯನ ಎಸ್ ಮತ್ತು ಸಂಗಡಿಗರು, ಎನ್ ಎಸ್ ಎಸ್ ಗೀತೆಯನ್ನು ಕೋಗಿಲೆ ಮತ್ತು ನೀಲಕಂಠ ತಂಡದ ಶಿಬಿರಾರ್ಥಿಗಳು ಹಾಡಿದರೆ, ಸ್ವಾಗತವನ್ನು ಡಾ. ದೇವರಾಜ ವೈ ಸಹಾಯಕ ಪ್ರಾಧ್ಯಾಪಕರು, ವಂದನೆಯನ್ನು ಡಾ.ವೀರೇಂದ್ರ ಕುಮಾರ ವಾಲಿ ಎಸ್, ಸಹಾಯಕ ಪ್ರಾಧ್ಯಾಪಕರು ಹಾಗೂ ಸಹ ಶಿಬಿರಾಧಿಕಾರಿ ನೆರವೇರಿಸಿದರೆ, ಕಾರ್ಯಕ್ರಮದ ನಿರೂಪಣೆಯನ್ನು ಸ್ವಾತಿ ಹೆಚ್ ಬಿ ಮತ್ತು ಪ್ರೇಮ ಚಮನಗೌಡ ಪಾಟೀಲ್ ಪ್ರಶಿಕ್ಷಣಾರ್ಥಿಗಳು ನೆರವೇರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
